ಕನ್ನಡ ಪತ್ರಿಕಾ ಲೋಕ (ಭಾಗ ೧೪೬) - ತುಳು ರಾಜ್ಯ
ಮಂಗಳೂರಿನಿಂದ ಪ್ರಕಟವಾಗುತ್ತಿದ್ದ ತುಳು ಮಾಸಿಕ "ತುಳು ರಾಜ್ಯ"
"ತುಳು ರಾಜ್ಯ", ಮಂಗಳೂರಿನಿಂದ 1980 ಮತ್ತು 1990ರ ದಶಕದಲ್ಲಿ ಪ್ರಕಟವಾಗುತ್ತಿದ್ದ ಮಾಸಿಕ. ಇದರ ಸಂಪಾದಕರು ಮತ್ತು ಪ್ರಕಾಶಕರಾಗಿದ್ದವರು ಬಿ. ಮಂಜುನಾಥ್.
1985 - 86ರ ಅವಧಿಯಲ್ಲಿ ಆರಂಭವಾದ ತುಳುರಾಜ್ಯ, 24 ಪುಟಗಳಲ್ಲಿ ಪುಸ್ತಕದ ರೂಪದಲ್ಲಿ ಪ್ರಕಟವಾಗುತ್ತಿತ್ತು. ಬಿಡಿ ಸಂಚಿಕೆಯ ಬೆಲೆ ಒಂದು ರೂಪಾಯಿ ಮತ್ತು ವಾರ್ಷಿಕ ಚಂದಾ ಮೊತ್ತ 15 ರೂಪಾಯಿಯಾಗಿತ್ತು. ಆಜೀವ ಚಂದಾ 150 ರೂಪಾಯಿಗಳಾಗಿತ್ತು.
"ಯಾನ್ ತುಳುವೆ, ಬರೆಪಿನಿ, ಓದುನು, ಪಾತೆರುನು ತುಳುಟೆ" ಎಂಬ ಘೋಷಣೆಯೊಂದಿಗೆ ಬರುತ್ತಿದ್ದ "ತುಳುರಾಜ್ಯ", ಹಂಪನಕಟ್ಟೆಯ ರೋಯಲ್ ಪ್ರಿಂಟರ್ಸ್ ನಲ್ಲಿ ಮುದ್ರಣವಾಗುತ್ತಿತ್ತು.
~ ಶ್ರೀರಾಮ ದಿವಾಣ