ಕನ್ನಡ ಪತ್ರಿಕಾ ಲೋಕ (ಭಾಗ ೧೪೦) - ನಗುವ ನಂದ

ಕನ್ನಡ ಪತ್ರಿಕಾ ಲೋಕ (ಭಾಗ ೧೪೦) - ನಗುವ ನಂದ

"ನಗುವ ನಂದ" ಹಾಸ್ಯ ಬರೆಹಗಳ ಮಾಸಪತ್ರಿಕೆ. 1932ರಲ್ಲಿ ಆರಂಭವಾದ ಈ ಪತ್ರಿಕೆಯ ಸಂಪಾದಕರು, ಪ್ರಕಾಶಕರು, ಮುದ್ರಕರು, ಮುದ್ರಣ ಆಗುತ್ತಿದ್ದುದೆಲ್ಲಿ ಎಂಬಿತ್ಯಾದಿ ಯಾವುದೇ ಮಾಹಿತಿಗಳು ಲಭ್ಯವಿಲ್ಲ. ಕಾರಣ, ಸಂಗ್ರಹದಲ್ಲಿರುವ ಸಂಚಿಕೆಯಲ್ಲಿ ಇದರ ಮೊದಲ ಮತ್ತು ಕೊನೆಯ ರಕ್ಷಾಪುಟಗಳ ಸಹಿತ ತಲಾ ನಾಲ್ಕರಂತೆ ಒಟ್ಟು ಎಂಟು ಪುಟಗಳು ಲಭ್ಯವಿರುವುದಿಲ್ಲ. ಚಿಕ್ಕ ಪುಟ್ಟ ನಗೆಹನಿಗಳು, ವ್ಯಂಗ್ಯಚಿತ್ರಗಳು ಮತ್ತು ನಗೆ ಬರೆಹಗಳ ಲೇಖನಗಳಿಗೆ "ನಗುವ ನಂದ" ಮೀಸಲಾಗಿತ್ತು ಎನ್ನುವುದು ಮಾತ್ರ ಸಂಚಿಕೆಯನ್ನು (ಸೆಪ್ಟೆಂಬರ್ 1946) ಗಮನಿಸಿದಾಗ ಸ್ಪಷ್ಟವಾಗುವ ಅಂಶ.

ವಿ. ಸುಬ್ಬಯ್ಯ ರೆಡ್ಡಿ, ಡಿ. ಎಸ್. ಕೃಷ್ಣಮೂರ್ತಿ, ಎಸ್. ನಾರಾಯಣಮೂರ್ತಿ, ಶ್ಯಾಮ್, ಎ. ವಿ. ಪ್ರಭು (ಮಿತ್ರಮಂಡಲಿ), ಸು. ರಂಗನಾಥ, ಕೆ. ಸಿ. ಚೌಡಪ್ಪ ರೆಡ್ಡಿ, ಪಿ. ಆರ್. ಟಿ. ಸ್ವಾಮಿ, ಮಾದರಬೆಟ್ಟು ರಂಗ, ತ್ರಿನೇತ್ರ ಪಿ. ಆರ್., ಆರಗಂ, ಟಿ. ಟಿ‌. ಎಸ್. ಮೂರ್ತಿ, ಎಸ್. ಶ್ರೀನಿವಾಸಲು, ಗೋಪು ಹಾಗೂ ವಕ್ರದೃಷ್ಟಿ ಇವರ ವೈವಿಧ್ಯಮಯ ನಗೆ ಬರೆಹಗಳಿವೆ.

~ ಶ್ರೀರಾಮ ದಿವಾಣ