ಕನ್ನಡ ಚಿತ್ರಗೀತೆಗಳು 2023

ಈ ಚಿತ್ರವು 21 ಜುಲೈ 2023 ರಂದು ಬಿಡುಗಡೆ ಆಗಲಿದೆ. ಅದರ ಹಾಡುಗಳನ್ನು ಯೂಟ್ಯೂಬ್ ನಲ್ಲಿ ಕೇಳಿ ನೋಡಿದಾಗ ನನಗೆ ಅನಿಸಿದ್ದು ಹೀಗೆ.

https://youtu.be/-qkQ_wEAF0o

'ಸುಮ್ಮನೆ ಪ್ರೀತಿಸು ಸುಮ್ಮನೆ ' - ಇದು ನಾಯಕ ನಾಯಕಿಯ ಪ್ರೇಮಗೀತೆ. ಪ್ರೇಮಗೀತೆ ಎಂದಾಗಲೆಲ್ಲ ನನಗೆ ಇಷ್ಟವಾಗುವ ಸಾಧ್ಯತೆ ಹೆಚ್ಚೇನೋ?. ಕೇಳಲು ಇಂಪಾಗಿದೆ.ಹಿನ್ನೆಲೆಯಲ್ಲಿ ಸುಂದರವಾದ ನಿಸರ್ಗ ದೃಶ್ಯಗಳಿವೆ. 

https://youtu.be/4cMYXqgmCks

'ಲಾಲಿ ಲಾಲಿ' - ಇದು ಒಂದು ಮಗು ತನ್ನ ತಾಯಿಗೆ ಹಾಡುವ ಲಾಲಿಪದ . ಕನ್ನಡ ಚಲನಚಿತ್ರರಂಗದಲ್ಲಿ ಇದು ಮೊಟ್ಟಮೊದಲ ಬಾರಿಯಂತೆ. 

https://youtu.be/CWvgcbxwoEA

'ಓ ಮೈ ಲವ್' - ಇದು ನಾಯಕ ತನ್ನ ನಾಯಕಿಯ ಮುಂದೆ ತನ್ನ ಸ್ನೇಹಿತರೊಂದಿಗೆ ಅವಳ ಕುರಿತು ಕುಣಿದು ಕುಪ್ಪಳಿಸುತ್ತಾ ಹಾಡುವ ಹಾಡು. 

https://youtu.be/4RoheQoyNdE,ಅಂಬುಜ ಅಂಬುಜ ' -ಇದು ಆ ಚಿತ್ರದ ಟೈಟಲ್ ಟ್ರ್ಯಾಕ್ . ಇದನ್ನು ಕೇಳಿದಾಗ ಈ ಚಿತ್ರವು ಒಂದು ಹಾರರ್ ಚಿತ್ರ ಇರಬೇಕೆಂಬ ಸಂಶಯವು ಉಂಟಾಗಿ ಈ ಚಿತ್ರದ ಟ್ರೈಲರ್ ನೋಡಿ ಖಾತರಿ ಆಯಿತು. 

'ಓ ಮನಸೇ' ಹೆಸರಿನ ಚಿತ್ರವು 2023 ರ ಜುಲೈ 14ರಂದು ಬಿಡುಗಡೆಯಾಗಿದೆ.

ಅದರ ಒಂದು ಹಾಡು 'ನೀಲಿ ಬಾನಲ್ಲೂ ನೀನೇ ನೀನೆ , ಖಾಲೀ ಹಾಳೇಲೂ ನೀನೇ ನೀನೇ ' ನಾಯಕ ನಾಯಕಿಯರ ಯುಗಳ ಗೀತೆ. ಸಾಹಿತ್ಯ ಮತ್ತು ಸಂಗೀತ ಪರವಾಗಿಲ್ಲ. ಸುಂದರವಾದ ಕಡಲಿನ ದೃಶ್ಯಗಳು ಹಿನ್ನೆಲೆಯಲ್ಲಿವೆ. ಈ ಹಾಡನ್ನು https://youtu.be/9YzaNpI1P0U ಇಲ್ಲಿ ನೋಡಬಹುದು.

https://youtu.be/0SpBD5p0GPg ಉಡುಗೊರೆಯ ಕೊಡಲಿ ಏನು? ಇದು ನಾಯಕ ನಾಯಕಿಯರ ನೇತೃತ್ವದ ಸಮೂಹದ ಚುರುಕು ಕುಣಿತದ ಗೀತೆ, ಸಾಹಿತ್ಯ ಸಂಗೀತ ಕೂಡ ಪರವಾಗಿಲ್ಲ.

https://youtu.be/3INNob2IDzw

ಮುದ್ದು ಮುದ್ದಾಗಿ ಎಂದು ಶುರುವಾಗುವ ಈ ಯುಗಳ ಹಾಡೂ ಪರವಾಗಿಲ್ಲ . ಹಿನ್ನೆಲೆಯಲ್ಲಿ ಯಾವ ದೇಶದ ದೃಶ್ಯಗಳು ಅಂತ ಗೊತ್ತಾಗಲಿಲ್ಲ.

