ಕನ್ನಡ ತಾಯಿಗೆ ಶರಣು
ಕವನ
ಕನ್ನಡ ತಾಯಿಯ ಮಕ್ಕಳು ನಾವು
ಕನ್ನಡ ನುಡಿಯನ್ನೇ ಆರಾಧಿಸುವೆವು
ಕನ್ನಡದ ಕಂಪನು ಎಲ್ಲೆಡೆ ಪಸರಿಸಿ
ಕರುನಾಡಿನ ಕೀರ್ತಿ ಬೆಳೆಸುವೆವು..!!
ಕನ್ನಡ ಮಣ್ಣಲ್ಲಿ ಹುಟ್ಟಿ ಬೆಳೆದಿರುವೆವು
ಕನ್ನಡ ಮಾತೆಯ ಕಿರೀಟ ಹೊತ್ತಿರುವೆವು
ಕನ್ನಡಾಂಬೆಯ ಸೇವೆಯ ಮಾಡುತಲಿ
ಕನ್ನಡ ಭಾಷೆಯ ಉಳಿವಿಗೆ ಶ್ರಮಿಸುವೆವು..!!
ಕನ್ನಡ ಸೇವೆಗೆ ಕಟ್ಟಿ ಬಧ್ಧರಾಗಿರುವೆವು
ಕರುನಾಡಿನ ಸಂಸ್ಕೃತಿ ಎತ್ತಿ ಹಿಡಿಯುವೆವು
ಕನ್ನಡದ ಬಗ್ಗೆ ಹಗುರವಾಗಿ ಮಾತನಾಡಿದರೆ
ಕೈಯಲ್ಲಿ ಖಡ್ಗ ಹಿಡಿದು ಹೋರಾಡುವೆವು..!!
ಕನ್ನಡದ ಕವಿಗಳು ಎಲ್ಲರೂ ಸೇರುವೆವು
ಕನ್ನಡ ಸಾಹಿತ್ಯದ ತೇರನ್ನು ಎಳೆಯುವೆವು
ನಾಡ ಧ್ವಜವನ್ನು ಮುಗಿಲೆತ್ತರಕ್ಕೆ ಹಾರಿಸಿ
ಕನ್ನಡಾಭಿಮಾನ ಎಲ್ಲೆಡೆಯೂ ಬೆಳೆಸುವೆವು..!!
ಕನ್ನಡ ರಾಜ್ಯೋತ್ಸವ ಆಚರಿಸುವೇವು
ಕನ್ನಡ ತಾಯಿಗೆ ಪುಷ್ಪವ ಅರ್ಪಿಸುವೆವು
ತಾಯಿ ಭುವನೇಶ್ವರಿಯ ಪಾದಕ್ಕೆ ನಮಿಸಿ
ಕರುನಾಡ ರಾಜಾಂಬೆಗೆ ಶರಣೆನ್ನುವೆವು..!!
-‘ಪುಷ್ಪಕವಿ’ ಉಮೇಶ ಹೂಗಾರ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್