ಕನ್ನಡದ ಯುವ ಗಾನ ಕೋಗಿಲೆ, ಭಾರತದ ಭರವಸೆಯ ಗಾಯಕಿ 'ರಿತೀಶಾ'

ಕನ್ನಡದ ಯುವ ಗಾನ ಕೋಗಿಲೆ, ಭಾರತದ ಭರವಸೆಯ ಗಾಯಕಿ 'ರಿತೀಶಾ'

ಬರಹ


Rithisha

ರಿತೀಶಾ ಪದ್ಮನಾಭ್ ಎ೦ಬ ಕನ್ನಡ ಕುವರಿ ಇದೀಗ ಭಾರತ ಮಟ್ಟದಲ್ಲಿ ಬೆಳಗುವ ಭರವಸೆಯ ಯುವಗಾಯಕಿಯಾಗಿ ಹೊರಹೊಮ್ಮುತ್ತಿದ್ದಾಳೆ. ಪ್ರಸ್ತುತ ಸ್ಟಾರ್ ಪ್ಲಸ್ ಚಾನೆಲ್‌ನ ವಾಯ್ಸ್ ಆಫ್ ಇಂಡಿಯಾ ಕಾರ್ಯಕ್ರಮದಲ್ಲಿ ಕರ್ನಾಟಕವನ್ನು ಪ್ರತಿನಿಧಿಸುತ್ತಿರುವ ರಿತೀಶಾ ಅಭೂತಪೂರ್ವ ಯಶಸ್ಸನ್ನು ಕಾಣುತ್ತಿದ್ದಾಳೆ. ಪ್ರತಿವಾರ ಶುಕ್ರವಾರ ಹಾಗೂ ಶನಿವಾರದಂದು ರಾತ್ರಿ 10ಕ್ಕೆ ಪ್ರಸಿದ್ಧ ರಾಷ್ಟ್ರೀಯ ಚಾನೆಲ್ ಸ್ಟಾರ್ ಪ್ಲಸ್ ನಲ್ಲಿ ಪ್ರಸಾರವಾಗುವ ಸಂಗೀತ ಆಧಾರಿತ ರಿಯಾಲಿಟಿ ಶೋ ಅಮುಲ್ ಸ್ಟಾರ್ ವಾಯ್ಸ್ ಆಫ್ ಇಂಡಿಯಾದಲ್ಲಿ ಇದೀಗ ಟಾಪ್-6 ರಲ್ಲಿ (ಉತ್ಕೃಷ್ಟ 6 ಗಾಯಕರಲ್ಲಿ ಒಬ್ಬರಾಗಿ) ಮಿಂಚುತ್ತಿದ್ದಾಳೆ. ತನ್ನ ಸಾಲಿನ ಅನೇಕ ಯುವ ಗಾಯಕರ ಬಿಗಿ ಸ್ಪರ್ಧೆಯಲ್ಲಿ ಗೆದ್ದು, ಬೆಂಗಳೂರಿನಲ್ಲಿ ನಡೆದ ವಾಯ್ಸ್ ಆಫ್ ಕರ್ನಾಟಕ - ಅರ್ಹತಾ ಸುತ್ತಿನಲ್ಲಿ ಆಯ್ಕೆಗೊಂಡು ಮುಂಬಯಿಯಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮದಲ್ಲಿಯೂ ತನ್ನ ಇಂಪನ್ನು ಬೀರಿದ್ದಾಳೆ. ಅಖಂಡ ಭಾರತದ ೨೩ ಯುವ ಗಾಯಕರೊಂದಿಗೆ ಅಖಾಡಕ್ಕಿಳಿದ ರಿತೀಶಾ ಇದೀಗ ಮೊದಲನೇ ಸ್ಥಾನಕ್ಕೆ ತೀವ್ರ ಪೈಪೋಟಿಯಿಂದ ಮುನ್ನುಗ್ಗುತ್ತಿದ್ದಾಳೆ. ಪ್ರಸಿದ್ಧ ಹಿನ್ನೆಲೆಗಾಯಕರಾದ ಶಾನ್ ನಿರೂಪಿಸುತ್ತಿವ ಈ ರಿಯಾಲಿಟಿ ಶೋ ದಲ್ಲಿ ಇಸ್ಮಾಯಿಲ್ ದರ್ಬಾರ್, ಮಾಂಟಿ ಶರ್ಮ, ಸುಖವಿಂದರ್ ಸಿಂಘ್ ರಂತಹ ಸಂಗೀತ ದಿಗ್ಗಜರು ತೀರ್ಪುಗಾರರಾಗಿ ಸಹಕರಿಸುತ್ತಿದ್ದಾರೆ. ಅನೇಕ ಯುವ ಗಾಯಕರಿಗೆ ವೇದಿಕೆಯಾದ ಈ ಅಮುಲ್ ಸ್ಟಾರ್ ವಾಯ್ಸ್ ಆಫ್ ಇಂಡಿಯಾ, ವೀಕ್ಷಕರ ಮತದಾನದ ಮೂಲಕ ಉತ್ತಮ ಗಾಯಕರ ಆಯ್ಕೆ ಮಾಡುತ್ತದೆ.

