ಕನ್ನಡ ಪತ್ರಿಕಾ ಲೋಕ (ಭಾಗ ೧೪೫) - ವಿಜಯ

ಕನ್ನಡ ಪತ್ರಿಕಾ ಲೋಕ (ಭಾಗ ೧೪೫) - ವಿಜಯ

ಕಾರ್ಕಳದ ಧರ್ಮಪಾಲ ಅವರ ಮಾಸಪತ್ರಿಕೆ "ವಿಜಯ".

ಕಾರ್ಕಳದ ಧರ್ಮಪಾಲ ಐ. ಅವರು ಸಂಪಾದಕರಾಗಿ ಕಾರ್ಕಳದಿಂದ ಹೊರತರುತ್ತಿದ್ದ ಮಾಸಪತ್ರಿಕೆ "ವಿಜಯ". 1951ರ ಎಪ್ರೀಲ್ ತಿಂಗಳಲ್ಲಿ ವಿಜಯ ಆರಂಭವಾಯಿತು. ಅಂದಾಜು ಐದು ವರ್ಷಗಳ ಕಾಲ ನಿರಂತರವಾಗಿ ಪ್ರಕಟಗೊಂಡ ವಿಜಯ, ಬಳಿಕ  ಸ್ಥಗಿತಗೊಂಡಿತು. 22ಕ್ಕೂ ಅಧಿಕ ಪುಟಗಳಿಂದೊಡಗೂಡಿ ಪುಸ್ತಕರೂಪದಲ್ಲಿ ಪ್ರಕಟವಾಗುತ್ತಿದ್ದ "ವಿಜಯ" ದ ಬಿಡಿ ಸಂಚಿಕೆಯ ಬೆಲೆ ನಾಲ್ಕಾಣೆ. ವಾರ್ಷಿಕ ಚಂದಾ 3 ರೂ.

ಸೇವ ನಮಿರಾಜ ಮಲ್ಲ, ಶ್ರೀನಿವಾಸ ಸೆಟ್ಟಿ, ಅ. ಗೌ. ಕಿನ್ನಿಗೋಳಿ, ಕಟಪಾಡಿ ಶ್ರೀನಿವಾಸ ಶೆಣೈ ಕಾರ್ಕಳ, ಮ. ರಾಜೀವ, ಎಸ್. ಆರ್. ರಾವ್, ಎಂ. ಸುಗಂಧಿ ನಾಯ್ಕ ಮೂಡಬಿದಿರೆ, ಯು. ಚಿತ್ರಲೇಖಾ ನಾಯಕ್ ಮೂಡಬಿದಿರೆ ಮೊದಲಾದವರು "ವಿಜಯ"ಕ್ಕೆ ಬರೆಯುತ್ತಿದ್ದರು.

ಕಥೆ, ಕವನ, ಪ್ರಬಂಧ, ನಾಟಕ ಇತ್ಯಾದಿ ಸಾಹಿತ್ಯಿಕ ಬರೆಹಗಳನ್ನು, ವೈವಿಧ್ಯಮಯ, ವಿಚಾರಪೂರಿತ, ಮಾಹಿತಿಪೂರ್ಣ ಲೇಖನಗಳಿಗೆ ಆದ್ಯತೆ ನೀಡುತ್ತಿದ್ದ " ವಿಜಯ"ವು "ಹೊಟ್ಟೆಗಿಲ್ಲದೆ, ಬಟ್ಟೆಗಿಲ್ಲದೆ ಮನೆ ಮಾರಿಲ್ಲದೆ ಕಣ್ಣೀರಿಡುತ್ತಿರುವ, ಕೊರಗುತ್ತಿರುವ ಕೋಟಿ ಜನರ ಬೆಂಗಾವಲಿಗೆ ಹೊರಟ ಪತ್ರಿಕೆ"ಯಾಗಿತ್ತು.

~ ಶ್ರೀರಾಮ ದಿವಾಣ