ಕನ್ನಡತನ ವಿರಲಿ 2010

ಕನ್ನಡತನ ವಿರಲಿ 2010

ಕವನ


















ಹಚ್ಚಿರಿ ಮಸಿ


ಬಲಿತವರೆ ಕನ್ನಡದಲ್ಲಿ ತಪ್ಪದೇ ಯೋಚಿಸಿ


ಕನ್ನಡವನೇ ಮಾತಾಡಿ ಗಳೆಯರ ನಾಚಿಸಿ


ಅವರಿಗೆ ಆದರೆ ಏನಾದರೂ ಆದರೆ ಕಸಿವಿಸಿ


ಇಂಗ್ಲೀಷಿನಲ್ಲಿ ಮಾತಾಡಿ ಹಚ್ಚಿರಿ ಮುಖಕ್ಕೆ ಮಸಿ.


ಬಾಗಿಸು ಕತ್ತು


ಕನ್ನಡ ನುಡಿ ಆಗಲಿ ಓಡುವಾ ಕುದುರೆ


ಕನ್ನಡ ನಾಡ ಒಂದಾದರೂ ಬಾರಿ ಸುತ್ತು


ನಿರಭಿಮಾನವ ಎಸೆಯಿರಿ ನಿಮ್ಮಿಂದ ಕಿತ್ತು


ಕನ್ನಡ ಎಂದಾಗಲೆಲ್ಲಾ ಬಾಗಿಸು ನಿನ್ನ ಕತ್ತು


ಅನ್ನದ ನೆಲ


ನಿನಗೆ ಅನ್ನವ ಕೊಡುವುದು ಕನ್ನಡದ ನೆಲ


ಕನ್ನಡವೇ ಆಗಿದೆ ನೀನು ಹುಟ್ಟಿರುವ ಕುಲ


ಕನ್ನಡದಲ್ಲಿ ಮಾತಾಡಿ ನಗುತಾ ಗಲಗಲ


ಕನ್ನಡಮ್ಮನ ಮುಖವ ಅರಳಿಸಿ ಊರಗಲ


ಕನ್ನಡದ ಅನ್ನ


ನೀನು ತಿನ್ನುತ್ತಿರುವುದು ಕನ್ನಡದ ಅನ್ನ


ಕನ್ನಡದಲ್ಲೇ ಮಾತಾಡಿದರೆ ಬಲು ಚೆನ್ನ


ನೀನು ಬೇರೆ ಭಾಷೆಯ ಮಾತಾಡುವ ಮುನ್ನ


ನಿರ್ಧರಿಸಿ ಆಗಬೇಕೆಂದು ಸದಾ ಕನ್ನಡದ ಚಿನ್ನ


ನಾಡಿಯ ನುಡಿ


ಅಮ್ಮ ಎನ್ನುವ ಮಗುವಿನ ತೊದಲು ನುಡಿ


ಮಾತಾಡಿದ್ದು ಆಗ ಅದರ ತಾಯಿಯ ನಾಡಿ


ಶಾಲೆಗೆ ಕಳುಹಿಸಿ ನಾಡಿಯ ಬದಲಿಸ ಬೇಡಿ


ಮಗುವ ಕೊಲ್ಲದಿರಿ ತಾಯಿಯಿಂದ ಹೊರದೂಡಿ.


ಅವ್ಯಕ್ತ ಬೇಡಿಕೆ


ಹೃದಯಕ್ಕೆ ಸದಾ ಹೋಗಿ ಬರುತ್ತೆ ಕನ್ನಡ ರಕ್ತ


ಅದು ಕನ್ನಡದಲ್ಲೇ ಓಡಾಡಿದರೆ ಬಲು ಸೂಕ್ತ


ಕನ್ನಡದ ಮಗುವಿನ ಬೇಡಿಕೆ ಸದಾ ಅವ್ಯಕ್ತ


ನಿಮ್ಮ ಮಗುವ ಮಾಡಿ ಇಂಗ್ಲೀಷಿನಿಂದ ಮುಕ್ತ.


