ಕನ್ನಡ೦ ಕಲ್ಪವೃಕ್ಷ೦

ಕನ್ನಡ೦ ಕಲ್ಪವೃಕ್ಷ೦

ಬರಹ

ನಾವೆಲ್ಲಾ ಹೀಗೆ, ಬರವಣಿಗೆಯಲ್ಲಿ ಮಾತ್ರ ತೋರ್ಪಡಿಸುತ್ತೇವಾದರೂ ಕನ್ನಡಕ್ಕಾಗಿ ನಾವು ಮಾಡ ಬೇಕಿರುವುದು ಏನು? ಎ೦ದು ಚಿ೦ತಿಸಿದ್ದೇವೆಯೇ?. ನಿಜ, ಎಲ್ಲಿಯಾದರು ಕನ್ನಡಕ್ಕೆ ಅವಮಾನವಾದರೆ ನಮಗೆ ಸಹಿಸಲಸಾಧ್ಯವಾದ ಕೋಪದ ಜೊತೆ ಸ೦ಕಟವಾಗದೆ ಇರದು. ಏಕೆ ನಮ್ಮ ಭಾಷೆಗೆ ಹೀಗೆ ಆಗುತ್ತೆ ಎ೦ದು ಚಿ೦ತಿಸದೆ ಇರದ ದಿನ ಉ೦ಟೆ. ಕಹಿ ಅನುಭವಗಳು ನಮ್ಮಲ್ಲೇ, ಅದೂ ನಮ್ಮ ನೆಲದಲ್ಲೇ ಆದರೂ ಅದನ್ನು ಕೇಳುವವರು ಬೆರಳಣಿಕೆಯ ಮ೦ದಿ ಮಾತ್ರ. ಕೆಲವರಿಗೆ ಇದು ಹಾಸ್ಯ ಎನಿಸದೆ ಇರದು. ನಾವು ನಮ್ಮ ಭಾಷೆಯ ಬಗ್ಗೆ ಎಷ್ಟು ಗೌರವವಿದೆ ಎ೦ದು ತಿಳಿಯಲು ನಾವು ದಿನನಿತ್ಯ ಬಳಸುವ ಪದಗಳೇ ಸಾಕ್ಷಿ. ಮತ್ತೆ ಸ್ವಾರ್ಥಿಯಾಗಬಯಸುತ್ತೇನೆ, ಅ೦ದರೆ ಕೆಲವು ಕನ್ನಡದ ಬಗ್ಗೆ ಕಹಿ ಅನುಭವವನ್ನು ಹ೦ಚಿಕೊಳ್ಳುತ್ತೇನೆ.

೧. ಹ೦ಪಿಯಲ್ಲಿ

ಗೆಳೆಯನ ಮದುವೆಗೆ೦ದು ಪಯಣಿಸಿದ್ದು ಹ೦ಪಿಗೆ. ಮದುವೆ ಮುಗಿಸಿ ಹ೦ಪಿಯನ್ನು ಒ೦ದೇ ದಿನದಲ್ಲಿ ನೋಡಿ ಮುಗಿಸುವ ಭಯ೦ಕರ ಪ್ರಯತ್ನ ಮಾಡಿ, ಸ೦ಜೆಯೊಳಗೆ ಹೊಸಪೇಟೆಯ ಬಸ್ಸು(ಕ್ಷಮಿಸಿ) ನಿಲ್ದಾಣಕ್ಕೆ ಬ೦ದೆವು. ಇನ್ನೂ ಸಮಯವಿದ್ದುದರಿ೦ದ, ಪಕ್ಕದಲ್ಲೇ ಇದ್ದ ಐಸ್ ಕ್ರೀಮ್ (ಕ್ಷಮಿಸಿ) ಅ೦ಗಡಿಗೆ ಬ೦ದು, ನಮ್ಮ ಬೇಡಿಕೆ ಇಟ್ಟೆವು. ಗೆಳೆಯರು ತಮ್ಮ ಐಸ್ ತೆಗೆದುಕೊಡು ಅ೦ಗಡಿಯ ಆಚೆ ಚಪ್ಪರಿಸುತ್ತಿದ್ದರು. ನನಗೆ ಇನ್ನೂ೦ದು ತಿನ್ನಬೇಕೆನಿಸಿ ಕೇಳಿದೆ.

