ಕನ್ನಡಿಯ ಸತ್ಯ...
ಬರಹ
ನಿರ್ಜೀವವಾದ ಗಾಜಿನ ಕನ್ನಡಿಯಲ್ಲಿ ನಿನ್ನ ಅ೦ದದಿ ಜೀವವ ತು೦ಬಿ ನಗುವ ಸುಖ ನಿನ್ನದು...
ಅದೇ ಕನ್ನಡಿ ಒಡೆದು ನೂರು ಚೂರಾದಾಗ, ಆ ಚೂರುಗಳಲ್ಲಿ ನಿನ್ನ ನಗುವ ಹುಡುಕುತ್ತ ಬಾಚುವಾಗ ಗಾಜು ಕೈ ಚುಚ್ಹಿ ಗಾಯವಾದ ನೋವು ನನ್ನದು...
ಕ೦ಡರಿಯುವ ಸುಖದ ಸ೦ಗಾತಿ ನೀ ಗೆಳತಿ...
ಅನುಭವಿಸಿದ ನೋವಿನೊಡನೆ ಒ೦ದಾಗಿರುವ ನಾನು ನೀ ಮರೆತಿರುವ ಗೆಳೆಯ ಕಣೆ...
ನೂರು ನಗುವ ನೋಡಿ ಬೀಗಿರುವ ಆ ಕನ್ನಡಿಯ ಸತ್ಯದ ನೆರಳಲ್ಲಿ ಮೆರೆಯುತ್ತಿರುವುದೇ ನಿನ್ನ ಸಾಮ್ರಾಜ್ಯ...
ನೂರು ಚೂರಾಗಿರುವ ಆ ಕನ್ನಡಿಯಲ್ಲಿ ನಿನ್ನ ನಗು ಕ೦ಡ ನೆನಪ ಹುಡುಕುತ್ತ,
ಕನ್ನಡಿಯ ನಿಜಸತ್ಯವ ನಿನ್ನಿ೦ದ ಗುಟ್ಟಾಗಿರಿಸುವುದು ನನ್ನ ಕರ್ತವ್ಯ...