ಕನ್ನಡಮ್ಮನ ಚರಣಕೆ...

ಕನ್ನಡಮ್ಮನ ಚರಣಕೆ...

ಕವನ

ಕನ್ನಡ ನಾಡಿನ ಮಣ್ಣಿನ ಕಣದಲಿ

ತುಂಬಿದೆ ಸಿರಿಗಂಧದ ಘಮವು

ಕನ್ನಡದಕ್ಷರ ನುಡಿ ನುಡಿಯಲಿ

ಬೆರೆತಿದೆ ಭಾವೈಕ್ಯತೆಯ ಬಲವು.

 

ಚೆಲುವಿನ ನಾಡು- ಚಿತ್ತಾರದ ಬೀಡು

ಬನದೊಳು ಸಮೃದ್ಧಿಯ ಮಲೆನಾಡು

ತುಂಬಿದೆ ಕಾಂತಿ- ಹರಡಿದೆ ಶಾಂತಿ

ಮರದೆಲೆಗಳು ಫಳಫಳನೆ ಹೊಳೆದು.

 

ಸಕ್ಕರೆ ನಾಡಿದು- ಚಿನ್ನದ ಬೀಡಿದು

ಸಂಸ್ಕೃತಿ ತುಂಬಿದ ತೊಟ್ಟಿಲಿದು

ಗುಡಿ ಕೈಗಾರಿಕೆಗಳು ಕುಶಲತೆಯಲ್ಲಿ

ಕರುನಾಡಿನ ಮಡಿಲಿನ ತುಂಬಾ !

 

ಕನ್ನಡದಕ್ಷರ ಮುತ್ತಿನ ಮಣಿಯಲಿ

ಚೆಲುವಿಗೆ ಸಾಕಾರವು ಕಣ್ತುಂಬಾ

ಇತಿಹಾಸದ ಪುಟದ ಸಾರದಲಿ

ವಿಜಯನಗರ ವೈಭವದ ಬಿಂಬಾ.

 

ಕರುನಾಡಿನ ಗುಡಿ ಗೋಪುರಗಳು

ಕಣ್ಮನ ಸೆಳೆಯುವ ಶಿಲ್ಪ ವೈಭವವು

ಜಗದಾಕರ್ಷಕ ಜೋಗದ ಸಿರಿಯು

ವಿಶ್ವೇಶ್ವರಯ್ಯನವರ ಶಕ್ತಿಯ ಛಲವು.

 

ಸಾಹಿತ್ಯ- ಸಂಗೀತ ಮನಮನದಲ್ಲಿ

ಹರಡಿದೆ ಕಂಪನು ಜಗದೆಡೆಯಲ್ಲು

ಹಿಂದೂಸ್ತಾನದ ಪುಣ್ಯ ಮಡಿಲಿನಲಿ

ಕರುನಾಡ ಕುಡಿ ಹೆಮ್ಮೆಯು ನಮಗಿಲ್ಲಿ.

 

-ವೀಣಾ ಕೃಷ್ಣಮೂರ್ತಿ, ದಾವಣಗೆರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ

 

ಚಿತ್ರ್