ಕನಸ ಕಂಗಳ ಬೆಡಗಿ
ಕವನ
ಹುಣ್ಣಿಮೆ ದಿನ ಹಾಲು ಬೆಳಕು
ಚೆಲ್ಲಿ ನಲಿತು ತಿಂಗಳು
ಹೆಣ್ಣಿನ ಮನದೊಳಗೆ ತುಂಬ
ಕೋಟಿ ಕನಸ ಕಣ್ಗಳು||
ಸೂರ್ಯ ಚಂದ್ರ ತಾರೆಗಳನು
ಹೊತ್ತ ಬಾನು ಚೆಂದವು
ಧೈರ್ಯದಿಂದ ಸಾಧಿಸಿದರೆ
ಚಂದ್ರಯಾನ ಸಾಧ್ಯವು ||
ಅಂದು ಕೊಂಡು ಮನಸಿನೊಳಗೆ
ಅಭ್ಯಾಸವನು ಮಾಡಲು
ಇಂದು ಇಸ್ರೋದಲ್ಲಿ ನುರಿತ
ವಿಜ್ಞಾನಿಯಲಿ ಒಬ್ಬಳು ||
ರಾಕೆಟಿನಲಿ ನಿತ್ಯ ಪಯಣ
ಸೂರ್ಯಚಂದ್ರ ಜತೆಯಲಿ
ರಾಣಿಯಾಗಿ ಗಗನವೆಲ್ಲ
ಸುತ್ತುತಿಹಳು ನಲಿವಲಿ ||
ತಂದೆ ತಾಯಿ ಮಗಳ ನೋಡಿ
ಹೆಮ್ಮೆಯನ್ನು ಪಟ್ಟರು
ಒಂದೇ ಎಂದು ಗಂಡು ಹೆಣ್ಣು
ಬೇಧ ಸಲದು ಎಂದರು ||
-ಶ್ರೀ ಈರಪ್ಪ ಬಿಜಲಿ
ಚಿತ್ರ್