ಕನ್ನಡದ ಕಂಪು

ಕನ್ನಡದ ಕಂಪು

ಬರಹ

ಕನ್ನಡವನ್ನು ಬೆಳೆಸಲು ಕನ್ನಡದ ಬಗ್ಗೆ ಹೊರ ರಾಜ್ಯದಿಂದ ಬಂದು ನೆಲೆಸಿರುವ ಜನರಲ್ಲಿ ಆಸಕ್ತಿ ಮೂಡಿಸುವುದು ಇಂದು ಅಗತ್ಯವಾಗಿದೆ. ಅಂತದೊಂದು ಪ್ರಯತ್ನ ನಮ್ಮ ಕಂಪನಿ LG CNS Global, ಬೆಂಗಳೂರಿನಲ್ಲಿ ನಡೆಯಿತು. ನಮ್ಮ ಟೀಮಿನಲ್ಲಿ ಇರುವ 25 ಜನರಲ್ಲಿ 12 ಜನ ಕನ್ನಡಿಗರು ಮತ್ತು ಉಳಿದವರು ಹೊರ ರಾಜ್ಯದವರು. ಹೊರ ರಾಜ್ಯದ ಜನರಿಗೆ ಕನ್ನಡದ ಒಂದು ಚಲನಚಿತ್ರವನ್ನು ಕನ್ನಡದ ಜನರು ಪ್ರಾಯೋಜಿಸುವುದು ನಮ್ಮ ಯೋಜನೆ. ನಮ್ಮ ಯೋಚನೆಗೆ ಬಂದ ಚಿತ್ರ "ಮುಂಗಾರು ಮಳೆ". ಬೇರೆ ರಾಜ್ಯದ ಗೆಳೆಯರಲ್ಲಿ ಅನೇಕರು ಕನ್ನಡದ ಯಾವ ಚಿತ್ರವನ್ನೂ ನೋಡಿರಲಿಲ್ಲ. ಕನ್ನಡದ ಕೆಲವು ಗೆಳೆಯರು ಅದಾಗಲೇ 3-4 ಬಾರಿ ಈ ಚಲನಚಿತ್ರವನ್ನು ನೋಡಿದ್ದರು. ಹೀಗಿದ್ದರೂ ಪಿ.ವಿ.ಆರ್. ಚಿತ್ರಮಂದಿರದಲ್ಲಿ ಮುಂಗಾರು ಮಳೆಯನ್ನು ಆನಂಧಿಸಿದೆವು. ಕನ್ನಡ ತಿಳಿಯದವರಿಗೆ ನಾವು ಸಂಭಾಷಣೆಗಳನ್ನು ಭಾಷಾಂತರಿಸಿದೆವು. ಬೆಳದಿಂಗಳ ಬಾಲೆ ಚಲನಚಿತ್ರದ ನಂತರ ಯಾವುದೇ ಚಿತ್ರವನ್ನು ನೋಡಿರದ ಬೆಳಗಾವಿಯ ಗೆಳೆಯರೊಬ್ಬರು "ಕರ್ನಾಟಕ ಅದೆಷ್ಟು ಸುಂದರ!" ಎಂದು ಉದ್ಗರಿಸಿದರೆ, ತಮಿಳುನಾಡಿನ ಗೆಳೆಯರೊಬ್ಬರು ಮರುದಿನ "ಒಲವೇ ವಿಸ್ಮಯ.." ಎಂದು ಗುನುಗುತ್ತಿದ್ದರು. ಬೆಳಗಾವಿಯ ಗೆಳೆಯ ಮುಂದಿನ ವಾರ ಅವರ ಪತ್ನಿಯೊಂದಿಗೆ (ಪೂನಾದವರು)ಮತ್ತೆ ಮುಂಗಾರು ಮಳೆಗೆ ಹೋಗಲಿದ್ದಾರೆ.