ಕನ್ನಡ ಪತ್ರಿಕಾ ಲೋಕ (ಭಾಗ ೧೨೭) - ಕರುನಾಡ ಪ್ರಾರ್ಥನಾ
ಕಳೆದ ೨೦ ವರ್ಷಗಳಿಂದ ಕುಂದಾಪುರ ತಾಲೂಕಿನಿಂದ ಹೊರಬರುತ್ತಿರುವ ಪಾಕ್ಷಿಕ ಪತ್ರಿಕೆ “ಕರುನಾಡ ಪ್ರಾರ್ಥನಾ”. ಟ್ಯಾಬಲಾಯ್ಡ್ ಆಕಾರದ ೮ ಪುಟಗಳು. ನಾಲ್ಕು ಪುಟಗಳು ವರ್ಣದಲ್ಲೂ, ನಾಲ್ಕು ಪುಟಗಳು ಕಪ್ಪು ಬಿಳುಪು ಬಣ್ಣದಲ್ಲೂ ಪ್ರಕಟವಾಗುತ್ತಿದೆ. ಪತ್ರಿಕೆಯಲ್ಲಿ ರಾಜಕೀಯ, ಅಪರಾಧ ಸಂಬಂಧಿ ಸುದ್ದಿಗಳು ಹೆಚ್ಚಾಗಿ ಪ್ರಕಟವಾಗುತ್ತಿದೆ.
ನಮ್ಮ ಸಂಗ್ರಹದಲ್ಲಿರುವ ಪತ್ರಿಕೆ ಸೆಪ್ಟೆಂಬರ್ ೨೦೨೩ (ಸಂಪುಟ: ೧೧, ಸಂಚಿಕೆ: ೧೨) ರ ಸಂಚಿಕೆ. ಈ ಸಂಚಿಕೆಯ ಮುಖಪುಟದಲ್ಲಿ ಸೌಜನ್ಯ ಆರೋಪಿಗಳು ಯಾರು?, ಗೋವಿಂದ ಬಾಬು ಪೂಜಾರಿ ಅವರಿಗೆ ಚಳ್ಳೆ ಹಣ್ಣು ತಿನ್ನಿಸಿದ ಚೈತ್ರಾ ಕುಂದಾಪುರ, ಕೊಲ್ಲೂರು ಆಡಳಿತ ಮಂಡಳಿ ವೈಫಲ್ಯ, ಅಪರೂಪದ ರಾಜಕಾರಣಿ ಮೊದಲಾದ ಮುಖಪುಟ ಬರಹಗಳಿವೆ. ಪತ್ರಿಕೆಯ ಸಂಪಾದಕರಾದ ಎ.ಬಿ.ಶೆಟ್ಟಿ (ಎ. ಭಾಸ್ಕರ ಶೆಟ್ಟಿ) ಇವರು ‘ತಮ್ಮೊಡನೆ..' ಹೆಸರಿನಲ್ಲಿ ಸಂಪಾದಕೀಯವನ್ನು ಬರೆಯುತ್ತಿದ್ದಾರೆ. ಪತ್ರಿಕೆಯಲ್ಲಿ ಹಲವಾರು ಜಾಹೀರಾತುಗಳಿವೆ.
ಭಾಸ್ಕರ ಶೆಟ್ಟಿ ಅವರು ಪತ್ರಿಕೆಯ ಮುದ್ರಕರು, ಮಾಲೀಕರು ಮತ್ತು ಪ್ರಕಾಶಕರಾಗಿದ್ದಾರೆ. ಪತ್ರಿಕೆಯ ಕಚೇರಿ ಕುಂದಾಪುರ ತಾಲೂಕಿನ ಕೋಸ್ಟ ಕಾಂಪ್ಲೆಕ್ಸ್, ಸಿ ಎಸ್ ರಸ್ತೆಯಲ್ಲಿದೆ. ಮಂಗಳೂರಿನ ಯೆಯ್ಯಾಡಿಯ ದಿಗಂತ ಮುದ್ರಣದಲ್ಲಿ ಮುದ್ರಿತವಾಗುತ್ತಿದೆ. ಪತ್ರಿಕೆಯ ಬಿಡಿ ಪ್ರತಿ ಬೆಲೆ ರೂ ೧೦.೦೦. ಚಂದಾ ವಿವರಗಳು ಲಭ್ಯವಿಲ್ಲ. ಪತ್ರಿಕೆಯು ಈಗಲೂ ಕ್ಲಪ್ತ ಕಾಲಕ್ಕೆ ಮುದ್ರಿತವಾಗಿ ಹೊರಬರುತ್ತಿದೆ ಎನ್ನುವ ಮಾಹಿತಿ ದೊರೆತಿದೆ.