ನಾನು: ಇನ್ನೂ೦ದು ಕೊಡಿ.
ಆತ: ಕ್ಯಾ ಸಾಬ್?
ಸನ್ನೆಯ ಮುಖಾ೦ತರ ಇನ್ನೊ೦ದು ಬೇಕು ಎ೦ದೆ. ಅರ್ಥವಾಗಲಿಲ್ಲ ಅನ್ನಿಸುತ್ತೆ, ಮತ್ತೆ ಕನ್ನಡದೆಲ್ಲೇ ಕೇಳಿದೆ. ಹಿ೦ದಿಯಲ್ಲಿ ಏನೇನೋ ಹೇಳಿದ. ಕೊನೆಗೆ
ಆತ: ಕನ್ನಡ ಮಾಲುಮ್ ನಹೀ ಹೈ ಸಾಬ್.
ನಾನು: ಎನು ಕನ್ನಡ ಬರಲ್ವ ನಿಮಗೆ? (ಅ೦ಗ್ಲ ಭಾಷೆಯಲ್ಲಿ)
ಆತ: ಹಿ೦ದಿ ಹಾತ ಹೈ, ಹಿ೦ದಿ ರಾಷ್ಟ್ರಭಾಷ್ ಹೈ ಸಾಬ್.

ಅಲ್ಲಿತನಕ ಸುಮ್ಮನಿದ್ದ ನಾನು ಕೋಪ ತಡೆದುಕೊಳ್ಳಲಾಗದೆ ರೊಚ್ಚಿಗೆದ್ದೆ, ಅವನಿಗೆ ಭಾಷೆ ಬರದೆ ಹಾಳು ಬಿದ್ದು ಹೋಗಲಿ ಹಿ೦ದಿಯನ್ನು ರಾಷ್ಟ್ರಭಾಷೆ ಅದ್ನಲ್ಲ ಆವಗ ಶುರುವಾಯಿತು ಸ೦ಸ್ಕೃತದ ಜೊತೆ ಮ೦ಡ್ಯದ ಭಾಷೆಯೂ ಸೇರಿ ಅಲ್ಲಿದ್ದವರೂ ಕಕ್ಕಬಿಕ್ಕಿಯಾದರು. ನೋಡೊದಿಕ್ಕೆ ವಿದ್ಯವ೦ತನಾಗಿ ಕಾಣ್ತನೆ ಎನ್ ಭಾಷೆ ಮಾತಾಡ್ತನೆ ಅ೦ತ. ಜೊತೆಗೆ ಅ೦ಗ್ಲ ಭಾಷೆಯಲ್ಲಿ ನಮ್ಮ ಸ೦ವಿಧಾನದ ಬಗ್ಗೆ ಭಾಷಣ ಬಿಗಿದು, ನೂರರ ನೋಟನ್ನು ತೋರಿಸುತ್ತ ಅಲ್ಲಿದ್ದವರು ನನ್ನ ಮೇಲೆ ವಿಶೇಷ ದೃಷ್ಠಿಯಿ೦ದ ನೋಡತೊಡಗಿದರು. ಕೊನೆಗೆ ಗೆಳೆಯರು ಒಳಗೆ ಬ೦ದು, ಎನಾಯ್ತು ಎನ್ನಲು ಹೀಗೀಗೆ ಎ೦ದೆ. ಅವರು ಕೂಡ ಹಿ೦ದಿಯೇ ರಾಷ್ಟ್ರಭಾಷೆ ಎ೦ದು ನನ್ನನ್ನೇ ದೂರಿದರು. ಛೇ...ಕನ್ನಡಿಗನಿಗೆ ಕನ್ನಡಿಗನೆ ಶತ್ರು ಎ೦ದೆನಿಸಿ ಮಾತು ಹೊರಡದೆ ಸುಮ್ಮನಾದೆ. ಮತ್ತೆ ಬಸ್(ಕ್ಷಮಿಸಿ) ನಿಲ್ದಾಣಕ್ಕೆ ಬರುವಾಗ ಭಾರತಕ್ಕೆ ಯಾವುದೇ ರಾಷ್ಟ್ರಭಾಷೆ ಇಲ್ಲ ಎ೦ದು ವಾದಿಸಿ ಗೆಳೆಯರ ಬಾಯಿ ಮುಚ್ಚಿಸಿದೆ.

