ಕನಿಕರಿಸು ಈಶಾ
ಕವನ
ಸೇವಾ ಭಾಗ್ಯವ ಕರುಣಿಸೆಯಾ
ಕಾದಿರುವೇ ನಾ, ಜಗದೊಡೆಯಾ||ಪ||
ನಂಬಿ ಬಂದಿರುವೆ ನಿನ್ನಡಿಗೆ
ತಾಮಸ ಏತಕೆ ಓ ಪ್ರಭುವೆ
ಕಂದನ ಮೊರೆಯಾ ನೀ ಕೇಳು ದೇವಾ
ಒಲವಿಂದ ಬಂದೀಗ ಸಲಹೆಂದು ಬೇಡುವೆ||ಅ.ಪ.||
ಕೈಜೋಡಿ ಮುಂದೇ ನಿಂತಿರುವೆ
ನೀನೇಕೆ ನನ್ನಲಿ ಮುನಿದಿರುವೆ
ಈಶಾ ಪರಮೇಶಾ ಕನಿಕರಿಸು
ದುರಿತವ ತಕ್ಷಣ ಪರಿಹರಿಸು
ನಿನ್ನಯ ಪಾದ ನಂಬಿದೆ ದೇವಾ
ಮುಕ್ಕಣ್ಣ ಪಾಲಾಕ್ಷ ಗಿರಿಜೇಶ ಶಂಕರ||
-ಪೆರ್ಮುಖ ಸುಬ್ರಹ್ಮಣ್ಯ ಭಟ್
ಚಿತ್ರ್
