ಕನ್ನಡ ಎಲ್ಲಿಲ್ಲ...?
ಕವನ
ಜಯ ಕನ್ನಡ ಜಯ ಕನ್ನಡ ...
ಜಯ ಜಯ ಜಯ ಕನ್ನಡ ...
ಶ್ರೀಗಂಧದ ಕಂಪಲ್ಲಿ ಸಿರಿಗನ್ನಡ
ಉಸಿರುಸಿರಿನಲ್ಲು ಸವಿಗನ್ನಡ.
ನಿಸರ್ಗದ ಬೆಳಕಿನಲ್ಲಿ ಕನ್ನಡ
ಜುಳುಜುಳು ಜಲದಲ್ಲಿ ಕನ್ನಡ
ತಂಗಾಳಿಯ ತಂಪಿನಲ್ಲಿ ಕನ್ನಡ
ಕೋಗಿಲೆಯ ರಾಗದಲ್ಲಿ ಕನ್ನಡ.
ಪಂಪ ರನ್ನ ಜನ್ನರೆಲ್ಲರ ಕನ್ನಡ
ಕುಮಾರವ್ಯಾಸ ಲಾಲಿಪ ಕನ್ನಡ
ತನುವಿನ ಮನದಲ್ಲಿಹ ಕನ್ನಡ
ಭಕ್ತಿ ಭಾವ ತತ್ವದಲ್ಲಿಹ ಕನ್ನಡ.
ನುಡಿಯಲ್ಲಿ ಮಧುರತೆಯ ಕನ್ನಡ
ಕನ್ನಡವೇ ಉಸಿರು ಹಸಿರು ಕನ್ನಡ
ತೆಂಗು ಕಂಗು ಕದಳಿಯಲ್ಲಿ ಕನ್ನಡ
ತರು ಲತೆಗಳ ಬಳುಕಿನಲ್ಲಿ ಕನ್ನಡ .
ಬೆಟ್ಟ ಗುಡ್ಡ ಭವ್ಯತೆಯಲ್ಲಿ ಕನ್ನಡ
ಜೋಗದ ಸಿರಿಯಲ್ಲಡಗಿದ ಕನ್ನಡ
ಭಾವೈಕ್ಯತೆಯ ಬೆರಗಿನಲ್ಲಿ ಕನ್ನಡ
ಸಾಹಿತ್ಯದ ಮುಕುಟಮಣಿ ಕನ್ನಡ.
-ವೀಣಾ ಕೃಷ್ಣಮೂರ್ತಿ, ದಾವಣಗೆರೆ.
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್