ಕನ್ನಡ ಪತ್ರಿಕಾ ಲೋಕ (ಭಾಗ-೧೨೦) - ಸ್ಪೆಷಲ್ ನ್ಯೂಸ್

ಕನ್ನಡ ಪತ್ರಿಕಾ ಲೋಕ (ಭಾಗ-೧೨೦) - ಸ್ಪೆಷಲ್ ನ್ಯೂಸ್

ಬಾವಾ ಪದರಂಗಿ ಅವರ ಸಾರಥ್ಯದಲ್ಲಿ ಕಳೆದ ೨೩ ವರ್ಷಗಳಿಂದ ಹೊರಬರುತ್ತಿರುವ ಮಾಸ ಪತ್ರಿಕೆ “ಸ್ಪೆಷಲ್ ನ್ಯೂಸ್”. ಟ್ಯಾಬಲಾಯ್ಡ್ ಆಕೃತಿಯ ೮ ಪುಟಗಳು ಮತ್ತು ಎಲ್ಲಾ ಪುಟಗಳು ಕಪ್ಪು ಬಿಳುಪು ಮುದ್ರಣದಲ್ಲಿವೆ. ಪತ್ರಿಕೆಯಲ್ಲಿ ಅಪರಾಧಿ ಸುದ್ದಿಗಳು ಮತ್ತು ರಾಜಕೀಯ ಸುದ್ದಿಗಳಿಗೆ ಹೆಚ್ಚಿನ ಮಹತ್ವ ನೀಡಲಾಗಿದೆ. 

ನಮ್ಮ ಸಂಗ್ರಹದಲ್ಲಿರುವ ಪತ್ರಿಕೆ ಆಗಸ್ಟ್,೨೦೨೨ (ಸಂಪುಟ: ೨೨, ಸಂಚಿಕೆ: ೦೭) ರ ತಿಂಗಳ ಸಂಚಿಕೆ. ಇದರಲ್ಲಿ ಮುಖಪುಟ ಲೇಖನವಾಗಿ “ಪ್ರವೀಣ್ ನೆಟ್ಟಾರು ಹತ್ಯೆಯ ಹಿಂದೆ ಕಾಣದ ಕೈಗಳು” ಎಂಬ ವರದಿ ಇದೆ. ಸಂಪಾದಕರಾದ ಬಾವಾ ಪದರಂಗಿ ಇವರು “ಸಂಥಿಂಗ್ ಸ್ಪೆಷಲ್" ಎಂಬ ಸಂಪಾದಕೀಯದಲ್ಲಿ “ಕರಾವಳಿಯಲ್ಲಿ ಹತ್ಯಾ ರಾಜಕಾರಣಕ್ಕೆ ಕೊನೆ ಇಲ್ಲವೇ?” ಎನ್ನುವ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಪತ್ರಿಕೆಯಲ್ಲಿ ಹನಿಟ್ರ್ಯಾಪ್ ದಂಧೆ, ದಾರಿ ತಪ್ಪಿದ ಹುಡುಗಿಯರು, ಶವ ಮೆರವಣಿಗೆಗೆ ಇನ್ನೆಷ್ಟು ಶವಗಳು ಬೇಕು? ಎಂಬೆಲ್ಲಾ ವರದಿಗಳು ಇವೆ. ಪತ್ರಿಕೆಯಲ್ಲಿ ಜಾಹೀರಾತುಗಳಿವೆ.

ಪತ್ರಿಕೆಯ ಸಂಪಾದಕ, ಮುದ್ರಕ, ಪ್ರಕಾಶಕರಾಗಿ ಎಂ ಎ ಬಾವಾ ಪದರಂಗಿ, ಉಪಸಂಪಾದಕರಾಗಿ ಎಂ ಕೆ ಜಬ್ಬಾರ್, ಪ್ರಸರಣಾಧಿಕಾರಿಯಾಗಿ ಅಬ್ದುಲ್ ಖಾದರ್ ಬೆಳ್ವಾಯಿ ಇವರು ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆಯು ಮಂಗಳೂರು ತಾಲೂಕಿನ ಕಿನ್ನಿಕಂಬಳದಲ್ಲಿ ಕಚೇರಿಯನ್ನು ಹೊಂದಿದ್ದು, ದೇವಸನ್ ಪಿಂಟರ್ಸ್, ಮಂಗಳೂರು ಇಲ್ಲಿ ಮುದ್ರಿತವಾಗುತ್ತಿದೆ. ೨೦೨೨ರಲ್ಲಿ ಪತ್ರಿಕೆಯ ಮುಖ ಬೆಲೆ ರೂ. ೫.೦೦ ಆಗಿದ್ದು, ಚಂದಾ ವಿವರಗಳು ಲಭ್ಯವಿಲ್ಲ. ಪತ್ರಿಕೆ ಈಗಲೂ ಮುದ್ರಿತವಾಗುತ್ತಿದೆ ಎಂಬ ಮಾಹಿತಿ ಇದೆ.