ಕನ್ನಡಿಯ ಮುಂದೆ
ಕವನ
ಕನ್ನಡಿಯಲ್ಲಿ ನನ್ನ
ತಲೆಯ ನೋಡಿಕೊಂಡೆ
ಕೂದಲು ಬೆಳ್ಳಿಯ ತರಹ
ಬೆಳ್ಳಗಾಗಿತ್ತು
ಮುಖವನ್ನು ನೋಡಿದಾಗ
ಸುಕ್ಕುಗಟ್ಟಿತ್ತು, ಕಣ್ಣು ಒಳಸೇರಿತ್ತು
ಚರ್ಮ ಕಪ್ಪಾಗಿ ತುಟಿ ಒಣಗಿತ್ತು
ಕೈಗಳು ತ್ರಾಣವಿಲ್ಲದೆ ಜೋತು ಬಿದ್ದಿದ್ದವು
ಹೊಟ್ಟೆ ಊದಿತ್ತು ಕಾಲುಗಳು ಬೆಂಡಾಗಿ
ನೋವೆಂದು ಕೂಗುತ್ತಿತ್ತು
ಸೊಂಟವು ತ್ರಾಣವೇ ಇಲ್ಲದಂತೆ ಬಿದ್ದುಕೊಂಡಿತ್ತು
ಶರೀರದ ಪ್ರತಿಯೊಂದು ಜಾಗವೂ
ಮುಟ್ಟಿದರೆ ಮುನಿಯಾಗಿತ್ತು
ಆದರೆ ಆದರೆ ಹೃದಯ ಮಾತ್ರ ಮೊದಲಿನಂತಿತ್ತು
ಪ್ರೀತಿಯಿಂದ ನನ್ನವರು ಎಲ್ಲೆಂದು ಕೂಗುತ್ತಿತ್ತು
ಬಂಧು ಬಾಂಧವರು ಸ್ನೇಹಿತರ ಬಗ್ಗೆ ಕೇಳುತ್ತಿತ್ತು
ಜಗತ್ತಿನ ಆಗುಹೋಗುಗಳ ಬಗ್ಗೆ ತಲೆಕಡಿಸಿಕೊಳ್ಳುತ್ತಿತ್ತು
ತನ್ನ ಮಕ್ಕಳ ಮುಂದಿನ ಭವಿಷ್ಯಕ್ಕಾಗಿ ಚಿಂತಿಸುತ್ತಿತ್ತು
ತನುವು ಸುಕ್ಕಾದರೂ ಹೃದಯ ಸುಕ್ಕಾಗಲಿಲ್ಲವೆನ್ನುತ್ತಿತ್ತು !
-ಹಾ ಮ ಸತೀಶ, ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್