ಕನ್ನಡ ಪತ್ರಿಕಾ ಲೋಕ (ಭಾಗ ೧೭೦) - ಬಾರುಕೋಲು
ಬಿ. ಆರ್. ರಂಗಸ್ವಾಮಿಯವರ "ಬಾರುಕೋಲು"
ಮೈಸೂರಿನ ನ್ಯಾಯವಾದಿ, ಲೇಖಕ ಬಿ. ಆರ್. ರಂಗಸ್ವಾಮಿಯವರು ಸಂಪಾದಕರಾಗಿ ಹೊರತರುತ್ತಿದ್ದ ಪಾಕ್ಷಿಕ ಪತ್ರಿಕೆ "ಬಾರುಕೋಲು". ಬಾರುಕೋಲುವಿನ ಮುದ್ರಕರು, ಪ್ರಕಾಶಕರು ಮತ್ತು ಮಾಲಕರು ಲೇಖಕಿಯಾಗಿರುವ ಪದ್ಮಶ್ರೀ ಟಿ. ಅವರು. ಮೈಸೂರು ಸರಸ್ವತಿಪುರಂನ ಕುಕ್ಕರಹಳ್ಳಿಯಲ್ಲಿ ಪತ್ರಿಕಾಲಯವಿತ್ತು.
2014ರಲ್ಲಿ ಆರಂಭಿಸಿ ಆರೇಳು ವರ್ಷಗಳ ಕಾಲ ನಡೆಸಿ ಬಳಿಕ ಪತ್ರಿಕೆಯನ್ನು ಸ್ಥಗಿತಗೊಳಿಸಲಾಗಿದೆ. ವೈಚಾರಿಕ, ವೈಜ್ಞಾನಿಕ, ರಾಜಕೀಯ, ಸಾಮಾಜಿಕ, ಪರಿಸರ, ಮಹಿಳೆ, ಕಾರ್ಮಿಕರ ಪರವಾದ ಲೇಖನಗಳನ್ನು, ವಿಶ್ಲೇಷಣೆಗಳು, ಪ್ರಚಲಿತ ವಿದ್ಯಾಮಾನಗಳ ಅವಲೋಕನಗಳನ್ನು ಬಾರುಕೋಲು ಆದ್ಯತೆಯಲ್ಲಿ ಪ್ರಕಟಿಸುತ್ತಿತ್ತು. ಕತೆ, ಕವಿತೆ, ಸಿನಿಮಾ ಬರಹಗಳೂ ಪ್ರಕಟವಾಗುತ್ತಿತ್ತು. ಟ್ಯಾಬ್ಲಾಯ್ಡ್ ಮಾದರಿಯಲ್ಲಿ ಹದಿನಾರು ಪುಟಗಳಲ್ಲಿ ಪ್ರಕಟವಾಗುತ್ತಿದ್ದ "ಬಾರುಕೋಲು" ವಿನ ಬಿಡಿ ಸಂಚಿಕೆಯ ಬೆಲೆ ಹದಿನೈದು ರೂಪಾಯಿಗಳಾಗಿತ್ತು.
~ ಶ್ರೀರಾಮ ದಿವಾಣ