ಕನ್ನಡ ಪತ್ರಿಕಾ ಲೋಕ (ಭಾಗ ೧೦೩) - ಉತ್ಕರ್ಷ

ಕನ್ನಡ ಪತ್ರಿಕಾ ಲೋಕ (ಭಾಗ ೧೦೩) - ಉತ್ಕರ್ಷ

ವಿದ್ಯಾಭಾರತಿ ಕರ್ನಾಟಕ ಇವರ ಸಹಯೋಗದೊಂದಿಗೆ ಕಳೆದ ೯ ವರ್ಷಗಳಿಂದ ಹೊರ ಬರುತ್ತಿರುವ ಶೈಕ್ಷಣಿಕ ಮಾಸ ಪತ್ರಿಕೆಯೇ ‘ಉತ್ಕರ್ಷ'. ಸುಧಾ/ತರಂಗ ಆಕಾರದ ೨೮ ಪುಟಗಳು. ರಕ್ಷಾಪುಟಗಳು ವರ್ಣದಲ್ಲೂ, ಒಳಪುಟಗಳು ಕಪ್ಪು ಬಿಳುಪಿನಲ್ಲೂ ಮುದ್ರಣ. ‘ಜ್ಞಾನ ಜ್ಯೋತಿಯ ಬೆಳಕಿನಲಿ ಉನ್ನತಿಯೆಡೆಗೆ...' ಎಂಬ ಘೋಷ ವಾಕ್ಯವನ್ನು ಹೊಂದಿರುವ ಶೈಕ್ಷಣಿಕ ಮಾಸ ಪತ್ರಿಕೆ ಇದಾಗಿದೆ.

ವಸಂತ ಮಾಧವ ಕಲ್ಲಡ್ಕ ಇವರು ಪ್ರಧಾನ ಸಂಪಾದಕರಾಗಿಯೂ, ಮಹೇಶ ನಿಟಿಲಾಪುರ ಸಂಪಾದಕರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಕುಶಾಲಪ್ಪ ಅಮ್ಟೂರು ಇವರು ವ್ಯವಸ್ಥಾಪಕ ಸಂಪಾದಕರಾಗಿದ್ದಾರೆ. ಪತ್ರಿಕೆಯ ಕಚೇರಿಯು ಶ್ರೀ ರಾಮ ವಿದ್ಯಾ ಕೇಂದ್ರ, ಹನುಮಾನ್ ನಗರ, ಕಲ್ಲಡ್ಕ, ಬಂಟ್ವಾಳದಲ್ಲಿದೆ. ಬೆಂಗಳೂರಿನ ವಿದ್ಯಾವಿಕಾಸ ಪ್ರತಿಷ್ಟಾನವು ಪತ್ರಿಕೆಯ ಪ್ರಕಾಶನದ ಹೊಣೆಯನ್ನು ಹೊತ್ತಿಕೊಂಡಿದೆ.

ಪತ್ರಿಕೆಯಲ್ಲಿ ಮಕ್ಕಳಿಗಾಗಿ ಶೈಕ್ಷಣಿಕ ವಿಷಯಗಳನ್ನು ನೀಡಲಾಗಿದೆ. ಬಾಲ ವಿಭಾಗ, ರಾಷ್ಟ್ರೀಯ ವಿಜ್ಞಾನ, ಗಣಿತಬಂಧ, ರಸ ಪ್ರಶ್ನೆ, ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಮೊದಲಾದ ವಿಷಯಗಳನ್ನು ನೀಡಲಾಗಿದೆ. ಜಲಿಯನ್ ವಾಲಾ ಬಾಗ್ ಹತ್ಯಾಕಾಂಡ, ಮಗುವಿನಿಂದ ಕಲಿತ ಪಾಠಗಳು, ಅನುಕರಣೀಯ ಹಿರಿಯ ಚೈತನ್ಯಗಳು ಮೊದಲಾದ ಮಾಹಿತಿಪೂರ್ಣ ಲೇಖನಗಳಿವೆ. 

ಪತ್ರಿಕೆಯ ಬಿಡಿ ಪ್ರತಿಯ ಬೆಲೆಯನ್ನು ನಮೂದಿಸಿಲ್ಲ. ಆದರೆ ಚಂದಾ ಅವಧಿಯ ಬಗ್ಗೆ ವಿವರಗಳಿವೆ. ವಾರ್ಷಿಕ ಚಂದಾ ರೂ ೧೫೦.೦೦ ಆಗಿದ್ದು, ಆಜೀವ ಚಂದಾ ರೂ ೨,೫೦೦.೦೦ ಆಗಿದೆ. ಪೋಷಕರು ರೂ ೫೦೦೦.೦೦ ಮತ್ತು ಮಹಾ ಪೋಷಕರು ರೂ ೧೦,೦೦೦.೦೦ ಆಗಿದೆ. ಜಾಹೀರಾತುಗಳ ಸಂಖ್ಯೆ ಅಧಿಕವಿಲ್ಲ. ನಮ್ಮ ಸಂಗ್ರಹದಲ್ಲಿರುವ ಪತ್ರಿಕೆ ಫೆಬ್ರವರಿ ೨೦೨೩ (ಸಂಪುಟ: ೯, ಸಂಚಿಕೆ: ೪)