ಕನ್ನಡ ಪತ್ರಿಕಾ ಲೋಕ (ಭಾಗ ೧೧೬) - ಅಮರ ಸುಳ್ಯ ಸುದ್ದಿ
ಕಳೆದ ಹನ್ನೆರಡು ವರ್ಷಗಳಿಂದ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಿಂದ ಪ್ರಕಟವಾಗುತ್ತಿರುವ ಜನಪರ ವಾರಪತ್ರಿಕೆಯೇ ‘ಅಮರ ಸುಳ್ಯ ಸುದ್ದಿ'. ವಾರ್ತಾ ಪತ್ರಿಕೆಯ ಆಕಾರದಲ್ಲಿ ಆರು ಪುಟಗಳು. ಎರಡು ಪುಟಗಳು ವರ್ಣದಲ್ಲೂ, ಉಳಿದ ನಾಲ್ಕು ಪುಟಗಳು ಕಪ್ಪು ಬಿಳುಪಿನಲ್ಲೂ ಮುದ್ರಣ.
ನಮ್ಮ ಸಂಗ್ರಹದಲ್ಲಿರುವ ಪತ್ರಿಕೆ ಜೂನ್ ೧೬, ೨೦೨೩ (ಸಂಪುಟ: ೧೨, ಸಂಚಿಕೆ: ೩೪) ರ ಸಂಚಿಕೆ. ಪತ್ರಿಕೆಯಲ್ಲಿ ಸುಳ್ಯ ತಾಲೂಕಿನ ಸ್ಥಳೀಯ ರಾಜಕೀಯ, ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕ, ಕೃಷಿ ವಿಷಯಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಪರಿಸರದ ದಿನದ ಸಲುವಾಗಿ ಒಂದು ಲೇಖನ ಇದೆ. ಸಂಪಾದಕೀಯ ಕಂಡು ಬರುವುದಿಲ್ಲ. ಜಾಹೀರಾತು ಇದೆ.
ಪತ್ರಿಕೆಯ ಸಂಪಾದಕ, ಮುದ್ರಕ ಹಾಗೂ ಪ್ರಕಾಶಕರಾಗಿ ಮುರಳೀಧರ ಎ. ಇವರು ಕಾರ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೆಯು ಮಂಗಳೂರಿನ ಯೆಯ್ಯಾಡಿಯಲ್ಲಿರುವ ದಿಗಂತ ಮುದ್ರಣದಲ್ಲಿ ಮುದ್ರಿತವಾಗುತ್ತಿದೆ. ಪತ್ರಿಕೆಯ ಮುಖ ಬೆಲೆ ರೂ.೪.೦೦ ಆಗಿದ್ದು, ಚಂದಾ ವಿವರಗಳು ಲಭ್ಯವಿಲ್ಲ. ಪತ್ರಿಕೆ ಈಗಲೂ ಕ್ಲಪ್ತ ಸಮಯಕ್ಕೆ ಮುದ್ರಿತವಾಗಿ ಹೊರಬರುತ್ತಿದೆ.