ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ
ಭಾರತದ ಇತಿಹಾಸದಲ್ಲೇ ಸಾಮಾಜಿಕ ಜೀವನದಲ್ಲಿಮಿಳಿತವಾಗಿ ಕನ್ನಡ ಬೆಳೆದು ಬಂದಂತೆ ಬೇರಾವ ಭಾಷೆಯೂ ಬೆಳೆದಿರಲಾರದು.ರಾಜದಂಡದ ಭೀತಿಯಲ್ಲಿ ಬೆಳೆದುಬಂದ ಅನೇಕ ಭಾಷೆಗಳು ಕೂಚುಭಟ್ಟರ ತೊದಲಿನಲ್ಲಿ ಪರಮೋನ್ನತಿಯನ್ನು ಕಂಡಂತಿ ಕನ್ನಡ ತನ್ನ ಉನ್ನತಿಯನ್ನು ಕಾಣಲಿಲ್ಲ, ಜನಸಾಮಾನ್ಯರ ಭಾಷೆಯಾಗಿ, ಅವರ ಏರು ಇಳಿತದಲ್ಲಿ ಕಷ್ಟ-ಸುಖಗಳಲ್ಲಿ, ದುಃಖ-ದುಮ್ಮಾನದಲ್ಲಿ ಕರಗಿ ಕೊರಗಿ ಬೆಳೆದು ಘಟ್ಟಗಳಲ್ಲಿ ಬದಲಾಗುತ್ತಾ ಅತ್ಯಂತ ಸುಲಲಿತವೂ ಸಮೃದ್ದವೂ ಪ್ರಭುದ್ದವೂ ಆದ ಭಾಷೆಯಾಗಿಬೆಳೆದಿದೆ. ಈ ದಿನ ಕನ್ನಡ ಭಾಷೆಗೆ ಶಾಸ್ತ್ರೀಯ ಭಾಷೆ ಅನ್ನುವ ಗೌರವ ದೊರೆತಿದೆ. ಕನ್ನಡಿಗರ ಕನಸು ಹೋರಾಟ ಫಲಪ್ರದವಾಗಿದೆ.ದುಃಖದ ವಿಷಯವೆಂದರೆ, ಈ ಗೌರವವನ್ನು ನಾವು ಹೋರಾಡಿ ಪಡೆಯಬೇಕಾಯಿತು.ನಮ್ಮ ಹೋರಾಟದ ಢಮರು ನಿನಾದ ಸದಾ ದೆಲ್ಲಿಯ ತೊಘಲಿಕ್ಕರಿಗೆ ಎಚ್ಚರಿಕೆಯಾಗಿರಲಿ . ನಾವು ಯಾವುದೇ ಅನ್ಯಾಯವನ್ನು, ಭೇದೋಪಾಯವನು, ರಾಜಕೀಯ ವಶೀಲಿಕರಣವನ್ನು ಕಿಂಚಿತ್ತೂ ಸಹಿಸುವುದಿಲ್ಲ.ಈ ಸಂದರ್ಬದಲ್ಲಿ, ವಯೋವೃದ್ದರಾದರು ಕನ್ನಡದ ಕಿಚ್ಚಿನಲ್ಲಿ ಬೀದಿಗಿಳಿದು ಹೋರಾಡಿದ, ಡಾ. ದೇಜಗೌ ಅವರಿಂದ ಹಿಡಿದು, ಇತ್ತೀಚೆಗೆ ನ್ಯಾಯಾಲಯದ ಕಣಕ್ಕಿಳಿದ ದೀಪಕ್ ತಿಮ್ಮಯ್ಯನವರ ತನಕ ಎಲ್ಲರಿಗೂ,ಅಭಿನಂದದೆಗಳು. ನಮ್ಮೊಡನೆಯೇಇದ್ದು, ಕಾವೇರಿಯ ನೀರನ್ನು ಹೀರಿ ಕನ್ನಡದ ಹಿತಕಾಯದೇ ಕನ್ನಡದ ಸೌಲತ್ತನ್ನೆಲ್ಲಾ ಹೀರುತ್ತಿರುವ ಕಪ್ಪು ಕುರಿಗಳಿಗೆ ದಿಕ್ಕಾರ ಹೇಳೋಣ.
ಜೈ ಕರ್ನಾಟಕ ಮಾತೆ.
Comments
ಉ: ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