ಮಗುವ ಯಾತನೆ


ಮಗು ಕನ್ನಡದಲ್ಲೇ ಮಾಡುತ್ತದೆ ಯೋಚನೆ


ಇಂಗ್ಲೀಷ್ ಶಾಲೆಯಲ್ಲಿ ಅನುಭವಿಸುತ್ತೆ ಯಾತನೆ


ಮಗುವಿಗೆ ತಾಯಿಯೊಡನೆ ಇಲ್ಲದೆ ಸ್ಪಂದನೆ


ಬೆಳೆದ ಮೇಲೆ ಕೇಳಲೊಲ್ಲದು ತಾಯಿಯ ಯಾತನೆ


ತೊಟ್ಟಿಲ ತೂಗು


ನಿಮ್ಮದlಲ್ಲ ಅದು ಈ ಕನ್ನಡ ನಾಡಿನ ಮಗು


ಓ ತಾಯಿ ಮಗುವ ಕನ್ನಡದ ತೊಟ್ಟಿಲಲ್ಲಿ ತೂಗು


ಕಿವಿಯಲ್ಲಿ ಕನ್ನಡದ ವೀರ ಪರಂಪರೆಯ ಕೂಗು


ಮಗುವಿಗೆ ಹೇಳು ಕನ್ನಡಕ್ಕೇ ತಲೆಯ ಬಾಗು


ಸರಿಹೋದ


ಬೆಂಗಳೂರಲ್ಲಿ ನೀವಂದರೆ ಕನ್ನಡದವ ಸರಿಹೋದ


ಗುಲ್ಬರ್ಗದವ ತೀಳಿಯುತ್ತಾನೆ ಅವ ಸತ್ತು ಹೋದ !


ಮಗುವಿಗೆ ಪರಿಚಯಿಸಿರಿ ಕನ್ನಡದ ಸಮಗ್ರ ಪದ


ಅಹುದು ತಾಯಿ, ಬೇಡುವೆನು ಮುಟ್ಟಿ ನಿನ್ನ ಪಾದ.


ಕನ್ನಡ ಹುಮ್ಮಸ್ಸು


ಕನ್ನಡದಲ್ಲಿ ಯೋಚಿಸುತ್ತೆ ಮಗುವಿನ ಮನಸ್ಸು


ಕಲಿಯಲು ತುಡಿಯುತ್ತೆ ಅದು ಕನ್ನಡದ ಛಂದಸ್ಸು


ಕಲಿಸಲು ಹೆತ್ತ ತಾಯಿಗೆ ಇರಬೇಕು ಹುಮ್ಮಸ್ಸು


ಬೇಡ ತಾಯಿ ಮಗುವಿಗೆ ಒಗ್ಗದ ಟಸ್ಸು ಪುಸ್ಸು


 























ಕನ್ನಡ ಕಣ್ಮಣಿ


ಪ್ರೀತಿಯಲ್ಲಿ ನೇವರಿಸಿ ಹುಟ್ಟಿದಾ ಮಗುವಿನ ತಲೆ


ಓದಿಸಲು ನೀವು ಸೇರಿಸಿರಿ ಕನ್ನಡಮ್ಮನ ಶಾಲೆ


ತುಂಬಿಸಿರಿ ಅದರೊಳಗೆ ಕನ್ನಡ ನಾಡಿನ ಕಲೆ


ನಾಡಿನ ಕಣ್ಮಣಿಯಾಗುವುದು ಮಗು ಬೆಳೆದ ಮೇಲೆ


ಕನ್ನಡ ಭಾವನೆ


ಪ್ರತಿ ದಿನ ಹಿಡಿದು ನೋಡಿಕೊಳ್ಳಿ ನಾಡಿ


ಕೇಳಿಸಲಿ ಅಲ್ಲಿ ಸದಾ ಕನ್ನಡದ್ದೇ ನುಡಿ


ಅದರ ಸ್ಮರಿಸಿ ಭುವನೇಶ್ವರಿಗಾಗಿ ದುಡಿ


ಕನ್ನಡ ಭಾವನೆಗಳು ಉಕ್ಕಿ ಹರಿಯಲಿ ಕೋಡಿ


 


