ಕನ್ನಡ ಪತ್ರಿಕಾ ಲೋಕ (ಭಾಗ ೧೦೫) - ಸಾಮರಸ್ಯ ನ್ಯೂಸ್

ಕನ್ನಡ ಪತ್ರಿಕಾ ಲೋಕ (ಭಾಗ ೧೦೫) - ಸಾಮರಸ್ಯ ನ್ಯೂಸ್

ಎಂ ಎಂ ಎ ಶರೀಫ್ ಮಂಗಳಪೇಟೆ ಇವರ ಸಂಪಾದಕತ್ವದಲ್ಲಿ ಕಳೆದ ಹದಿನೈದು ವರ್ಷಗಳಿಂದ ಹೊರ ಬರುತ್ತಿರುವ ಮಾಸ ಪತ್ರಿಕೆ - ‘ಸಾಮರಸ್ಯ ನ್ಯೂಸ್’. ನಮ್ಮ ಸಂಗ್ರಹದಲ್ಲಿರುವ ಪತ್ರಿಕೆ ಎಪ್ರಿಲ್ ೨೦೨೩ರ (ಸಂಪುಟ: ೧೫, ಸಂಚಿಕೆ: ೩) ಸಂಚಿಕೆ. ಟ್ಯಾಬಲಾಯ್ಡ್ ಆಕಾರದ ೨೦ ಪುಟಗಳು, ಎಲ್ಲವೂ ಕಪ್ಪು ಬಿಳುಪು. ರಂಜಾನ್ ವಿಶೇಷ ಸಂಚಿಕೆಯಾದ ಕಾರಣ ಪುಟಗಳ ಸಂಖ್ಯೆ ಹೆಚ್ಚಿರಬಹುದು. ಪತ್ರಿಕೆಯ ಪುಟಗಳ ತುಂಬೆಲ್ಲಾ ಜಾಹೀರಾತುಗಳೇ ತುಂಬಿದೆ.

ರಂಜಾನ್ ಮಾಸದಲ್ಲಿ ಮುಸ್ಲಿಮರು ಮಾಡುವ ಉಪವಾಸದ ಬಗ್ಗೆ ಮುಖಪುಟ ಲೇಖನವಿದೆ. ಇದರ ಜೊತೆಗೆ ‘ಶಾಲೆ ಮತ್ತು ಬದುಕು’ ಹಾಗೂ ‘ಪಶ್ಚಾತ್ತಾಪಕ್ಕೆ ಪರಿಹಾರ ಸ್ವರ್ಗ’ ಎನ್ನುವ ಲೇಖನಗಳೂ ಇವೆ. ಸಂಪಾದಕರಾದ ಶರೀಫ್ ಇವರು ‘ನೇರ ನುಡಿ' ಎಂಬ ಹೆಸರಿನ ಸಂಪಾದಕೀಯ ಬರೆಯುತ್ತಾರೆ. 

ಶರೀಫ್ ಅವರು ಪತ್ರಿಕೆಯ ಸಂಪಾದಕ, ಮುದ್ರಕ ಹಾಗೂ ಪ್ರಕಾಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೆಯ ಕಚೇರಿಯು ಮಂಗಳೂರಿನ ಕಾಟಿಪಳ್ಳದ ಮಂಗಳಪೇಟೆಯಲ್ಲಿದೆ. ಯೆಯ್ಯಾಡಿಯ ದಿಗಂತ ಮುದ್ರಣ ಇಲ್ಲಿ ಮುದ್ರಣವಾಗುತ್ತಿದೆ. ಪತ್ರಿಕೆಯ ಮುಖ ಬೆಲೆ ರೂ.೫.೦೦, ಚಂದಾ ವಿವರಗಳ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಪತ್ರಿಕೆಯು ಈಗಲೂ ಪ್ರತೀ ತಿಂಗಳು ಮುದ್ರಣವಾಗಿ ಹೊರಬರುತ್ತಿದೆ ಎನ್ನುವ ಬಗ್ಗೆ ಮಾಹಿತಿ ಇದೆ.