ಕನ್ನಡ ಪತ್ರಿಕಾ ಲೋಕ (ಭಾಗ ೧೬೭) - ಪೆರ್ನಾಲ್

ಕನ್ನಡ ಪತ್ರಿಕಾ ಲೋಕ (ಭಾಗ ೧೬೭) - ಪೆರ್ನಾಲ್

ಉಮರ್ ಯು. ಎಚ್. ಅವರ "ಪೆರ್ನಾಲ್"

ಪ್ರಸ್ತುತ, ಕರ್ನಾಟಕ ಬ್ಯಾರಿ ಅಕಾಡೆಮಿಯ ಅಧ್ಯಕ್ಷರಾಗಿರುವ ಮಂಗಳೂರಿನ ಉಮರ್ ಯು. ಎಚ್. ಅವರು ಸಂಪಾದಕರು, ಪ್ರಕಾಶಕರು ಮತ್ತು ಮುದ್ರಕರಾಗಿ ಹೊರತರುತ್ತಿದ್ದ ಮಾಸಪತ್ರಿಕೆ "ಪೆರ್ನಾಲ್". 2003ರಲ್ಲಿ ಆರಂಭವಾದ " ಪೆರ್ನಾಲ್" ನಾಲ್ಕೈದು ವರ್ಷಗಳ ಕಾಲ ನಿರಂತರವಾಗಿ ನಡೆದು ನಂತರ ಸ್ಥಗಿತಗೊಂಡಿತು.

"ಸುಧಾ" ಮಾದರಿಯಲ್ಲಿ ಬರುತ್ತಿದ್ದ "ಪೆರ್ನಾಲ್", " ಸಾಮರಸ್ಯದ ಬದುಕಿಗೆ ತಿಂಗಳ ವೈಚಾರಿಕ ಸಂಭ್ರಮ" ಎಂಬ ಧ್ಯೇಯವಾಕ್ಯದೊಂದಿಗೆ ಪ್ರಕಟವಾಗುತ್ತಿತ್ತು. ಅಬ್ದುಲ್ ಸಮದ್ ರವರ ಮಂಗಳೂರು ಬೀಬಿ ಅಲಾಬಿ ರಸ್ತೆಯ ಕೋಸ್ಟಲ್ ಪ್ರಿಂಟರ್ಸ್ ನಲ್ಲಿ ಮುದ್ರಣವಾಗುತ್ತಿದ್ದ "ಪೆರ್ನಾಲ್" ನ ಬಿಡಿ ಸಂಚಿಕೆಯ ಬೆಲೆ ಐದು ರೂಪಾಯಿಗಳಾಗಿತ್ತು. ಪತ್ರಿಕೆಯಲ್ಲಿ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ, ವ್ಯಕ್ತಿತ್ವ ವಿಕಸನ ಮತ್ತು ವಿದ್ಯಾಭ್ಯಾಸ, ಉದ್ಯೋಗ ಮಾಹಿತಿ ಸಹಿತ ವಿವಿಧ ವೈವಿಧ್ಯಮಯ ಲೇಖನಗಳು ಪ್ರಕಟವಾಗುತ್ತಿತ್ತು. ಮಂಗಳೂರು ಸ್ಟೇಟ್ ಬ್ಯಾಂಕ್ ನ ಅಲ್ ರಹಬ ಪ್ಲಾಝಾದಲ್ಲಿ ಪತ್ರಿಕಾ ಕಾರ್ಯಾಲಯವಿತ್ತು. 

~ ಶ್ರೀರಾಮ ದಿವಾಣ