ಕನ್ನಡಕದ ಸ್ವಗತ

ಕನ್ನಡಕದ ಸ್ವಗತ

ಕವನ

ಎಲ್ಲಿ ಹೋದನು ನನ್ನ ಒಡೆಯನು

ಚಿಂತೆ ಮನದಲಿ ಕಾಡಿದೆ

ನಾನು ಅವನಿಗೆ ಲೋಕ ದರ್ಶಕ

ಅಳುತಲಿರುವನೆ ಕಾಣದೆ

 

ಬಹಳ ಒಳ್ಳೆಯ ಒಡೆಯನಾತನು

ಮೊಗದಿ ಸತತವು ಇರಿಸುವ

ಎರಡು ಕಿವಿಗಳು ನನ್ನ ವಶದಲಿ

ಅಧಿಕ ಗೌರವ ನೀಡುವ

 

ಕರುಣದಿಂದಲಿ ನಮ್ಮ ಸೇರಿಸಿ

ಎಲ್ಲಿ ಇರುವನೊ ಅರಿಯದು

ನಾನು ಇಲ್ಲದೆ ಕಾಣದವನಿಗೆ

ಹುಡುಕಿ ಪಡೆಯಲು ಆಗದು||

 

-ಪೆರ್ಮುಖ ಸುಬ್ರಹ್ಮಣ್ಯ ಭಟ್ 

ಚಿತ್ರ್