ಕನ್ನಡ ಪತ್ರಿಕಾ ಲೋಕ (ಭಾಗ ೧೫೬) - ಅರಳುಮೊಗ್ಗು
ಮಕ್ಕಳಿಂದ ಮಕ್ಕಳಿಗಾಗಿ "ಅರಳುಮೊಗ್ಗು" ಮಾಸಿಕ
ಸಾಲಿಗ್ರಾಮದ ಡಾ. ಶಿವರಾಮ ಕಾರಂತ ಮಕ್ಕಳ ಸಾಹಿತ್ಯ ವೇದಿಕೆ ಮೂಲಕ ಪ್ರೊ. ಸಿ. ಉಪೇಂದ್ರ ಸೋಮಯಾಜಿ ಹಾಗೂ ನೀಲಾವರ ಸುರೇಂದ್ರ ಅಡಿಗ (ಸಂಪಾದಕರು) ಇವರು ಪ್ರಕಟಿಸುತ್ತಿದ್ದ ಮಾಸಿಕ "ಅರಳುಮೊಗ್ಗು".
2009ರಲ್ಲಿ ಆರಂಭವಾದ " ಅರಳುಮೊಗ್ಗು "ಕೊರೋನಾ ಲಾಕ್ ಡೌನ್" ಆಗುವವರೆಗೂ, ದಶಕಕ್ಕೂ ಅಧಿಕ ಕಾಲ ಪ್ರತೀ ತಿಂಗಳು ಪ್ರಕಟವಾಗುತ್ತಾ ಬಂದಿದೆ. ಲಾಕ್ ಡೌನ್ ಬಳಿಕ ಪ್ರತೀ ತಿಂಗಳು ಪ್ರಕಟವಾಗುತ್ತಿಲ್ಲವಾದರೂ, ಮೂರು ತಿಂಗಳಿಗೊಂದು, ಆರು ತಿಂಗಳಿಗೊಂದು ಎಂಬಂತೆ ಈಗಲೂ ಪ್ರಕಟವಾಗುತ್ತಿದೆ.
ನಾಲ್ಕು ಪುಟಗಳ "ಅರಳುಮೊಗ್ಗು" ವಿನಲ್ಲಿ ವಿವಿಧ ಪ್ರಾಥಮಿಕ, ಪ್ರೌಢ ಮತ್ತು ಪದವಿಪೂರ್ವ ಕಾಲೇಜುಗಳ ವಿದ್ಯಾರ್ಥಿ - ವಿದ್ಯಾರ್ಥಿನಿಯರ ಸಣ್ಣ ಕಥೆ, ಕವನ, ಪ್ರವಾಸಾನುಭವ ಸಹಿತ ವೈವಿಧ್ಯಮಯ ಬರೆಹಗಳು ಪ್ರಕಟವಾಗಿವೆ. ಮಕ್ಕಳಲ್ಲಿ ಓದುವ ಮತ್ತು ಬರೆಯುವ ಹವ್ಯಾಸವನ್ನು ಹುಟ್ಟುಹಾಕುವಲ್ಲಿ ಈ ಪತ್ರಿಕೆ ಪರಿಣಾಮಕಾರಿಯಾಗಿ ಕೆಲಸ ಮಾಡಿದೆ.
~ ಶ್ರೀರಾಮ ದಿವಾಣ