ಕನ್ನಡಕಂದಂ ಕನ್ನಡನುಡಿಗೆ ಬೆಱಗಾದಂ
ಬರಹ
ಕನ್ನಡಪೞನುಡಿಕಡಲೊಳ್
ಮುನ್ನಮೆ ಕಬ್ಬಿಗರಱಿಪಿದ ಕಬ್ಬಗಳಲೆಯೊಳ್
ರನ್ನಮನಱಸುವ ಪವಣೊಳ್
ಕನ್ನಡಕಂದಂ ಕರೆಯೆಡೆಯೊಳ್ ಬೆಱಗಾದಂ||
ಅದೆಂತೊಡೆ ಕನ್ನಡದೊಳ್ ಕವಿರಾಜಮಾರ್ಗಂ, ಪಂಪಭಾರತಂ, ಆದಿಪುರಾಣಂ, ಗದಾಯುದ್ಧಂ, ಅಭಿನವ ಪಂಪರಾಮಾಯಣಂ, ಶರಣರ ವಚನಂಗಳ್, ಕುಮಾರವ್ಯಾಸಭಾರತಂ, ತೊಱವೆ ರಾಮಾಯಣಂ, ದಾಸರ ಪದಂಗಳ್, ಜೈಮಿನಿ ಭಾರತಂ, ಭರತೇಶವೈಭವಂ ಪೇೞಲೊಂದೊ, ಎರಡೊ ಪಲ ಕಬ್ಬಂಗಳೊಳವು. ಇವನೆಲ್ಲಮನೋದುವುದೆಂದೊಡದೇನೆಮ್ಮಳವಿಗಾರ್ಪುದೇಂ? ನೋಡಿಮಿಲ್ಲಿ
ಪಂಪನ ಕಬ್ಬಮೊ ಶಾಂತಿಸಾಗರಂ ರನ್ನನದು ಅಟ್ಲಾಂಟಿಕ್ ಸಾಗರಂ
ಹಂಪೆಯ ಹರಿಹರನ ಕಾವ್ಯಮೊ ಮಂದಾನಿಲ ವಾತಂ
ಇಂಪನಾಳ್ದ ಗಾನಂ ಕುವರವ್ಯಾಸನ ಭಾರತಂ
ಸೊಂಪುಳ್ಳ ಕಾವ್ಯಮದು ಲಕುಮಿಪತಿಯ ಜೈಮಿನಿಭಾರತಂ
ಕಿಱಿದರೊಳೆ ಪಿರಿದರ್ಥಮಂ ಪೇಳ್ವುದು ಪಂಪನ ಪೆರ್ಗಳಿಕೆ. ರನ್ನನದು ಸಮುದ್ರದ ಭೋರ್ಗರೆತದ ಮಾತು.
ಒಂದೊ ಎರಡೊ ಎನಗಳವಲ್ಲಮಿದೆಂದು ಬೆಱಗಾದಂ ಕನ್ನಡಕಂದಂ. :)
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Comments
ಉ: ಕನ್ನಡಕಂದಂ ಕನ್ನಡನುಡಿಗೆ ಬೆಱಗಾದಂ