ಕನ್ನಡ ಪತ್ರಿಕಾ ಲೋಕ (ಭಾಗ ೧೪೮) - ಋತ್ವಿಕ್ ವಾಣಿ

ಕನ್ನಡ ಪತ್ರಿಕಾ ಲೋಕ (ಭಾಗ ೧೪೮) - ಋತ್ವಿಕ್ ವಾಣಿ

ಹೆಚ್. ಜಿ. ನಾಗೇಶರ "ಋತ್ವಿಕ್ ವಾಣಿ" ದ್ವೈಮಾಸಿಕ

ಬೆಂಗಳೂರು ಪ್ಯಾಲೇಸ್ ಗುಟ್ಟಹಳ್ಳಿಯ ನಾಗಪ್ಪ ಸ್ಟ್ರೀಟ್ ಓಂಕಾರ್ ಪಬ್ಲಿಕೇಷನ್ಸ್ ನ ಹೆಚ್. ಜಿ. ನಾಗೇಶ್ ಅವರು ಸಂಪಾದಕರು ಮತ್ತು ಪ್ರಕಾಶಕರಾಗಿ ಪ್ರಕಟಿಸುತ್ತಿದ್ದ ದ್ವೈಮಾಸಿಕವಾಗಿದೆ "ಋತ್ವಿಕ್ ವಾಣಿ". ಚಿಕ್ಕಮಗಳೂರು ಶ್ರೀನಿವಾಸ ನಗರದಲ್ಲಿದ್ದ ಶ್ರೀ ಕಾಲಭೈರವೇಶ್ವರ ಆಫ್ ಸೆಟ್ ಪ್ರಿಂಟರ್ಸ್ ನಲ್ಲಿ ಋತ್ವಿಕ್ ವಾಣಿಯ ಅಕ್ಷರ ಜೋಡಣೆ ಮತ್ತು ಮುದ್ರಣದ ಕೆಲಸಗಳು ನಡೆಯುತ್ತಿತ್ತು.

2000ನೇ ಇಸವಿಯಲ್ಲಿ ಆರಂಭಗೊಂಡ "ಋತ್ವಿಕ್ ವಾಣಿ", 28 ಪುಟಗಳಲ್ಲಿ ಪುಸ್ತಕ ರೂಪದಲ್ಲಿ ಬರುತ್ತಿತ್ತು. "ಋತ್ವಿಕ್ ವಾಣಿ"ಯ ಲಭ್ಯ ಸಂಚಿಕೆಯಲ್ಲಿ ಬಿಡಿ ಸಂಚಿಕೆಯ ಬೆಲೆಯಾಗಲೀ, ವಾರ್ಷಿಕ ಚಂದಾ ಮೊತ್ತವಾಗಲಿ ಇನ್ನಿತರ ಯಾವುದೇ ಮಾಹಿತಿಗಳನ್ನೂ ಮುದ್ರಿಸಲಾಗಿಲ್ಲ.

~ ಶ್ರೀರಾಮ ದಿವಾಣ, ಉಡುಪಿ