ಕನ್ನಡಿಗ ಅರವಿಂದ ಅಡಿಗಗೆ ಬೂಕರ್ ಗರಿ

ಕನ್ನಡಿಗ ಅರವಿಂದ ಅಡಿಗಗೆ ಬೂಕರ್ ಗರಿ

ಬರಹ

ಬುಧವಾರ, 15 ಅಕ್ಟೋಬರ್ 2008, 10:56 Hrs (IST)

aravind wins booker prizeಲಂಡನ್, ಅ. 15 :

-(ದಟ್ಸ್ ಕನ್ನಡ ವಾರ್ತೆ) ಯ ಕ್ಷಮೆ ಕೋರಿ, ಹೇಗಿದೆಯೋ ಹಾಗೆ ಪ್ರಕಟಿತ.

ಮಂಗಳೂರು ಮೂಲದ ಕಾದಂಬರಿಕಾರ ಅರವಿಂದ ಅಡಿಗ ಅವರಿಗೆ ಇಂಗ್ಲಿಷ್ ಸಾಹಿತ್ಯದ ಪ್ರತಿಷ್ಠಿತ ಪ್ರಶಸ್ತಿ ಎನಿಸಿರುವ 2008ನೇ ಸಾಲಿನ 'ಬೂಕರ್' ಪ್ರಶಸ್ತಿ ಲಭಿಸಿದೆ. ಅಂತಿಮ ಸುತ್ತಿನಲ್ಲಿದ್ದ ಆರು ಕಾದಂಬರಿಗಳಲ್ಲಿ ಅರವಿಂದ ಅಡಿಗ ಅವರ 'ದಿ ವೈಟ್ ಟೈಗರ್' ಕೃತಿಯು ಏಷ್ಯಾದ ಪ್ರತಿಷ್ಠಿತ ಗೌರವಕ್ಕೆ ಪಾತ್ರವಾಗುವ ಮೂಲಕ ಈ ಪ್ರಶಸ್ತಿ ಗಳಿಸಿದ ನಾಲ್ಕನೇ ಭಾರತೀಯ ಸಾಹಿತಿ ಎಂಬ ಹೆಗ್ಗಳಿಕೆಗೆ ಭಾಜನರಾದರು. ಬೂಕರ್ ಪ್ರಶಸ್ತಿಯೂ 50 ಸಾವಿರ ಪೌಂಡ್ ನಗದು ಹಾಗೂ ಪ್ರಶಸ್ತಿ ಫಲಕಗಳನ್ನು ಒಳಗೊಂಡಿರುತ್ತದೆ.

ಪ್ರತಿಷ್ಠಿತ 'ಬೂಕರ್ ಪ್ರಶಸ್ತಿ' ಯನ್ನು 1981ರಲ್ಲಿ ಸಲ್ಮಾನ್ ರಶ್ದಿ, 1997ರಲ್ಲಿ ಅರುಂಧತಿ ರಾವ್ ಅವರ 'ದಿ ಗಾಡ್ ಅಫ್ ದಿ ಸ್ಮಾಲ್ ಥಿಂಗ್ಸ್', 2006ರ ರಲ್ಲಿ ಕಿರಣ್ ದೇಸಾಯಿ ಅವರು ಈ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಸದ್ಯ ಮುಂಬೈ ನಿವಾಸಿಯಾಗಿರುವ 33 ವಯಸ್ಸಿನ ಅರವಿಂದ ಅಡಿಗ ಅವರು ಪ್ರಶಸ್ತಿ ಪಡೆದ ಅತ್ಯಂತ ಕಿರಿಯ ಎಂಬ ಗರಿಮೆಗೆ ಪಾತ್ರರಾಗಿದ್ದಾರೆ.

2003ರ ಸಾಲಿನಲ್ಲಿ ಅಸ್ಟ್ರೇಲಿಯಾದ ಡಿಬಿಸಿ ಪಿಯೇರಿ ಅವರ 'ವರ್ನನ್ ಗಾಡ್ ಲಿಟಲ್', 1997ರಲ್ಲಿ ಅರುಂಧತಿ ರಾವ್ ಅವರು ಆಯ್ಕೆ ಸುತ್ತಿಗೆ ಪ್ರವೇಶಿದ ಮೊದಲ ಬಾರಿಯಲ್ಲೇ ಪ್ರಶಸ್ತಿಗಳಿಸಿದ ಹಿರಿಮೆ ಹೊಂದಿದ್ದಾರೆ.

