ಕನ್ನಡ ಪತ್ರಿಕಾ ಲೋಕ (ಭಾಗ ೧೫೧) - ಬಡವರ ಬಂಧು
ಮಂಗಳೂರು ಜಾರಪ್ಪನವರ "ಬಡವರ ಬಂಧು"
ಮಂಗಳೂರಿನಿಂದ ಪ್ರತೀ ಬುಧವಾರ ಮುದ್ರಣವಾಗಿ ಮಾರುಕಟ್ಟೆಗೆ ಬಿಡುಗಡೆಯಾಗುತ್ತಿದ್ದ ವಾರಪತ್ರಿಕೆ "ಬಡವರ ಬಂಧು". ಮಂಗಳೂರು ಜಾರಪ್ಪ ಎಂಬವರು ಇದರ ಸಂಪಾದಕರಾಗಿದ್ದರು. ಇವರು, ಮಂಗಳೂರಿನಲ್ಲಿ ಪ್ರಧಾನ ಕಚೇರಿ ಮತ್ತು ಉಡುಪಿ, ಕುಂದಾಪುರ, ಕೊಯಂಬುತ್ತೂರಿನಲ್ಲಿ ಬ್ರಾಂಚ್ ಗಳನ್ನು ಹೊಂದಿದ್ದ ಶ್ರಿ ಆರಾದನ್ ಗುರು ಬ್ಯಾಂಕ್ ಲಿ. ಇದರ ಅಧ್ಯಕ್ಷರು ಮತ್ತು ಮ್ಯಾನೇಜಿಂಗ್ ಡೈರೆಕ್ಟರ್ ಆಗಿದ್ದರು.
1933ರ ಅವಧಿಯಲ್ಲಿ ಆರಂಭವಾದ " ಬಡವರ ಬಂಧು", 15ಕ್ಕೂ ಅಧಿಕ ವರ್ಷಗಳ ಕಾಲ ಪ್ರಕಟವಾಗಿ ಬಳಿಕ ಸ್ಥಗಿತಗೊಂಡಿತ್ತು. 'ಬಡವರ ಸೇವೆಯೇ ಭಗವಂತನ ಸೇವೆ' ಎಂಬ ಘೋಷವಾಕ್ಯದೊಂದಿಗೆ ಬರುತ್ತಿದ್ದ ಪತ್ರಿಕೆಯಲ್ಲಿ ವೈವಿಧ್ಯಮಯ ಬರೆಹಗಳು, ಅಂಕಣಗಳು ಪ್ರಕಟವಾಗುತ್ತಿದ್ದುವು.
~ ಶ್ರೀರಾಮ ದಿವಾಣ