ಕನ್ನಡ ಪತ್ರಿಕಾ ಲೋಕ (ಭಾಗ ೧೩೨) - ಜಂಬೂ ಸವಾರಿ

ಕನ್ನಡ ಪತ್ರಿಕಾ ಲೋಕ (ಭಾಗ ೧೩೨) - ಜಂಬೂ ಸವಾರಿ

ಬೆಂಗಳೂರಿನ ಇಷುಧಿ ಮಾಧ್ಯಮ ಸಮೂಹ ಇವರು ಪ್ರಕಟಿಸುತ್ತಿರುವ ಮಾಸ ಪತ್ರಿಕೆ “ಜಂಬೂ ಸವಾರಿ". ಟ್ಯಾಬಲಾಯ್ಡ್ ಆಕಾರದ ೧೨ ಪುಟಗಳು. ಎರಡು ಪುಟಗಳು ಬಣ್ಣದಲ್ಲೂ, ಉಳಿದ ಹತ್ತು ಪುಟಗಳು ಕಪ್ಪು ಬಿಳುಪು ವರ್ಣದಲ್ಲಿ ಮುದ್ರಿತವಾಗುತ್ತಿದೆ. ಪತ್ರಿಕೆಯಲ್ಲಿ ಆಧ್ಯಾತ್ಮಿಕ ಮತ್ತು ಕೆಲವು ಬಿಡಿ ಸುದ್ದಿಗಳು ಪ್ರಕಟವಾಗುತ್ತಿವೆ. 

ನಮ್ಮ ಸಂಗ್ರಹದಲ್ಲಿರುವ ಪತ್ರಿಕೆ ಸೆಪ್ಟೆಂಬರ್ ೨೦೨೩ (ಸಂಪುಟ ೧೧, ಸಂಚಿಕೆ ೨) ರ ಸಂಚಿಕೆ ಆಗಿದೆ. ಈ ಪತ್ರಿಕೆಯ ಮುಖಪುಟದಲ್ಲಿ ಕಾಸರಗೋಡಿನ ಎಡನೀರು ಎಂಬಲ್ಲಿ ಇರುವ ಶ್ರೀ ಸಚ್ಚಿದಾನಂದ ಭಾರತೀ ಮಹಾಸ್ವಾಮೀಜಿ ಅವರ ನುಡಿಗಳಿವೆ. ಒಳಪುಟಗಳಲ್ಲಿ ಸಾಕಷ್ಟು ಜಾಹೀರಾತುಗಳಿವೆ. ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾಗಿ ಬಾ. ರಾಮಚಂದ್ರ ಉಪಾಧ್ಯ, ಕಾರ್ಯನಿರ್ವಾಹಕ ಸಂಪಾದಕರಾಗಿ ಡಿ. ಶರತ್ ಕುಮಾರ್ ಭಟ್, ಸಂಪಾದಕರಾಗಿ ವೀಣಾ ಎಸ್ ಭಟ್ ಇವರು ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಪತ್ರಿಕೆಯ ಕಾರ್ಯಾಲಯವು ಬೆಂಗಳೂರಿನ ಜೆ ಪಿ ನಗರದಲ್ಲಿದೆ. ಇಷುಧಿ ಗ್ರಾಫಿಕ್ಸ್ ಇವರು ಮುದ್ರಣದ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ. ಪತ್ರಿಕೆಯ ಬಿಡಿ ಪ್ರತಿ ಬೆಲೆ ರೂ. ೧೦.೦೦, ವಾರ್ಷಿಕ ಚಂದಾ ಬಗ್ಗೆ ಮಾಹಿತಿ ಇಲ್ಲ. ಆದರೆ ದ್ವೈವಾರ್ಷಿಕ ಚಂದಾ ರೂ ೨೭೫.೦೦ ಮತ್ತು ಹತ್ತು ವರ್ಷಕ್ಕೆ ರೂ ೧೫೫೦.೦೦ ಎಂದು ಮುದ್ರಿಸಲಾಗಿದೆ. ಪತ್ರಿಕೆಯು ಈಗಲೂ ಕ್ಲಪ್ತಕಾಲಕ್ಕೆ ಮುದ್ರಿತವಾಗುತ್ತಿದೆ ಎನ್ನುವ ಮಾಹಿತಿ ಇದೆ.