ಕನ್ನಡ ಪತ್ರಿಕಾ ಲೋಕ (ಭಾಗ ೧೬೨) - ಬಳಕೆದಾರರ ವೇದಿಕೆ

ಕನ್ನಡ ಪತ್ರಿಕಾ ಲೋಕ (ಭಾಗ ೧೬೨) - ಬಳಕೆದಾರರ ವೇದಿಕೆ

ಉಡುಪಿಯ "ಬಳಕೆದಾರರ ವೇದಿಕೆ"

ಉಡುಪಿಯ ಬಳಕೆದಾರರ ವೇದಿಕೆ ಟ್ರಸ್ಟ್ ಪ್ರಕಟಿಸುತ್ತಿದ್ದ ಪಾಕ್ಷಿಕ ಪತ್ರಿಕೆ "ಬಳಕೆದಾರರ ವೇದಿಕೆ". ಟ್ಯಾಬ್ಲಾಯ್ಡ್ ಮಾದರಿಯಲ್ಲಿ ನಾಲ್ಕು ಪುಟಗಳಲ್ಲಿ ಮುದ್ರಣವಾಗುತ್ತಿದ್ದ "ಬಳಕೆದಾರರ ವೇದಿಕೆ"ಯ ಬಿಡಿ ಸಂಚಿಕೆಯ ಬೆಲೆ ಎರಡು ರೂಪಾಯಿ, ವಾರ್ಷಿಕ ಚಂದಾ 50 ರೂಪಾಯಿ, ಆರು ವರ್ಷಗಳ ಚಂದಾ 250 ರೂಪಾಯಿ ಮತ್ತು ಆಜೀವ ಚಂದಾ 500 ರೂಪಾಯಿ ಆಗಿತ್ತು.

ಉಡುಪಿ ಕಾರ್ಪೋರೇಶನ್ ಬ್ಯಾಂಕ್ ರಸ್ತೆಯ ಜಿಲ್ಲಾ ಪಂಚಾಯಿತಿ ನೋರ್ತ್ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿರುವ ಬಳಕೆದಾರರ ವೇದಿಕೆಯ ಕಚೇರಿಯಿಂದ ಪತ್ರಿಕೆ ಪ್ರಕಾಶನಗೊಳ್ಳುತ್ತಿತ್ತು. ಹೊನ್ನ - ಪದ್ಮ ಪ್ರಿಂಟರ್ಸ್ ನಲ್ಲಿ ಮುದ್ರಣವಾಗುತ್ತಿದ್ದ ಪತ್ರಿಕೆಯ ಸಂಪಾದಕರಾಗಿದ್ದವರು ಕೆ. ದಾಮೋದರ ಐತಾಳ. ಗ್ರಾಹಕ ಜಾಗೃತಿಗೆ ಸಂಬಂಧಿತ ಬರೆಹಗಳಿಗೆ ಮೀಸಲಾಗಿದ್ದ "ಬಳಕೆದಾರರ ವೇದಿಕೆ", 1981ರಲ್ಲಿ ಆರಂಭವಾಗಿ  2008ರ ಬಳಿಕ ಸ್ಥಗಿತಗೊಂಡಿತು.

~ ಶ್ರೀರಾಮ ದಿವಾಣ