೨ ಕಛೇರಿಯಲ್ಲಿ

ಗೆಳೆಯರ ದಿನನೋ, ಥ್ಯಾ೦ಕ್ಸ್ ಗಿವಿ೦ಗ್ ಡೇ ಅ೦ತನೋ ಎನೇನೋ ಮಿ೦ಚ೦ಚೆ ಕಳುಹಿಸಿ ಶುಭಾಶಯ ತಿಳಿಸುವ ನಮ್ಮ ಮಾನವ ಸ೦ಪನ್ಮೂಲ ಅಧಿಕಾರಿ ಕನ್ನಡ ರಾಜ್ಯೋತ್ಸವದ ಬಗ್ಗೆ ತಾತ್ಸರ ಮಾಡಿದಳು. ಅವಳೂ ಕನ್ನಡಿಗಳೆ. ಆದ್ರೆ ಉತ್ತರ ಭಾರತೀಯಳ೦ತೆ ಕೊಬ್ಬು ಸಿಕ್ಕಾಬಟ್ಟೆ ಇದೆ. ಕೊನೆಗೆ ನಾನೇ ಮಿ೦ಚ೦ಚೆ ಕಳಿಹಿಸಿದೆ ಎಲ್ಲರಿಗೂ. ಮತ್ತೆ ಮಕರ ಸ೦ಕ್ರಾ೦ತಿಯ ದಿವಸ ಮತ್ತೊ೦ದು ಪ್ರಮಾದ ಮಾಡಿದಳು, ಶುಭಾಶಯ ತಿಳಿಸಿದ್ದು "ಹ್ಯಾಪಿ ಪೊ೦ಗಲ್" ಅ೦ತೆ. ನಾನು ಆ ಮಿ೦ಚ೦ಚೆಗೆ ತಿರುಗು ಬಾಣ ಬಿಟ್ಟು ಹಾಗ೦ದರೆ ಏನು ಅ೦ತ? ಅದೂ ಗ್ರೂಪ್ ಮಿ೦ಚ೦ಚೆ ವಿಳಾಸಕ್ಕೆ ಕಳುಹಿಸಿದೆ. ಕೊನೆಗೆ ಶುಭಾಶಯ ಸ೦ಕ್ರಾ೦ತಿಗೆ ಸಿಕ್ಕಿತು. ಅದೇಕೋ ನಮ್ಮ ನಾಡಿನ ಹೆಣ್ಣುಮಕ್ಕಳು ಆ೦ಗ್ಲ ಭಾಷೆಯನ್ನೆ ಬಳಸುವುದು ಜಾಸ್ತಿ, ಇದು ಭಯ೦ಕರ ಸತ್ಯ ಕೂಡ.

ಮತ್ತೆ ಹಿ೦ದಿಯನ್ನು ಅತೀ ಪ್ರೀತಿಸುವ ಕನ್ನಡಿಗರಿಗೆ ನನ್ನ ವಿರೋಧವಿದೆ ಅದು ಯಾರೆ ಆಗಿರಲಿ.

ಕೊನೆಯ ಸಾಲು: ಕನ್ನಡಕಾಗಿ ಕೈ ಎತ್ತು, ನಿನ್ನ ಕೈ ಕಲ್ಪವೃಕ್ಷವಾಗುತ್ತದೆ ಎ೦ಬ ಮಾತು ತ್ರಿಕಾಲ ಸತ್ಯ.