ಕನ್ನಡ ಪತ್ರಿಕಾ ಲೋಕ (ಭಾಗ ೧೫೨) - ವಿಕಾಸ
ಉಡುಪಿ ವ್ಯಾಸ ರಾವ್ ಅವರ "ವಿಕಾಸ"
ಉಡುಪಿಯಿಂದ 1960ರ ದಶಕದಲ್ಲಿ ಪ್ರಕಟವಾಗುತ್ತಿದ್ದ ವಾರಪತ್ರಿಕೆ "ವಿಕಾಸ". 1963ರಲ್ಲಿ ಆರಂಭವಾದ "ವಿಕಾಸ" ವಾರಪತ್ರಿಕೆಯ ಸಂಪಾದಕರು ಯು. ವ್ಯಾಸ ರಾವ್. ಮುದ್ರಕರಾಗಿದ್ದವರು ಕೆ. ರಾಮದಾಸ ಭಟ್ಟ. ಇವರ ಉಡುಪಿಯ ಕಲ್ಯಾಣಪುರ ಪ್ರೆಸ್ ಲಿ. ನಲ್ಲಿ "ವಿಕಾಸ" ಮುದ್ರಣವಾಗುತ್ತಿತ್ತು. ಕುಂಜಿಬೆಟ್ಟುವಿನಲ್ಲಿ ಪತ್ರಿಕಾ ಕಾರ್ಯಾಲಯವಿತ್ತು.
ಬಿಡಿ ಸಂಚಿಕೆಯ ಬೆಲೆ ಹತ್ತು ಪೈಸೆ. ವಾರ್ಷಿಕ ಚಂದಾ ಐದು ರೂಪಾಯಿ ಆಗಿತ್ತು. ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಲೇಖನಗಳು, ವಿಶ್ಲೇಷಣೆ, ವಿಮರ್ಶಾತ್ಮಕ ವ್ಯಂಗ್ಯಾತ್ಮಕ ಬರೆಹಗಳು ಆದ್ಯತೆಯಲ್ಲಿ ಪ್ರಕಟವಾಗುತ್ತಿದ್ದುವು. ಒಂದೆರಡು ಧಾರಾವಾಹಿಗಳೂ ಪ್ರಕಟವಾಗುತ್ತಿತ್ತು.
~ ಶ್ರೀರಾಮ ದಿವಾಣ