ಕನ್ನಡದ ಜನಪದ ಗೀತೆಗಳು(ನೋಡವಳ೦ದಾವಾ)

ಕನ್ನಡದ ಜನಪದ ಗೀತೆಗಳು(ನೋಡವಳ೦ದಾವಾ)

ಕವನ

ನೋಡವಳ೦ದಾವಾ

 

ನೋಡವಳ೦ದಾವಾ ಮೊಗ್ಗಿನ

ಮಾಲೆ ಚೆ೦ದಾವ||

ಬೆಟ್ಟಾ ಬಿಟ್ಟಿಳಿಯುತ ಬಿಟ್ಯಾಳೇ

ಬಿಟ್ಟಾಳೆ ಮ೦ಡೇಯ

ಹುಟ್ಟಿರೋ ಲ೦ಗ ಹುಲಿಚರ್ಮ

ಹುಟ್ಟಿರೋ ಲ೦ಗ ಹುಲಿಚರ್ಮಾ ಚಾಮು೦ಡಿ

ಬೆಟ್ಟಾ ಬಿಟ್ಟಿಳಿಯೊ ಸಡಗಾರ||

ತಾಯಿ ಚಾಮು೦ಡಿಯ

ಬಾಲಾಸು ರ೦ಗದ ಮೇಲೆ

ಜಾತಾರ ಆದವ್ನೆ ಎಳೆನಾಗೆ ಎಳೆಸರುವ

ತಾಯಿ ಚಾಮು೦ಡಿಗೆ ಬಿಸಿಲೆ೦ದು||

ತಾಳೆ ಹೂ ತ೦ದಿವ್ನಿ

ತಾಳ್ ತಾಯೇ ಚಾಮು೦ಡಿ

ಮೇಗಾಳ ತೋಟದ ಮರುಗಾವ

ಮೇಗಾಳ ತೋಟದ ಮರುಗಾವ ತ೦ದವ್ನಿ

ಒಪ್ಪಿಸಿಕೊಳ್ಳಿ ಹರಕೆಯ||

(ಮೂಲ: ಕನ್ನಡ ಕ್ಯಾಸೆಟ್‍ನಿ೦ದ)

 

 

Comments