 

ಅಪರೂಪ ಹೆಸರಿನ ಸಿನಿಮಾ 14 ಜುಲೈ 2023 ರಂದು ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ಇರುವ ಹಾಡುಗಳನ್ನು ಇವತ್ತು ಯೂ ಟ್ಯೂಬ್ ನಲ್ಲಿ ಹುಡುಕಿ ನೋಡಿದೆ.

https://youtu.be/vMMdi2ntpA0

ಅನಿಸಿದೆ ಏಕೋ - ಇದು ನಾಯಕ ನಾಯಕಿಯರ ಮುಗಳ ಗೀತೆ, ಪ್ರೇಮಗೀತೆ . ಮೊದಲ ಬಾರಿಯೇ ಗಮನ ಸೆಳೆಯುವಷ್ಟು ಇಂಪಾಗಿದೆ . ಮತ್ತೆ ಕೇಳಬೇಕು ಎನಿಸುವಂತಿದೆ. ಮತ್ತೆ ಕೇಳಿದರೆ ಮತ್ತೆ ಮತ್ತೆ ಕೇಳಬೇಕು ಎನಿಸುತ್ತದೆ. ಹಿನ್ನೆಲೆಯಲ್ಲಿ ಹಿಮಾಲಯ ಇದೆ. ಮತ್ತೆ ಮತ್ತೆ ನೋಡುವ ಹಾಗೂ ಇದೆ. ಒಟ್ಟಾರೆ ಸಾಹಿತ್ಯ ಮತ್ತು ಸಂಗೀತ ಚೆನ್ನಾಗಿವೆ.

https://youtu.be/rX3lnrV-cr0

ಇದು 'ಓ ಮೈ ಸ್ಪೀಟೀ ಬೇಬಿ ' ಎಂಬ ಹಾಡು . ಇದರಲ್ಲಿ ನಾಯಕ ನಾಯಕಿಯ ಕುರಿತು ಹಾಡುತ್ತ ಅವಳ ಸುತ್ತ ಕುಣಿಯುತ್ತಾನೆ. ಈ ಹಾಡಿನ ಸಾಹಿತ್ಯ, ಸಂಗೀತ, ಕುಣಿತ ಕೂಡ ಇಷ್ಟವಾಗಬಹುದು. ಕೇಳಿ ನೋಡಿ.

https://youtu.be/h1xhdj3MiY8 - 'ಲವ್ ಗೆ ನೋ ನೋ '

ಇದು ಒಂದು ಭಗ್ನ ಪ್ರೇಮ (ಬ್ರೆಕಪ್)ದ ಹಾಡು . ನಾಯಕನ ಕುಣಿತ ಇದೆ.

https://youtu.be/eQlrUpEUYSI

ಯು ಆರ್ ಮೈ ಕರೀನಾ - ಇದು ನಾಯಕ ನಾಯಕಿಯ ಕುಣಿತದ ಹಾಡು

. ಇದರ ಸಾಹಿತ್ಯ( ಯಾವ ಆ್ಯಪ್ ನಲ್ಲಿ ಬ್ರಹ್ಮ ನಿನ್ನನ್ನು ಸೃಷ್ಟಿ ಮಾಡಿದ ಮುಂತಾದ ಸಾಲುಗಳಿವೆ), ಸಂಗೀತ ಯುವಕ ಯುವತಿಯರಿಗೆ ಇಷ್ಟ ಆಗಬಹುದು.

ಒಟ್ಟಾರೆ ಹೇಳುವುದಾದರೆ ಸಾಹಿತ್ಯ, ಸಂಗೀತ, ಲಯ, ಕುಣಿತ ಚೆನ್ನಾಗಿವೆ. ಕೇಳಬಹುದು ಮತ್ತು ನೋಡಬಹುದು. ಜನಕ್ಕೆ ಇಷ್ಟವಾಗಬಹುದು.