ಕನ್ನಡ ಪತ್ರಿಕಾ ಲೋಕ (ಭಾಗ ೧೭೩) - ಟ್ಯೂಟರ್ಸ್ ಪೇಜ್
ಟಿ. ಆರ್. ಗೋಪಾಲಕೃಷ್ಣ ಅವರ "ಟ್ಯೂಟರ್ಸ್ ಪೇಜ್"
ಉಡುಪಿ ನಗರದ ಸೂಪರ್ ಬಜಾರ್ ವಾಣಿಜ್ಯ ಸಂಕೀರ್ಣದಲ್ಲಿ ಗಣೇಶ್ ಟ್ಯುಟೋರಿಯಲ್ ಕಾಲೇಜು ನಡೆಸುತ್ತಿದ್ದ ಟಿ. ಆರ್. ಗೋಪಾಲಕೃಷ್ಣ ಅವರು ಪ್ರಕಟಿಸುತ್ತಿದ್ದ ಮಾಸಪತ್ರಿಕೆ "ಟ್ಯೂಟರ್ಸ್ ಪೇಜ್". ಪುಸ್ತಕ ಪ್ರಕಾಶಕರು ಮತ್ತು ಶಿಕ್ಷಕರಾಗಿದ್ದ ಟಿ. ಆರ್. ಗೋಪಾಲಕೃಷ್ಣ ಅವರು 1995ರಲ್ಲಿ "ಟ್ಯೂಟರ್ಸ್ ಪೇಜ್" ಮಾಸಪತ್ರಿಕೆಯನ್ನು ಆರಂಭಿಸಿದ್ದರು.
ಐದಕ್ಕೂ ಅಧಿಕ ವರ್ಷಗಳ ಕಾಲ ಸಂಪಾದಕರು, ಪ್ರಕಾಶಕರು ಮತ್ತು ಮುದ್ರಕರಾಗಿ ಮಾಸಪತ್ರಿಕೆ ನಡೆಸಿದ ಗೋಪಾಲಕೃಷ್ಣರು ಬಳಿಕ ಪ್ರಕಟಣೆಯನ್ನು ಸ್ಥಗಿತಗೊಳಿಸಿದರು. ಉಡುಪಿಯ ಹೊನ್ನ ಪದ್ಮ ಪ್ರಿಂಟರ್ಸ್ ನಲ್ಲಿ ಮುದ್ರಣವಾಗುತ್ತಿದ್ದ "ಟ್ಯೂಟರ್ಸ್ ಪೇಜ್" 22 ಪುಟಗಳಲ್ಲಿ ಬರುತ್ತಿತ್ತು. ಬಿಡಿ ಸಂಚಿಕೆಯ ಬೆಲೆ ಹತ್ತು ರೂಪಾಯಿಗಳಾಗಿತ್ತು. ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರನ್ನು ಗಮನದಲ್ಲಿರಿಸಿಕೊಂಡು ಹೊರತರುತ್ತಿದ್ದ ಮಾಸಪತ್ರಿಕೆಯಲ್ಲಿ ವಿದ್ಯಾಭ್ಯಾಸ, ವ್ಯಕ್ತಿತ್ವ ವಿಕಸನ, ಆಪ್ತ ಸಲಹೆ, ಹೀಗೆ ವೈವಿಧ್ಯಮಯ ಬರಹಗಳು ಪ್ರಕಟವಾಗುತ್ತಿತ್ತು.
~ ಶ್ರೀರಾಮ ದಿವಾಣ