ಕನ್ನಡ ಓಲೆ


ನಿಮ್ಮ ಮಗುವಿಗೆ ಆರಂಭದಲ್ಲಿರಲಿ ಕನ್ನಡ ಶಾಲೆ


ಮಗು ಮೊದಲು ಕಲಿಯಲಿ ಕನ್ನಡದ ವರ್ಣ ಮಾಲೆ


ದೇವರ ಚಿತ್ರವಾಗಲಿ ಬರೆದ ಪ್ರತಿ ಕನ್ನಡದ ಓಲೆ


ನಲಿದು ಹಾಡಲಿ ಕನ್ನಡದಲ್ಲಿ ನಿಮ್ಮ ಪುಟ್ಟ ಕೋಗಿಲೆ


ಅನ್ಯರ ಸೊಲ್ಲು


ನಿಮ್ಮ ಮಗು ಸುರಿಸಲಿ ಕನ್ನಡದ ಜೊಲ್ಲು


ಕನ್ನಡದಲ್ಲೇ ಹುಟ್ಟಿ ಬರಲಿ ಅದರ ಹಲ್ಲು


ಮಗುವಿಗೆ ಹರಸಿ ಹೇಳಿ ಕನ್ನಡದಲ್ಲಿ ಗೆಲ್ಲು


ನಾಡಿನಲ್ಲಿ ಮೆಲ್ಲಗೆ ಕೇಳಿಸಲಿ ಅನ್ಯರ ಸೊಲ್ಲು


 


 


 


ಆಗಲೇಬೇಕು


ಮಗು ಹುಟ್ಟಿದಾಗಲೇ ನಿಜಕ್ಕೂ ಕನ್ನಡದಲ್ಲಿ ಅಳಬೇಕು


ವರ್ಷ ತುಂಬುವ ವೇಳೆಗೆ ಕನ್ನಡದಲ್ಲೇ ನಗಬೇಕು


ಶಾಲೆಗೆ ಸೇರುವ ಹೊತ್ತಿಗೆ ಕನ್ನಡ ಕನ್ನಡ ಎನ್ನಬೇಕು


ಕನ್ನಡ ತಾಯಂದಿರೆ ಯೋಚಿಸಿ ಇದು ಆಗಲೇಬೇಕು,


ಕನ್ನಡ ಪರಂಪರೆ


ನಿಮ್ಮ ಮಗುವಿನದು ಕನ್ನಡದ ವೀರ ಪರಂಪರೆ


ಆತನ ಇಲ್ಲಿಗೆ ಹೊತ್ತು ತಂದದ್ದು ಕನ್ನಡದ ಧರೆ


ಹೆತ್ತ ತಾಯಿಯು ತುಂಬಲಿ ಕನ್ನಡ ವಿಚಾರಧಾರೆ


ಕನ್ನಡ ಕಣ್ಮಣಿಯಾಗಿ ಮಾಡಲಿ ಅವ ಮನ ಸೂರೆ


ಕನ್ನಡದ ಉಸಿರು


ನಿಮ್ಮ ಮಗು ಹಾಡುತ್ತಾ ಆಗಲಿ ಕನ್ನಡದ ಕೋಗಿಲೆ


ನಾಟ್ಯ ಕಲಿತು ಪ್ರತಿ ಅಂಗದಲ್ಲಾಗಲಿ ಕನ್ನಡ ಬಾಲೆ


ಅವಳ ಉಸಿರು ಪಸರಿಸಲಿ ಕನ್ನಡದ ಮೂಲೆ ಮೂಲೆ


ಅವಳೆಂದರೆ ಇನ್ಯಾರು ಅವಳಲ್ಲವೆ ಕನ್ನಡದ ಬಾಲೆ


ಗರ್ಭದಲ್ಲಿ ಇತಿಹಾಸ


ತಾಯಿಯ ಗರ್ಭದಿಂದಲೇ ಬಂದಿರುತ್ತೆ ಇತಿಹಾಸ


ಮಗು ಬಂದಾಗ ತಾಯಿಯದು ಕನ್ನಡ ಮಂದಹಾಸ


ಶಾಲೆಗೆ ಕಳುಹಿಸಿ ಇಂಗ್ಲೀಷು ಕಲಿಸುವಂತಹ ಸಾಹಸ


ಏನಿದು ತಾಯಂದರೇ ಬಲ್ಲಿರಾ ಇದು ವಿಪರ್ಯಾಸ


 


ಕಲ್ಪಿಸಿ, ರಚಿಸಿ ಅಲ್ಲದೆ ಟೈಪಿಸಿದವರು : ಶಿವಶಶಿ


ತಾರೀಖು 1-11-2010 ಭಾನುವಾರ