ಕನ್ನಡ ನಾಡು-ನುಡಿ (೩) : ಭಾಷೆಯಲ್ಲಿ ಬದಲಾವಣೆ

ಕನ್ನಡ ನಾಡು-ನುಡಿ (೩) : ಭಾಷೆಯಲ್ಲಿ ಬದಲಾವಣೆ

ಸಂಸ್ಕೃತ ವರ್ಣಮಾಲೆಯ ಹಿನ್ನೆಲೆಯನ್ನು ಇಟ್ಟುಕೊಂಡು *ಕನ್ನಡ* ವರ್ಣಮಾಲೆಯ ರಚನೆಯಾಗಿದೆ ಎಂದು ಬಲ್ಲ ಮೂಲಗಳಿಂದ ತಿಳಿದು ಬರುತ್ತಿದೆ. ಕನ್ನಡದ ವರ್ಣಮಾಲೆಯ ಬಗ್ಗೆ , ಒಟ್ಟು ಎಷ್ಟು ಅಕ್ಷರಗಳನ್ನು ಒಳಗೊಂಡಿದೆ ಎಂಬ ಬಗ್ಗೆ, ವಿದ್ವಾಂಸರಲ್ಲಿಯೇ ಏಕತಾನತೆಯಿಲ್ಲ. ಭಾಷಾ ಬೆಳವಣಿಗೆಯ ಹಂತಗಳು, ಭಾಷಾ ಪ್ರಭೇದಗಳು ಬದಲಾವಣೆಯಾದಂತೆ, ಕನ್ನಡದ ಕೆಲವು ಅಕ್ಷರಗಳು ಇಲ್ಲವಾಯಿತು. ಹಳತು ಹೋಗಿ ಹೊಸ ಅಕ್ಷರಗಳು ಬಂದು ಸೇರಿಕೊಂಡಿತು.

ಹೊಸಗನ್ನಡ ವರ್ಣಮಾಲೆಯಲ್ಲಿ ಇತ್ತೀಚಿನವರೆಗೂ *೫೦*ಅಕ್ಷರಗಳಿತ್ತು. ಈಗ ಪ್ರಕೃತ *೪೯* ಅಕ್ಷರಗಳಿವೆ. ಕನ್ನಡ ಭಾಷೆಯಲ್ಲಿ *ಸಂಧಿಗಳು, ಸಮಾಸಗಳು, ಲಿಂಗ-ವಚನಗಳು, ನಾಮ ಪ್ರಕರಣಗಳು, ವಿಭಕ್ತಿ ಪ್ರತ್ಯಯಗಳು, ಕ್ರಿಯಾಪದ, ನಾಮಪದ, ಅವ್ಯಯಗಳು, ತತ್ಸಮ-ತದ್ಭವಗಳು ವ್ಯಾಕರಣದಡಿಯಲ್ಲಿ ರೂಪುಗೊಂಡಿವೆ.

ಜೊತೆಗೆ ಪ್ರಾಂತ್ಯಕ್ಕನುಸಾರವಾಗಿ, ಇಂದಿನ ಸವಾಲಿಗೆ ಒಡ್ಡಿಕೊಳ್ಳುವ ತೆರದಲಿ ಭಾಷಾ ಪ್ರಯೋಗವಾಗುತ್ತಿದೆ. ಅನ್ಯಭಾಷೆಗಳು, ದೇಶ್ಯ ಪದಗಳು, ಎಡೆಯಲ್ಲಿ ಇಣುಕಿ ಹಲವಾರು ವ್ಯತ್ಯಾಸಗಳಾಗಿದೆ. *ಭಾಷೆ ಹುಟ್ಟಿನಿಂದ ಬರುವುದಲ್ಲ,ಕೇವಲ ಕಲಿಕೆ ಮತ್ತು ವ್ಯವಹಾರದಿಂದ*. ನದಿ ಯಾವಾಗ ಹರಿಯುವುದಿಲ್ಲವೋ, ಎಲ್ಲಾ ಕಸಕಡ್ಡಿ ಬಂದು ನಿಂತ ನೀರಿನಲ್ಲಿ ಬಿದ್ದು ತೇಲಾಡುವುದು ಸಹಜ. ಹರಿಯುವುದು ನೀರಿನ ಗುಣ. ಭಾಷೆ ಎನ್ನುವುದು*ಜೀವನದಿ*ಇದ್ದಂತೆ. ನಿರಂತರವಾಗಿ ಹರಿಯುತ್ತಿದ್ದರೆ, ಬದಲಾವಣೆ ಸಹಜ. ಎಲ್ಲಿ *ಸಂವಹನ*ಕೊರತೆಯಾಯಿತೋ ,ಅಲ್ಲಿ ಭಾಷೆ ಅವನತಿಯತ್ತ ಸಾಗಿತು ಎಂಬುದು ಸ್ಪಷ್ಟ. ಈ ಅವಸಾನ ಎಂಬುದು *ನಮಗೆ ನಾವೇ ಮಾಡಿಕೊಂಡ ಮೋಸ, ವಂಚನೆ, ಪ್ರತಿಷ್ಠೆಯ ಫಲ* ಎಂಬುದರಲ್ಲಿ ಎರಡು ಮಾತಿಲ್ಲ. ಪ್ರಮುಖ ದ್ರಾವಿಡ ಭಾಷೆಯಲ್ಲಿ ಒಂದಾದ *ನಮ್ಮ ನಾಡು-ನುಡಿ ಕನ್ನಡವನ್ನು* ಹೆಚ್ಚು ಹೆಚ್ಚು ಬಳಸಿ, ನಮ್ಮ ತಾಯ್ನೆಲ, ತಾಯಿ ಭುವನೇಶ್ವರಿಯ ಕಿಂಚಿತ್ ಸೇವೆಯನ್ನು ಮಾಡೋಣ‌. ಕನ್ನಡಾಂಬೆಯ ಕೀರ್ತಿಪತಾಕೆಯನ್ನು *ಜಗದಗಲ*ಹಾರಿಸೋಣ.

-ರತ್ನಾ ಭಟ್ ತಲಂಜೇರಿ

(ಸಂಗ್ರಹ-'ನನ್ನ ಕನ್ನಡ ನಾಡು')

ಚಿತ್ರ ಕೃಪೆ: ಇಂಟರ್ನೆಟ್