ಕನ್ನಡತಿ, ಪ್ರೊ. ಮಾಲತಿರಾವ್ ರವರಿಗೆ ಅಭಿನಂದನೆಗಳು.

ಕನ್ನಡತಿ, ಪ್ರೊ. ಮಾಲತಿರಾವ್ ರವರಿಗೆ ಅಭಿನಂದನೆಗಳು.

ಬರಹ

ಬೆಂಗಳೂರು, ಜ.04: ಕನ್ನಡತಿ ಪ್ರೊ.ಮಾಲತಿ ರಾವ್ ಅವರ ಆಂಗ್ಲ ಕಾದಂಬರಿ 'ದಿ ಡಿಸ್ ಆರ್ಡರ್ಲಿ ಲಿ ವಿಮೆನ್' ಎಂಬ ಕೃತಿಗೆ 2007 ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ತಮ್ಮ ಸುತ್ತಣ ಬದುಕು ಮತ್ತು ತಮ್ಮೊ2005 ರಲ್ಲಿ ಪ್ರಕಟವಾದ ಈಕೃತಿಯನ್ನು ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿ ಯು ಆರ್. ಅನಂತಮೂರ್ತಿಯವರು ಅನಾವರಣಗೊಳಿಸಿದ್ದರು.

50 ಸಾವಿರ ರುಪಾಯಿ ನಗದು, ಪ್ರಶಸ್ತಿ ಫಲಕವನ್ನು ಒಳಗೊಂಡಿರುತ್ತದೆ. ದೆಹಲಿಯಲ್ಲಿ ಫೆಬ್ರವರಿ 20 ರಂದು ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಅಕಾಡೆಮಿಯ ಪ್ರಕಟಣೆ ತಿಳಿಸಿದೆಳಗಿನ ಹೆಣ್ಣೇ ತಮ್ಮ ಈ ಕೃತಿಯ ಹಿಂದಿನ ಸ್ಫೂರ್ತಿ ಎಂದು ಮಾಲತಿರಾವ್ ಹೇಳಿದ್ದಾರೆ.ದೆಹಲಿಯ ಪ್ರಸಿದ್ಧ ಕಾಲೇಜಾದ 'ಮಿರಾಂಡ ಹೌಸ್' ನಲ್ಲಿ 30 ವರ್ಷಗಳ ಕಾಲ ಇಂಗ್ಲೀಷ್ ಬೋಧನೆ ಮಾಡಿ, ಈಗ ಬೆಂಗಳೂರಿನಲ್ಲಿ ನಿವೃತ್ತಿ ಜೀವನ ನಡೆಸುತ್ತಿರುವ ಮಾಲತಿ ಅವರು ಹಲವು ಕಾದಂಬರಿಗಳನ್ನು, ಸಣ್ಣ ಕಥೆಗಳನ್ನು ಬರೆದು ಪ್ರಸಿದ್ಧರಾಗಿದ್ದಾರೆ.
ಕೇಂದ್ರ ಸಾಹಿತ್ಯ ಅಕ್ಯಾಡಮಿ ಪ್ರಶಸ್ತಿ ವಿಜೇತೆ, ಪ್ರೊ. ಮಾಲತಿ ರಾವ್ ರವರಿಗೆ ಅಭಿನಂದನೆಗಳು. ತಮ್ಮ ಕಾದಂಬರಿಯ ಪ್ರಮುಖ ವಸ್ತು, ಸ್ತ್ರಿ. ಸ್ವಾತಂತ್ರ್ಯ ಪೂರ್ವದಲ್ಲಿ ಸ್ತ್ರೀಯರು ಅನುಭವಿಸಿದ ಕಟು ಅನುಭವಗಳನ್ನು, ಸಮಸ್ಯೆಗಳನ್ನು ದಾಖಲಿಸಿದ್ದಾರೆ. ಕನ್ನಡಿಗರಿಗೆ ಅದರಲ್ಲೂ ಸಂಪದೀಯರಿಗೆ/ ಹೊಸವರ್ಷದ ಕೊಡುಗೆಯೆಂದೇ ಹೇಳಬೇಕು.

-ದಟ್ಸ್ ಕನ್ನಡ ಇ-ಪತ್ರಿಕೆಯ ಕೊಡುಗೆ