ಕನ್ನಡಕ್ಕೆ ಯಾಕೆ ಶಾಸ್ತ್ರಿಯ ಭಾಷೆ ಅನ್ನೋ ಸ್ಥಾನ ಸಿಗುತ್ತಿಲ್ಲ?

ಕನ್ನಡಕ್ಕೆ ಯಾಕೆ ಶಾಸ್ತ್ರಿಯ ಭಾಷೆ ಅನ್ನೋ ಸ್ಥಾನ ಸಿಗುತ್ತಿಲ್ಲ?

Comments

ಬರಹ

ನಮಸ್ಕಾರ,
actually ಕನ್ನಡಕ್ಕೆ ಸಿಗಬೇಕಾದ ಶಾಸ್ತ್ರಿಯ ಸ್ಥಾನಮಾನದ ಕುರಿತು ನಿಮ್ಮೊಂದಿಗೆ ಕೆಲವು ಮಾತುಗಳನ್ನ ಹಂಚಿಕೊಳ್ಳಬೇಕು ಅಂತ ಇದೀನಿ.
ಇವತ್ತಿನ ದಿನ ನಮ್ಮ ಭಾರತವನ್ನ ಒಂದು ಒಕ್ಕೂಟದ ವ್ಯವಸ್ಥೆ ಇರುವ ಒಂದು ದೇಶ ಹೌದಾ ಅನ್ನೋ ಅನುಮಾನ ಬರಲು ಶುರುವಾಗಿದೆ. ಪ್ರತಿಸಾರಿ ಇನ್ನೇನು ನಮ್ಮ ಕನ್ನಡಕ್ಕೆ ಶಾಸ್ತ್ರಿಯ ಭಾಷೆ ಸ್ಥಾನ ಸಿಕ್ತು ಅನೂ ಹೊತ್ತಿಗೆ ನಮ್ಮ ಪಕ್ಕದ ತಮಿಳುನಾಡು ಏನಾದ್ರೂ ಕ್ಯಾತೆ ತಗೆಯುತ್ತೆ, ಅರೆ ಕನ್ನಡಕ್ಕೆ ಸುಮಾರು ೨೫೦೦ ವರುಷಗಳ ಲಿಪಿಯ ಇತಿಹಾಸವಿದೆ, ಅದಕ್ಕೆ ಬೇಕಾದ ಎಲ್ಲ ಪುರಾವೆಗಳನ್ನು ಕೊಟ್ಟು ಇನ್ನೇನು ನಮಗೆ ಸ್ಥಾನ ಸಿಕ್ತು ಅನ್ನೋ ಹೊತ್ತಿಗೆ ನಮ್ಮ ನೆರೆ ರಾಜ್ಯದವರ ಹೊಸ ತಗಾದೆ ಏನು ಅಂದ್ರೆ ಶಾಸ್ತ್ರಿಯ ಭಾಷೆಯನ್ನ ನಿರ್ಧರಿಸುವ ಸಮಿತಿ ಸರಿಯಾಗಿಲ್ಲ ಅದನ್ನ ರದ್ದುಪಡಿಸಿ ಹೊಸ ಸಮಿತಿಯನ್ನ ರಚಿಸಿ ಅನ್ನೋ ಕಾರಣ. ಅರೆ ನಿಮಗೆ ಒಂದು ಮಾತು ಹೇಳ್ತೀನಿ ಇದೆ ತಮಿಳಿಗೆ ಶಾಸ್ತ್ರಿಯ ಭಾಷೆ ಸ್ಥಾನ ನೀಡುವಾಗ ಯಾವುದೇ ನಿಯಮಗಳಿರಲಿಲ್ಲ.ಡಿ.ಎಂ.ಕೆ ಪಕ್ಷ ಕೇಂದ್ರದ ಯು.ಪಿ.ಏ ಪಕ್ಷಕ್ಕೆ ಬೆಂಬಲ ನೀಡುವಾಗ ಅದು ಹಾಕಿದ ಕೆಲವು ಷರತ್ತುಗಳಲ್ಲಿ ತಮಿಳಿಗೆ ಶಾಸ್ತ್ರಿಯ ಭಾಷೆ ಪಟ್ಟ ಕೊಡಬೇಕು ಅನ್ನುವುದು ಆಗಿತ್ತು, ಅದು ಅವರ ರಾಜಕೀಯ ಹಿತಾಸಕ್ತಿ ಇಂದ ಆಗಿದ್ದು ಅಂದುಕೊಂಡು ಸುಮ್ಮನಾಗೆಬು ಅಸ್ಟೆ. ಆದ್ರೆ ಯಾವಾಗ ಕರ್ನಾಟಕ ಮತ್ತು ಆಂಧ್ರ ಪ್ರದೇಶದವರು ನಮಗೂ ಶಾಸ್ತ್ರಿಯ ಭಾಷೆ ಸ್ಥಾನ ನೀಡಿ ಅನ್ನೋದಕ್ಕೆ ಶುರು ಮಾಡಿದರೋ ಅವಾಗ್ಲೇ ತಮಿಳುನಾಡು ಕೇಂದ್ರದ ಮೇಲೆ ತನ್ನ ಒತ್ತಡ ಹಾಕಿ ಶಾಸ್ತ್ರಿಯ ಭಾಷೆಗೆ ಒಂದು ಸಮಿತಿಯನ್ನ ಮಾಡೋಕೆ ಹೇಳಿತು, ಕೋಲೆ ಬಸವನ ಹಾಗೆ ತಲೆ ಆಡಿಸಿದ ಕೇಂದ್ರ, ಸಮಿತಿಯನ್ನು ಮಾಡಿತು, ಮೊದಲಿಗೆ ೧೦೦೦ ವರ್ಷ ಅನ್ನೋ ಮಿತಿ ಇದ್ದದನ್ನು ೧೫೦೦ ವರ್ಷಕ್ಕೆ ಏರಿಸಿದರು, ಯಾವಾಗ ಎಲ್ಲ ಷರತ್ತುಗಳನ್ನು ನಮ್ಮ ಕನ್ನಡ ಭಾಷೆ ಪೂರಸಿತೋ ಆವಾಗಿನಿಂದ ಏನಾದ್ರೂ ಒಂದು ಕುಂಟು ನೆಪ ಹೇಳಿ ಕನ್ನಡಕ್ಕೆ ಶಾಸ್ತ್ರಿಯ ಭಾಷೆ ಪಟ್ಟ ಸಿಗಬಾರದು ಅಂತ ಹೊದೆದಾಡ್ತಾ ಇದೆ.
ಅದೆಲ್ಲ ಸರಿ ಕನ್ನಡಕ್ಕೆ ಶಾಸ್ತ್ರಿಯ ಭಾಷೆ ಅನ್ನೋ ಪಟ್ಟ ಏನಕ್ಕೆ ಬೇಕು ಅನ್ನೋ ಪ್ರಶ್ನೆ ನಿಮ್ಮದಾಗಿದ್ರೆ ಕೆಳಗೆ ಓದಿ,
೧)ಪ್ರತಿ ವರುಷ ಕೇಂದ್ರದಿಂದ ೧೦೦ ಕೋಟಿ ರೂ ಅನುದಾನ ಸಿಗುತ್ತದೆ. ಇದನ್ನ ಕನ್ನಡದ ಕೆಲಸಗಳಿಗೆ ಬಳಸಬಹುದು
೨)ಎಲ್ಲ ರಾಜ್ಯಗಳಲ್ಲೂ ಕನ್ನಡ ಅಧ್ಯಾಯನ ಪೀಠ ಸ್ಥಾಪನೆ ಆಗುತ್ತದೆ,ಇದರಿಂದ ಕನ್ನಡದ ಬಗ್ಗೆ ಸಂಶೋಧನೆ ಹಾಗು ಅಭಿವೃದ್ದಿಯ ಕಾರ್ಯಗಳು ಚುರುಕು ಗೊಳ್ಳುತ್ತವೆ
೩)ಶಾಸ್ತ್ರಿಯ ಭಾಷೆ ಅನ್ನೋ ಪಟ್ಟ ಭಾರತ ಸರಕಾರದ ಒಂದು ಮೊಹರು ಇದರಿಂದ ವಿದೇಶದಲ್ಲೂ ಕೂಡ ಕನ್ನಡ ಅಧ್ಯಾಯನ ಪೀಠ ಸ್ಥಾಪನೆ ಮಾಡಬಹುದು.
ಹೀಗೆ ಇನ್ನು ಹಲವು ಒಳ್ಳೆಯ ಕಾರ್ಯಕ್ರಮಗಳು ನಮಗೆ ಸಿಗುತ್ತವೆ,
ಈಗ ಯೋಚನೆ ಮಾಡಿ ಇವೆಲ್ಲ ಕೇವಲ ಒಂದು ಭಾಷೆಯ ಸ್ವತ್ತು ಆಗೋದು ಯಾವ ನ್ಯಾಯ, ನಮ್ಮ ಕನ್ನಡಕ್ಕೆ ತಿಮಿಳಿಗಿಂತ ಹಳೆಯದಾದ ಪ್ರಾಚೀನತೆ ಇದೆ, ಹಳೆಯ ಭಾಷ ಸಾಹಿತ್ಯವಿದೆ, ತಮಿಳಿನ ಮೊದಲ ಭಾಷ ಗ್ರಂಥದಲ್ಲಿ ಕನ್ನಡ ಪದಗಳನ್ನ ಬಳಕೆ ಮಾಡಲಾಗಿದೆ. ಇದೆಲ್ಲ ಗೊತ್ತಿದ್ರು ತಮಿಳು ನಾಡು ತನ್ನ ಧೂರ್ತತೆಯನ್ನ ಬಿಡುತ್ತಿಲ್ಲ.

