ಕನ್ನಡ ಪತ್ರಿಕಾ ಲೋಕ (ಭಾಗ ೧೬೦) - ಗ್ರಾಹಕ ತರಂಗ
ಮೈಸೂರಿನಿಂದ ಪ್ರಕಟವಾಗುತ್ತಿದ್ದ ದ್ವಿಭಾಷಾ ಮಾಸಿಕ "ಗ್ರಾಹಕ ತರಂಗ"
ಮೈಸೂರಿನಲ್ಲಿ 1986ರಲ್ಲಿ ಸ್ಥಾಪನೆಗೊಂಡ "ಕರ್ನಾಟಕ ಗ್ರಾಹಕ ವೇದಿಕೆ" ಯ ಮುಖವಾಣಿ ಪತ್ರಿಕೆಯಾಗಿತ್ತು "ಗ್ರಾಹಕ ತರಂಗ". ಕನ್ನಡ ಮತ್ತು ಇಂಗ್ಲೀಷ್ ಎರಡೂ ಭಾಷೆಯ ಬರೆಹಗಳೊಂದಿಗೆ ಪ್ರಕಟವಾಗುತ್ತಿದ್ದ ಈ ಮಾಸಿಕದ ಸಂಪಾದಕರು ಮತ್ತು ಪ್ರಕಾಶಕರಾಗಿದ್ದವರು ಮೈಸೂರು ಗೋಕುಲಂ ನ ಡಾ. ಎಸ್. ಪಿ. ತಿರುಮಲ ರಾವ್. ಮೈಸೂರು. ಶಿವರಾಂಪೇಟೆಯ ಮೈಸೂರು ಶ್ರೀ ಶಾರದಾ ಪ್ರೆಸ್ ನ ಮಾಲಕರಾದ ಎಸ್. ಮಂಜುನಾಥ್ ಅವರು ಮುದ್ರಕರು.
ನಾಲ್ಕು ಪುಟಗಳ ಪತ್ರಿಕೆಯ ಬಿಡಿ ಸಂಚಿಕೆಯ ಬೆಲೆ ಎರಡು ರೂಪಾಯಿಗಳಾಗಿತ್ತು. ವಾರ್ಷಿಕ ಚಂದಾ ಇಪ್ಪತ್ತು ರೂಪಾಯಿಗಳಾಗಿತ್ತು. ಗ್ರಾಹಕ ಶಿಕ್ಷಣಕ್ಕೆ ಸಂಬಂಧಿಸಿದ ಎಲ್ಲಾ ರೀತಿಯ ಬರೆಹಗಳೂ ಪತ್ರಿಕೆಯಲ್ಲಿ ಪ್ರಕಟವಾಗುತ್ತಿತ್ತು. 2004ರಲ್ಲಿ ಆರಂಭವಾದ " ಗ್ರಾಹಕ ತರಂಗ"ವು ದಶಕಕ್ಕೂ ಅಧಿಕ ಕಾಲ ಪ್ರಕಟಗೊಂಡು ಆನಂತರ ಸ್ಥಗಿತಗೊಂಡಿತು.
~ ಶ್ರೀರಾಮ ದಿವಾಣ