ಕನಸು

ಕನಸು

ಬರಹ

ಕಾಣದದಾವುದೋ ಲೋಕದಿಂ ಬಂದಿಳಿದಂತೆ
ಅದಾರೋ ಎದೆಗೊರಗಿಸಿಕೊಂಡಂತೆ ಮತ್ತಾರೋ ಮೊಲೆಯೂಡಿಸಿದಂತೆ
ಮಲಗಿದ್ದಂತೆ ಆಡಿದಂತೆ ಬೆಳೆದಂತೆ
ನಡುವಲ್ಲಿ ಯಾರ್ಯಾರೋ ಬಂದು ಹೋದಂತೆ
ಹೋದವರಾರೆಂದು ತಿಳಿವ ಮುನ್ನವೇ
ಬಂದವರ ಎಣಿಕೆ ಸಿಗದೆ ಒದ್ದಾಡಿದಂತೆ
ಪ್ರೀತಿಗಾಗಿ ಹಂಬಲಿಸಿ ಅದು ಸಿಕ್ಕಂತೆ,
ಮತ್ತದಾವದೋ ಲೋಕದಿಂದ ಮತ್ತೊಬ್ಬರು ಇಳಿದಂತೆ
ಪ್ರೀತಿ ವಾತ್ಸಲ್ಯಗಳ ಸುರಿಮಳೆ ಸುರಿಸಿದಂತೆ
ಕೊನೆಗೊಮ್ಮೆ ಎಲ್ಲಾ ತೊರೆದು ಮಣ್ಣಾಗಿ ಮಲಗಿದಂತೆ
ಎಚ್ಚರವಾದಾಗ ಇದುವರೆಗೊ ನಡೆದುದೆಲ್ಲಾ ಕನಸೇ
ಈ ಕನಸಿಗಾಗಿ ಇಷ್ಟೆಲ್ಲಾ ನೆನಕೆಯೇ
ಎಂದು ನಗುತ್ತಾ ಮತ್ತೊಂದು ಕನಸಿಗೆ ಸಜ್ಜ್ಜಾಯಿತು ಆತ್ಮ