ಸುಸಂಸ್ಕೃತ ಪದ್ಮನಾಭ್ ಕುಟುಂಬದ ಮುದ್ದಿನ ಮಗಳಾಗಿರುವ ಕುಮಾರಿ ರಿತೀಶಾ, ತನ್ನ 12ನೆಯ ಇಯತ್ತೆಯನ್ನು ಮುಗಿಸಿ ಇದೀಗ ಇಂಜಿನಿಯರಿಂಗ್ ಕಾಲೇಜಿಗೆ ಕಾಲಿಟ್ಟಿದ್ದಾಳೆ. ಓದಿನಲ್ಲಿಯೂ ಬಹಳ ಮುಂದಿರುವ ಇವಳು ಪಠ್ಯೇತರ ಚಟುವಟಿಕೆಗಳಲ್ಲಿಯೂ ಬಹಳ ಚುರುಕು. ಬಾಲ್ಯದಿಂದಲೂ ತನ್ನ ಮನೆಯಲ್ಲಿನ ಸಂಗೀತ ಸಂಸ್ಕೃತಿಯಿಂದಾಗಿ ವಿಶೇಷ ಆಸ್ಥೆಯಿರಿಸಿಕೊಂಡಿದ್ದ ರಿತೀಶಾಗೆ ತಾಯಿಯೇ ತನ್ನ ಮೊದಲ ಗುರು. ಅನಂತರ ಸುಗಮ ಸಂಗೀತ, ಶಾಸ್ತ್ರೀಯ ಸಂಗೀತ ಕಲಿಯುತ್ತಾ ಸಾಧನೆಯ ಹಂತಗಳನ್ನು ಯಶಸ್ವಿಯಾಗಿ ದಾಟುತ್ತಿದ್ದಾಳೆ. ತನ್ನ ಮೂರನೇ ವಯಸ್ಸಿಗೇ ಸುಶ್ರಾವ್ಯವಾಗಿ ಹಾಡಲು ಪ್ರಾರಂಭಿಸಿದ ಇವಳು ಇದುವರೆಗೆ ಅನೇಕ ಬಹುಮಾನಗಳನ್ನು ಪಡೆದುಕೊಂಡಿದ್ದಾಳೆ. ಕರ್ನಾಟಕದ ಅಂದಿನ ಮುಖ್ಯಮಂತ್ರಿ ಶ್ರೀ ಬಂಗಾರಪ್ಪರಿಂದ ರಾಷ್ಟ್ರೀಯ ಬಾಲಶ್ರೀ ಪುರಸ್ಕಾರಕ್ಕೆ ಭಾಗಿಯಾಗಿದ್ದಾಳೆ.

ಅದಲ್ಲದೇ, ಕರ್ನಾಟಕ ರಾಜ್ಯ ಸರಕಾರದ ಕಲಾಶ್ರೀ ಪ್ರಶಸ್ತಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಪ್ರತಿಭಾ ಪುರಸ್ಕಾರ, ಶ್ರೀ ರಾಮ ಸೇವಾ ಮಂಡಲಿಯ ಪ್ರತಿಭಾಕಾಂಕ್ಷಿ ಪುರಸ್ಕಾರ ಹಾಗೂ ಇನ್ನಿತರ ಹತ್ತು ಹಲವು ಪ್ರಶಸ್ತಿಯನ್ನು ತನ್ನ ಗೌರವದ ಗರಿಯಾಗಿಸಿಕೊಂಡಿದ್ದಾರೆ. ಆಕಾಶವಾಣಿ, ದೂರದರ್ಶನ ಹಾಗಿ ಇತರ ಕೆಲವು ಖಾಸಗಿ ಚಾನೆಲ್ ಗಳಲ್ಲೂ ತನ್ನ ಕಂಠಸಿರಿಯನ್ನು ಪ್ರದರ್ಶಿಸಿದ್ದಾರೆ.

ನಮ್ಮ ಮನೆಯಂಗಳದ ಈ ಕೋಗಿಲೆ ಇದೀಗ ಭಾರತೀಯ ಮಟ್ಟದ ಚಾನೆಲ್ ಒಂದರಲ್ಲಿ ರಿಯಾಲಿಟಿ ಶೋ ನಲ್ಲಿ ಯಶಸ್ವಿಯಾಗಿ ಗೆಲ್ಲಬೇಕೆಂದರೆ ನಮ್ಮೆಲ್ಲರ ಸಹಕಾರ ಅತ್ಯಗತ್ಯ. ವೀಕ್ಷಕರ ಮತದಾನದ ಮೂಲಕ ನಿರ್ಧಾರಿತವಾಗುವ ಈ ಕಾರ್ಯಕ್ರಮದಲ್ಲಿ ಗೆಲ್ಲಲು ನಮ್ಮೆಲ್ಲರ ಮತದಾನ ಅತ್ಯವಶ್ಯವಾಗಿದೆ. ನಾವೆಲ್ಲರೂ ರಿತೀಶಾಳಿಗೆ ನಮ್ಮ ಅಮೂಲ್ಯ ಮತಹಾಕೋಣ, ಭಾರತದ ಸಂಗೀತವೇದಿಕೆಯಲ್ಲಿ ಗೆಲ್ಲಲು, ಗೆದ್ದು ಬೆಳೆಯಲು ನಾವೆಲ್ಲರೂ ಸಹಕರಿಸೋಣ.

ಮತದಾನ ಮಾಡುವುದು ಹೇಗೆ?
ತುಂಬಾ ಸರಳ ವಿಧಾನ:

ನಿಮ್ಮ ಮೊಬೈಲ್ ನಲ್ಲಿ VOI 10 ಎ೦ದು ಮುದ್ರಿಸಿ, 57827 ಕ್ಕೆ ಕಳುಹಿಸಿ. ಒಂದು ಮೊಬೈಲ್‌ನಿಂದ ೨೦ ವೋಟುಗಳನ್ನು ಮಾಡಬಹುದು.

ಅಥವಾ
ನಿಮ್ಮ ಬಿಯಸ್ಸೆನ್ನೆಲ್ ಲ್ಯಾಂಡ್ ಲೈನ್ ನಿಂದ 1862 888 7827 10 ಕ್ಕೆ ಕರೆಮಾಡಿ,

ಅಥವಾ
ನಿಮ್ಮ ಟಾಟಾ ಇಂಡಿಕಾಂ ಫೋನಿನಿಂದ 12900 10 ಕ್ಕೆ ಫೋನಾಯಿಸಿ.

ಪ್ರತಿ ಶನಿವಾರ ರಾತ್ರಿ ೧೦ ರಿಂದ ಭಾನುವಾರ ರಾತ್ರಿಯ ತನಕ ಮತದಾನದ ಲೈನುಗಳ ತೆರೆದಿರುತ್ತವೆ.

ಹೆಚ್ಚಿನ ಮಾಹಿತಿಗಾಗಿ http://rithisha.wordpress.com

ಮರೆಯಬೇಡಿ ಕನ್ನಡಿಗರೇ. . .
ಮರೆತು ನಿರಾಶರಾಗಬೇಡಿ. . .

ಮುಗಿಸುವ ಮುನ್ನ:

ಅನಿಸುತಿದೆ ಯಾಕೋ ಇಂದು
ರಿತೀಶಾಳೇ ಗೆಲ್ಲುವಳೆಂದು
ಮಾಯದಾ ಲೋಕದಿಂದ
ಹಾಡಲೆಂದೇ ಬಂದವಳೆಂದು
ಅಹಾ ಎ೦ತ ಮಧುರ ಗಾಯನ |
ವೋಟು ಮಾಡಿ ಒಮ್ಮೆ ಇಂದು
ಹಾಗೇ ಸುಮ್ಮನೇ ||