ಅಂತಿಮ ಸುತ್ತಿನಲ್ಲಿ ಭಾರತೀಯ ಮೂಲದ ಸಾಹಿತಿಗಳ ಪ್ರಾಬಲ್ಯ ಹೆಚ್ಚಾಗಿತ್ತು. ಅರವಿಂದ ಅಡಿಗ ಅವರೊಂದಿಗೆ ಅಮಿತಾವ್ ಘೋಷ್ ಅವರನ್ನು 2008ನೇ ಸಾಲಿನ ಪ್ರಶಸ್ತಿಯ ಅಂತಿಮ ಸುತ್ತಿನ ಆಯ್ಕೆಗಾಗಿ ಪರಿಗಣಿಸಲಾಗಿತ್ತು. ಖ್ಯಾತ ಮಾನವ ಶಾಸ್ತ್ರ ಬರಹಗಾರ ಅಮಿತಾವ್ ಘೋಷ್ ಭಾರತದ ಅತ್ಯುತ್ತಮ ಇಂಗ್ಲಿಷ್ ಬರಹಗಾರರಾಗಿದ್ದು, ಅವರ 'ದ ಸೀ ಆಫ್ ಪೊಪ್ಪೀಸ್' ಪ್ರಶಸ್ತಿಗೆ ಪರಿಗಣಿಸಲಾಗಿದೆ.

ಇದಲ್ಲದೇ ಸಬಾಸ್ಟಿಯನ್ ಬ್ಯಾರಿ (ದ ಸಿಕ್ರೇಟ್ ಸ್ಕ್ರಿಪ್ಟರ್), ಲಿಂಡಾ ಗ್ರಾಂಟ್ (ದ ಕ್ಲಾಥ್ಸ್ ಆನ್ ದೇರ್ ಬ್ಯಾಕ್ಸ್), ಫಿಲಿಪ್ ಹೆನ್ಸೇರ್ (ದ ನಾರ್ದನ್ ಕ್ಲೇಮೆನ್ಸಿ), ಸ್ಟೀವ್ ಟೋಲ್ಸ್ (ಎ ಪ್ರಾಕ್ಸನ್ ಆಫ್ ದ ಹೋಲ್) ಕೃತಿಗಳನ್ನು ಪ್ರಶಸ್ತಿಗೆ ಪರಿಗಣಿಸಲಾಗಿತ್ತು. ಕೊನೆಯ ಗಳಿಗೆಯಲ್ಲಿ ಸಲ್ಮಾನ್ ರಶ್ದಿ ಅವರ ಕೃತಿ ಪ್ರಶಸ್ತಿಗೆ ಆಯ್ಕೆಯಾಗುವಲ್ಲಿ ವಿಫಲವಾಯಿತು.

1968 ರಿಂದ ಈ ಪ್ರಶಸ್ತಿಯನ್ನು ನೀಡಲು ಆರಂಭಿಸಲಾಗಿದೆ. ಇಲ್ಲಿವರೆಗೂ ಪ್ರಪಂಚದ ವಿವಿಧ ದೇಶಗಳ 48 ಸಾಹಿತಿಗಳು ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.

-(ದಟ್ಸ್ ಕನ್ನಡ ವಾರ್ತೆ) ಯ ಕ್ಷಮೆ ಕೋರಿ, ಹೇಗಿದೆಯೋ ಹಾಗೆ ಪ್ರಕಟಿತ.

'ಬೂಕರ್' ಕಣದಲ್ಲಿ ಕನ್ನಡಿಗ ಅರವಿಂದ ಅಡಿಗ

ಬೂಕರ್ ಪ್ರಶಸ್ತಿಗೆ ಅರವಿಂದ್ ಕೃತಿ ಪರಿಗಣನೆ