ಇನ್ನು ನಮ್ಮ ಶಾಸಕ, ಸಂಸದರ ಬಗ್ಗೆ ಇಲ್ಲಿ ಮಾತನಾಡದೇ ಇರುವುದು ಒಳಿತು, ಅವರಿಂದ ಏನು ಆಗೋದಿಲ್ಲ ಅನ್ನೋದು ಈಗಾಗಲೇ ಸ್ಪಷ್ಟ. ಇನ್ನು ಕರ್ನಾಟಕ ರಕ್ಷಣಾ ವೇದಿಕೆ, ಕೆಲವು ಕನ್ನಡ ಪರಸಂಘಟನೆಗಳು ದನಿ ಎತ್ತುತ್ತಿವೆ, ಆದ್ರೆ ಅದನ್ನ ಕೇಂದ್ರಕ್ಕೆ ತಲುಪಿಸುವ ಕೆಲಸ ಆಗುತ್ತಿಲ್ಲ. ಅದ್ರು ಇನ್ನು ನಮ್ಮ ಜನತೆ ನಮಗೂ ಆ ಸ್ಥಾನ ಸಿಗುತ್ತೆ ಅನ್ನೋ ನಿರೀಕ್ಷೆಯಲ್ಲಿ ಕಾಯುತ್ತ ಕುಳಿತಿದ್ದಾರೆ.
ಎಲ್ಲದರಲ್ಲೂ ಕರ್ನಾಟಕಕ್ಕೆ ಅನ್ಯಾಯ ಆಗುತ್ತಿದೆ ಅನ್ನುವುದು ಗೊತ್ತಿರುವ ವಿಚಾರವೇ ಆದ್ರೆ ಎಷ್ಟು ಅಂತ ಸಹಿಸಿಕೊಳ್ಳುತ್ತ ಕೂತ್ಕೊಬೇಕು. "Every thing has its own tresh hold" ಅನ್ನೋ ತರ ಕನ್ನಡಿಗರಿಗೂ ಅದು ಇರತ್ತೆ ಅನ್ನೋದನ್ನ ಕೇಂದ್ರ ಅರ್ಥಮಾಡ್ಕೋ ಬೇಕು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet