ಕನ್ನಡಿಯೊಳಗಿನ ಗಂಟು

ಕನ್ನಡಿಯೊಳಗಿನ ಗಂಟು

ಬರಹ

ಕಾಲೇಜಿನ ಕಡೆಯ ದಿನವದು, ಕೊನೆಯ ದಿನವಾದ್ದರಿಂದ ಸಹಜವಾಗಿ ಅಗಲಿಕೆಯ ನೋವು ಎಲ್ಲರಲ್ಲೂ ಇತ್ತು, ವಿದಾಯಗಳು ಸಂದಾಯವಾಗುತ್ತಿತ್ತು. ಆಟೋ ಗ್ರಾಫ್ ವಿನಿಮಯ, ಭವಿಷ್ಯದ ಚಿಂತನೆ, ಯಾಕೋ ಯಾರದು ಮಾತುಗಳೇ ಮುಗಿಯುತ್ತಿರಲಿಲ್ಲ,
(ಮನುಷ್ಯರು ತುಂಬಾ ಫ್ರ್‍ಆಕ್ಟಿಕಲ್ ಆಗಿ ಬಿಟ್ಟಿದ್ದಾರಂತೆ, ಹೌದ ನಮಗೆ ಗೊತ್ತಿಲ್ಲ ಬಿಡಿ, ಯಾರೋ ಹೇಳಿದರು ಅದನ್ನ ನಿಮಗೆ ಹೇಳಿ ಬಿಡಬೇಕಷ್ಟೇ, ವಾಸ್ತವತೆ ಭಾವನೆಗಳನ್ನ ನಿರ್ದಯವಾಗಿ ಕೊಲೆ ಮಾಡುತ್ತದೆ ಅನ್ನೋಕ್ಕೆ ಒಂದು ಸಣ್ಣ ನಿದರ್ಶನ, ಹಾಗೇ ಸುಮ್ಮನೆ ಜಾಸ್ತಿ ಸಿರೀಯಸ್ಸಾಗ ಬೇಡಿ, ಓ ಕೆ , ಇದು ಕೇವಲ, ಕಾಲ್ಪನಿಕವಾದದ್ದು, ಹೀಗೊಂದು ಕಲ್ಪನೆ ಅನ್ನ ಬಹುದು.)

" ಮೆಟ್ಟಲಿಳಿತಾ ಬಂದು ಒಂದು ಮೆಟ್ಟಿಲ ಮೇಲೆ ಕುಳಿತ,
ಓ ಬರಬೇಕು ಸಾಹಿತಿಗಳು (ಸ್ವಾಗತಿಸಿದಳು), ಆಯ್ತಾ ಎಲ್ಲರಿಗೂ ವಿದಾಯ ಹೇಳಿದ್ದು ?
ಇಲ್ಲಾ ಇನ್ನೂ ಒಂದು ಬಾಕಿ ಇತ್ತು, ಅದಕ್ಕೆ ಬಂದೆ ಹೇಳಿ ಹೋಗೋಣ ಅಂತ,
ಮತ್ತೆ ಸುಮ್ಮನಿದ್ದೀಯ, ಹೇಳಿ ಹೋಗೋದು ತಾನೆ,
ಆಯ್ತು, ಆದರೆ ನೀನ್ಯಾಕೆ ಇಲ್ಲೇ ಕೂತಿದ್ಯ,
ಹಾಗೆ ಸುಮ್ಮನೆ,
ಹುಚ್ಚು ಹುಡುಗಿ ಕಣೆ ನೀನು,

ಹೌದು, ಹುಚ್ಚು ಕಲ್ಪನೆಗಳ ಲೋಕ ಕಣೋ ನಂದು, ಹುಚ್ಚು ತವಕಗಳ ನಡುವೆ ವಾಸ್ತವದ ಧಾವಂತನಾ ಸ್ಪಲ್ಪನಾದರೂ ದೂರ ಇಟ್ಟು , ನೋಡೋಣ ಅನ್ನಿಸಿತು, ಅದಕ್ಕೆ ಕೂತೆ, ತಪ್ಪಾ ?
ಗುಡ್, ತುಂಬಾ ತಿಳಿದು ಕೊಂಡಿದ್ಯಾ,
ಸಹವಾಸ ದೋಷ, ಕನ್ನಡ ಕಲಿತಿದ್ದು ನಿಮ್ಮಿಂದ ತಾನೆ,
ನಿನಗೊತ್ತಾ ಜೀವನದಲ್ಲಿ ಯಾರು ಯಾರಿಗೋ ಕಾಯುತ್ತಾ ಕೂರೊದು, ಅವರು ಬರುತ್ತಾರೋ ಇಲ್ಲವೋ ನಮ್ಮನ್ನ ನಾವು ಸಂಭಾಳಿಸಿ ಕೊಳ್ಳೋದು, ನಮಗೆ ನಾವೆ ಸಾಂತ್ವಾನ ಹೇಳೋದು, ಅಲ್ವಾ,

ಸರಿ, ಮುಂದೆ,,,,,,,,,,,,,,,,

ಕಳಿತಾ ಇದ್ದಿನೋ ಜೀವನಾನ ಹೊಸ ಖುಷಿ ಸಂತಸಗಳನ್ನ ನಿರೀಷಿಸುತ್ತಾ,
ಚೆನ್ನಾಗಿದೆ ಕಣೆ ಹುಡುಗಿ, " ಹುಡುಕುದ್ರೆ ದೇವರೆ ಸಿಗುತ್ತಾನಂತೆ" ಇನ್ನ ಅದು ಸಿಗೊಲ್ಲವಾ,
ದೇವ್ರೂ ನೋಡಿದ್ಯಾ ? ,,,,,,,,,,,,,,,, ಇಲ್ಲ, ಖುಷಿ ಸಿಕ್ಕಿದ್ಯಾ ? ,,,,,,,,,,,,,, ಇಂದಲ್ಲಾ ನಾಳೆ ಸಿಗುತ್ತೆ,
ಸರಿ ಬಿಡು, ಕಥೆ ಅಷ್ಟೇ, ನಿರೀಷೆನೇ ಬದುಕು ಅನ್ನೋತರ, ಕವನನೀ ಬರಿತೀಯ, ಅದು ನಿನ್ನ ಖುಷಿ, ಅದನ್ನ ಇನ್ನೊಬ್ಬರು ಓದಿ ಖುಷಿ ಪಡುತ್ತಾರೆ, ಅದು ಅವರ ಖುಷಿ, ಇದೇ ತಾನೆ ಸಿಗುತ್ತಲ್ಲಾ ಖುಷಿ ನಿನ್ನ ನಿರೀಷೆಯದು, ಅದೇ ತಾನೆ?, ಮೊನ್ನೆ ನೀ ಬರೆದಿದ್ದ ಕವನ ಚನ್ನಾಗಿತ್ತು ಕಣೋ ಏನು ಅದು
"ನೀರು ಕೊಡ ತುಂಬಲು ತಡಮಾಡುತ್ತಿದೆ,
ನಿಲ್ಲು ನೀರೆ ನಿಲ್ಲು ನೀರೆ, ನೋಡ ಬೇಕಿದೆ ನಿನ್ನ ಮುಖವನು , ಆಮೇಲೇ

ಚನ್ನಾಗಿದೆ ಕಣೋ, ಸಿಕ್ಕತ್ತಾಳ ಅಂತವಳೂ,
ಅಂತವಳನ್ನು ನೋಡೆ ಬರದಿದ್ದು, ಓದಿದಾಳ ಅವಳು, ಹೌದು,
ನೇರವಾಗೆ ಹೇಳ ಬಹುದಿತ್ತು, ಅನ್ನಿಸೊಲ್ಲವಾ,
ವಾಸ್ತವನಾ ಎದುರಿಸುವುದು ಕಷ್ಟ, ಅದಕ್ಕೆ,
ನಮ್ಮ ಸಮಸ್ಯೆ ಎನ್ ಗೊತ್ತಾ, ಮಾತಾಡ ಬೇಕಾದಾಗ ಸುಮ್ಮನಿರುತ್ತೀವಿ, ಸುಮ್ಮನಿರ ಬೇಕಾದಾಗಲೆಲ್ಲಾ ಮಾತಾಡುತ್ತೀವಿ, ಅಲ್ವ,
ಇರಬಹುದು, ಆ ಷಣಕ್ಕೆ ಅದು ಸರಿ ಅನ್ನಿಸಿರುತ್ತೆ,

ಬದುಕು ಇಷ್ಟೇ ಅಲ್ವಾ ಬೇಡದ ಬೇಕುಗಳಿಗೆ ಕಡಿವಾಣ ಹಾಕೊದು, ಒಂಥರ ಇಲ್ಲಿ ಹರಿತಿರೊ ನೀರಿನತರ, ಇವತ್ತಿದ್ದ ಹಾಗೆ ನಾಳೆ ಇರೊಲ್ಲ, ಈಗ ಇಲ್ಲಿರೊ ನೀರು ಕಣ್ಣುಚ್ಚಿ ಬಿಡೊ ಅಷ್ಟರಲ್ಲಿ ಅಲ್ಲಿರುತ್ತೆ, ಬದುಕು ಒಂದು ರೀತಿ ನೀರಿನ ಹಾಗೆ ಹರಿತಾಯಿರುತ್ತದೆ,
ಹೌದು ನಮ್ಮ್ ಹಾಗೆ ಇವತ್ತು ನೀನು ಇಲ್ಲಿದ್ದೀಯಾ ನಾಳೆ ಯಾವ ದೇಶದಲ್ಲಿರುತ್ತೀಯೋ ?
ನಿನಗೂ ತಲುಪಿದೆ ವಿಷಯ,
ಹೌದು , ನನಗ್ಯಾಕೆ ಹೇಳಿರಲಿಲ್ಲ,
ಹೇಳ ಬೇಕು ಅನ್ನಿಸಲಿಲ್ಲ,
ಅಷ್ಟೊಂದು ದೂರದವನ ನಾನು ?
ಹತ್ತಿರದವನು ಆಗಲಿಲ್ಲ ಅಲ್ಲವಾ ?

ಇಲ್ಲಿ ಊಳಿಯುವಂತಹದ್ದು, ನನ್ನನ್ನ ಇಲ್ಲೇ ಕಟ್ಟಿ ನಿಲ್ಲಿಸುವ ಯಾವ ಬಂಧನ ಕೂಡ ಇಲ್ಲಿಲ್ಲ, ಹೊಸ ಸಂಬಂಧ ಉಂಟಾಗಲೇ ಎಲ್ಲ, ಯಾವುದಕ್ಕೋಸ್ಕರ ಉಳಿಯಲಿ ಇಲ್ಲಿ,

ಹಾಗಾದರೆ, ನೆನಪಿನ ಬುಟ್ಟಿ ಹಿಡಿದು ವಿದೇಶಕ್ಕೆ ಹಾರುತ್ತೀಯ ಅನ್ನೂ,
ಗತಿಸಿದ ನೆನಪುಗಳ ಗುಡ್ಡೆ ಹಾಕ್ಕೊಂಡು, ಯಾಕೆ ಕುಳಿತುಕೊಳ್ಳೋದು ಹೇಳು, ಆ ಜೀವನದ ರಸಗಳಿಗೆಗಳನ್ನ ಖುಷಿಯ ಷಣಗಳನ್ನ ಹೆಕ್ಕಿ ತೆಗಿಬಹುದಲ್ಲಾ ಅಂತ, ಅದಕ್ಕೆ ಅಲ್ವಾ ಹಳೆಯದನ್ನ ನೆನಸಿಕೊಳ್ಳೋದು, ಆದರೆ ಆ ರಸ ಗಳಿಗೆನಾ, ಎತ್ತಿಕೊಳ್ಳೊ ಭರದಲ್ಲಿ ಕೈಹಾಕುದ್ರೆ ಮೆತ್ತಿ ಕೊಳ್ಳೋದು ಬರೀ ಕಹಿ ಘಟನೆನೇ ಅದ್ಯಾಕೋ ಕೆಲವೊಮ್ಮೆ ನೆನಪುಗಳು ನಾವು ಮಾಡಿದ ತಪ್ಪುಗಳು ಅನ್ನಿಸೋಕ್ಕೆ ಶುರು ಆಗುತ್ತೆ, ಆದ್ರೂ ಮರೆತೇನೆಂದ್ರೂ ಮರೆಯಲಿ ಹ್ಯಾಗೆ, ಹೋಗಲಿ ಬಿಡು, ನಾ ಇನ್ನ ಬರ್ತೀನಿ,

ಅಲ್ಲ ಹೋಗ್ತೀನಿ ಅನ್ನೂ, ಇಲ್ಲಾ, (ಅವನ ಮುಖ ತಗ್ಗಿತ್ತು)
ಹಾಗಾದರೆ ನಮ್ಮಿಬ್ಬರ ಮಧ್ಯೆ ಮಾತೇನೂ ಉಳಿದಿಲ್ಲ ಅಲ್ವಾ (ದುಗುಡವಿತ್ತು ಮಾತಲ್ಲಿ)
ಇಲ್ಲ ಏನೂ ಉಳಿದಿಲ್ಲ, (ಕಠೋರತೆ)
ಅವಳಿಗೆ ಈ ಉತ್ತರದ ನಿರೀಷೆ ಇತ್ತು, ಆದರೆ ಮನದ ಮೂಲೆಯಲ್ಲಿ ಯಾವುದೋ ಎಳೆ, ಅವಳನ್ನು ಅವನೊಂದಿಗೆ ಕಡೆ ಮಾತಿಗಾಗಿ ಅಲ್ಲಿ ನಿಲ್ಲಿಸಿತು, ನಿನಗೆ ಗೊತ್ತಾಗಲ್ಲ ಕಣೋ ಅಂತರಂಗದ ತರಂಗಗಳೇ ಹಾಗೆ, ಕಲಕಿದರೆ ಹುಚ್ಚು ಹೊಳೆ, ದಿಕ್ಕೆಟ್ಟ ಪಯಣ, ಕಲಕುವ ಮನಸ್ಸಿಲ್ಲ, ಬರ್ತೀನಿ, ಮತ್ತೆ ಸಿಗುತ್ತೀನೋ, ಇಲ್ಲವೋ ಗೊತ್ತಿಲ್ಲ, ಆದರೆ ನಿನ್ನ ಸಾಹಿತ್ಯದ ಮೂಲಕ ಸದಾ ನಿನ್ನ ಕಾಣುತ್ತೇನೆ. ( ಅವಳು ಅಲ್ಲಿಂದ ಹೊರಟು ಹೋದಳು).

ಪಕ್ಕದಲ್ಲಿ ಬಿದ್ದಿದ್ದ ಕಲ್ಲನ್ನು ತೆಗೆದು ಎಸೆದ ಅದು ನೀರಿಗೆ ಬದಲು ಕಲ್ಲಿಗೆ ತಾಗಿ, ಇವನ ಹಣೆಗೆ ಬಡಿಯಿತು,
ಬದುಕಿನ ಒಂದು, ಒಂದೇ ಒಂದು ಸುಳ್ಳು, ನಮ್ಮನ್ನ ಹತಾಶೆಯಿಂದ ದೂರ ಮಾಡಿದೆ, ಕಣೆ ನೀನು ಮತ್ತೆ ಹಿಂತಿರುಗಿ ಬರೊಲ್ಲ, ಅಂತ ಗೊತ್ತು, ಸತ್ಯ ಹೇಳಿದ್ರೆ ಹೋಗುತ್ತಿರಲಿಲ್ಲ ಆದರೆ ನನ್ನ ಸುಳ್ಳಿಗೆ ನಿಜ ಸ್ವರೂಪವಿಲ್ಲ, ಅಂತ ನಿನಗೂ ಗೊತ್ತು, ನನಗೂ ಗೊತ್ತು,

" ಹೇಳದೆ ಉಳಿದ ಮಾತುಗಳು ನೂರೆಂಟು, ನನ್ನ ಗೆಳತಿ,
ಹೇಳಿ ಹೇಗೆ ತಡೆಯಲಿ, ನಾ ನಿನ್ನ ನೆಲೆ ಇಲ್ಲದ ತಿರುಕ ನಾ,

ಹಾ ನೆಲೆಯಾಗಿಸಬಲ್ಲೆ, ನಾನಿನ್ನ ಮನದ ಮಂಟಪದಲ್ಲಿ ಮಹಾರಾಣೆಯಂತೆ,
ಎಂದೆಂದಿಗೂ ನೀನೆ ಮನದೊಡತಿ, ಈ ಬಾಳ ಪಯಣದಲ್ಲಿ",

ಯಾವತ್ತೂ ನಿನಗೆ ನನ್ನ ನೆನಪು ಕಾಡದಿರಲಿ, ಕಣೆ ಹುಡುಗಿ, ಬದುಕು ಈ ನೀರಿನಂತೆ ಸದಾ ಹರಿಯುತ್ತಿರಲಿ, ನಿನ್ನ ಬಗೆಯ ಪ್ರೀತಿ ಭಾವ ನನ್ನ ಮನದೊಳಗೆ ಅಚ್ಚಳಿಯದೆ ಉಳಿಯಲಿ, ಉಸಿರು ನಿಂತರು ಗೆಳತಿ, ನಿನ್ನ ನೆನಪು ಮಾಸದಿರಲಿ, ನಮ್ಮಿಬ್ಬರ ನಡುವೆ ಅಂತಸ್ತು , ಜಾತಿ, ಭಾಷೆ, ಈ ಎಲ್ಲಾ ಸಮಸ್ಯೆಗಳಿವೆ ಅದು ನಿನಗೆ ಅರಿವಿರದೆ ಎನಿಲ್ಲ, ಆದರೂ ಪ್ರೀತಿ ಕುರುಡು ಕಣೆ ಹುಡುಗಿ, ಮನಸ್ಸು ಕೇಳೊಲ್ಲ, ನೀನೆಂದಿದ್ದರೂ ನನ್ನ ಪಾಲಿಗೆ ಕನ್ನಡಿಯಲ್ಲಿನ ಗಂಟು ಮಾತ್ರ ಅರಿವಿದೆ ನನಗೆ, ಹೇಗೆ ಹೇಳಲೇ ಸತ್ಯ ನಾ ನಿನ್ನ ಪ್ರೀತಿಸುವೆ ಎಂದು, ಬದುಕಿನ ಈ ಷಣ ಹೀಗೆ ಇರಲಿ, ಹೇಳದೆ ಉಳಿದ ಮಾತುಗಳು ನೂರೆಂಟು ನನ್ನ ಗೆಳತಿ,

ಮಾತು ಆಡಿದರೆ ಹೋಯ್ತು ಮುತ್ತು ಹೊಡೆದರೆ ಹೋಯ್ತು, ನಿಜ ಆದರೆ ಆಡದ ಮಾತುಗಳು ಸಹ ಬದುಕಿನ ಅಮೂಲ್ಯ ವಸ್ತುವನ್ನ ಕಳೆದು ಕೊಳ್ಳುವಂತೆ ಮಾಡುತ್ತದೆ, ಅಲ್ಲವಾ, ಇಲ್ಲಿ ೨ ಜೀವಗಳಿಲ್ಲ , ೨ ಮನಸ್ಸಿದೆ, ಮನಸ್ಸಿನ ಮಾತು, ಮನಸ್ಸೇ ಅರಿಯಬೇಕು, ತುಟಿತುದಿಗೆ ಬಂದರೂ ಮಾತು ಕೆಲವೊಮ್ಮೆ ಹೊರ ಬರದೆ, ಅಲ್ಲೇ ಉಳಿಯುತ್ತೇ, ಬಹುಶ: ವ್ಯರ್ಥ ಆಗೋ ಮಾತು ಯಾಕೆ ಅಂತಿರಬೇಕು, ಒಂದಂತು ನಿಜ ತಪ್ಪೋ ಸರಿನೋ ಆ ಸಮಯದ ಮಾತು ಆಗ ಆಡುದ್ರೆ ಚಂದ, ಇಲ್ಲ ಅಂದ್ರೆ ಅದಕ್ಕೆ ನೆಲೆ , ಬೆಲೆ ಎರಡೂ ಇರೊಲ್ಲ, " ಹೊಡೆದೊದ ಮುತ್ತು, ಕಳೆದೊದ ಹೊತ್ತು ಮತ್ತೆ ಸಿಗೊಲ್ಲ" ಅಲ್ವಾ, ಮೊದಲೇ ನಿರ್ಧರಿಸಿ ಕೊಂಡಿದ್ದರು, ವ್ಯರ್ಥವಾಗಿ ಸಂಭಾಷಣೆ ನಡೆಸುತ್ತೇವಲ್ಲಾ ಹಾಗೆ, ವೃಥಾ ಕಾಲಾಹರಣ - ಕಾಲಾಹರಣವಲ್ಲ ಕಾಡೊ ಮಾತುಗಳನ್ನ ಸುಳ್ಳಾಗಿ ಆದರೂ ಹೇಳಿ ಬಿಡುವ ತವಕ, ಆದರೂ ವಾಸ್ತವದ ಅರಿವು, ಭಾವನೆಗಳಿಗಿಂತ ಹಿರಿದಾದುದ್ದಾ ಈ ಪ್ರಶ್ನೆ ನಮ್ಮನ್ನ ಕಾಡದೆ ಬಿಡದು ಅಲ್ಲವಾ ?

ಇಬ್ಬರೂ ಸೋತರು. ಮರೀಚಿಕೆಯಾದರೂ . ಅಲ್ಲಲ್ಲ ಅವರ ಭಾಷೆಯಲ್ಲೇ ಹೇಳುವುದಾದರೆ ಅದು ವಿಧಿ! ಆದ್ರೂ ಗೆದ್ದವ ಅವನಲ್ಲವೇ? ಹಾಗಂದುಕೊಂಡರೆ ನೀವು ಸೋತು ಬಿಡುತ್ತೀರಿ! ಹಾಗಾಗಿಯೇ ಅದನ್ನು ಈಗಲೂ ಕನ್ನಡಿಯೊಳಗಿನ ಗಂಟು ಅಂತಲೇ ಕರೆದ್ದಿದ್ದು, ಅವಳು ಗೆಲ್ಲಲಿಲ್ಲ , ಇವನು ಸೋಲಲಿಲ್ಲ, ಗೆದ್ದ ಭಾವನೆ ಮನದಲ್ಲಿ, ಬದುಕನ್ನ ಗೆದ್ದೆವು ಅಂದು ಕೊಂಡರು,
ಆದರೆ ನಿಜವಾಗಲೂ ಬದುಕಲ್ಲಿ ಸೋತರು, ಕನ್ನಡಿಯೊಳಗಿನ ಗಂಟು ಕನ್ನಡಿಯಲ್ಲೇ ಉಳಿಯಿತು.