ಕನ್ನಡ ಪತ್ರಿಕಾ ಲೋಕ (ಭಾಗ ೧೭೪) - ಮದರಂಗಿ
ಸನಾ ಬುಕ್ ಹೌಸ್ ನ "ಮದರಂಗಿ"
ಮಂಗಳೂರು ದೇರಳಕಟ್ಟೆಯ ಯುನಿವರ್ಸಿಟಿರಸ್ತೆಯಲ್ಲಿರುವ ಸನಾ ಬುಕ್ ಹೌಸ್ ಸಂಸ್ಥೆಯು ದಶಕಕ್ಕೂ ಅಧಿಕ ಕಾಲ ಪ್ರಕಟಿಸಿದ ಮಾಸಪತ್ರಿಕೆ ಮನ - ಮನೆಯ ಮಧು ಮಾನಸ "ಮದರಂಗಿ".
2008ರಲ್ಲಿ ಆರಂಭವಾದ "ಮದರಂಗಿ" ಯ ಸಂಪಾದಕರು ಮತ್ತು ಪ್ರಕಾಶಕರಾಗಿದ್ದವರು ಲೇಖಕರಾದ ಡಿ. ಐ. ಅಬೂಬಕರ್ ಕೈರಂಗಳ. ಸಯ್ಯಿದ್ ಮುಹಮ್ಮದ್ ಹಬೀಬುಲ್ಲಾಹ್ ತಂಙಳ್ ಗೌರವ ಸಂಪಾದಕರಾಗಿದ್ದರು. ಸಾಲೆತ್ತೂರು ಅಬೂಬಕರ್ ಫೈಝಿ ಪ್ರಧಾನ ಸಂಪಾದಕರಾಗಿದ್ದರು. ಮುಹಮ್ಮದ್ ನಾಸಿರ್ ಸಜಿಪ ಉಪ ಸಂಪಾದಕರಾಗಿದ್ದರು. ಅಶ್ರಫ್ ದೇರಳಕಟ್ಟೆ ಪ್ರಸಾರ ವ್ಯವಸ್ಥಾಪಕರಾಗಿದ್ದರು. ರಫೀಕ್ ಅಮ್ಜದಿ ಮಾವಿನಕಟ್ ಪ್ರಸಾರ ನಿರ್ವಾಹಕರಾಗಿದ್ದರು. ಲತೀಫ್ ಕೊಡೆಂಚಿಲ್ ವ್ಯವಸ್ಥಾಪಕರಾಗಿದ್ದರು.
2015ರಿಂದ "ಮದರಂಗಿ" ಯ ಸಂಪಾದಕೀಯ ಬಳಗದಲ್ಲಿ ಕೆಲವೊಂದು ಬದಲಾವಣೆಗಳಾಗಿತ್ತು. ಅಬೂ ಸುಫ್ ಯಾನ್ ಎಚ್. ಐ. ಇಬ್ರಾಹೀಂ ಮದನಿ ಅವರು ವ್ಯವಸ್ಥಾಪಕ ಸಂಪಾದಕರಾದರು. ಎಮ್ಮೆಸ್ಸೆಂ ಝೈನೀ ಕಾಮಿಲ್ ಅವರು ಪ್ರಧಾನ ಸಂಪಾದಕರಾದರು. ಟಿ. ಎಂ. ಅಶ್ರಫ್ ಸಖಾಫಿ ಉಪ ಸಂಪಾದಕರಾದರು.
54 ಪುಟಗಳಲ್ಲಿ ಪುಸ್ತಕ ರೂಪದಲ್ಲಿ ಬರುತ್ತಿದ್ದ "ಮದರಂಗಿ"ಯ ಬಿಡಿ ಸಂಚಿಕೆಯ ಬೆಲೆ 15 ರೂಪಾಯಿಗಳಾಗಿತ್ತು. ವಾರ್ಷಿಕ ಚಂದಾ 150 ರೂಪಾಯಿಗಳಾಗಿತ್ತು. ಧಾರ್ಮಿಕ, ಸಾಮಾಜಿಕ, ಸಾಹಿತ್ಯಿಕ ಮತ್ತು ವೈದ್ಯಕೀಯಕ್ಕೆ ಸಂಬಂಧಿಸಿದ ಬರೆಹಗಳು ಆದ್ಯತೆಯಲ್ಲಿ ಪ್ರಕಟವಾಗುತ್ತಿತ್ತು.
ಹಸನ್ ಮುಅಲ್ಲಿಂ ಬಾಳೆಹೊಳೆ, ಎಚ್. ಎನ್. ಶಾಫಿ ಮಿಸ್ಬಾಹಿ ಬಜಾಲ್ ನಂತೂರು, ಇಸ್ಮತ್ ಫಜೀರ್, ಫಾತಿಮತ್ ಶಮೀರ ಎ. ಬಿ. ಕೆದುಂಬಾಡಿ, ಫರ್ಝಾನ ಎನ್. ನೀರ್ಕಜೆ, ಅಶ್ರಫ್ ದೇರಳಕಟ್ಟೆ, ಝಲೀಖಾ ಬೈತಡ್ಕ, ಅಬೂಬಕರ್ ಸಿದ್ದೀಕ್ ಡಿ. ಎಂ. ಮರಿಕ್ಕಳ, ಶಾಹಿದ್ ಮಕ್ಬೂಲ್ ಕಾಡುಮಠ, ಮುಹಮ್ಮದ್ ಸಿನಾನ್ ಬೆಳ್ತಂಗಡಿ, ನಝೀಮಾ ಕೆ. ಸಿ. ರೋಡ್, ಬಿ. ಕೆ. ಎಸ್., ಹಸೀನಾ ಎಸ್. ಎ. ಸಣ್ಣಬೈಲು, ಹಂಝ ಮಲಾರ್, ಅಬ್ದುಲ್ ಸಮದ್ ಬಾವಾ ಪುತ್ತೂರು, ಶಂಶೀನಾ ಗುರಿಂಗಾನ ಬೆಳ್ತಂಗಡಿ, ಹಸೀನಾ ಪಿ. ಎಂ. ಮೌಲಾನಗರ ಇರಾ, ಡಾ. ಎಂ. ಎಸ್. ಕೃಷ್ಣಮೂರ್ತಿ, ಅಬ್ದುಲ್ ಅಝೀಝ್ ಝುಹ್ರಿ ಪುಣಚ, ಸಜಿಪ ಮುಹಮ್ಮದ್ ನಾಸಿರ್, ತೊಡಿಕಾನ ಅಬ್ದುಲ್ಲ, ವಸಂತ ಕೆಂಪುಮಣ್ಣು, ಡಿ. ಎ. ಅಶ್ರಫ್ ದೇರಳಕಟ್ಟೆ, ತಸ್ಲೀಮಾ ಪುರುಷರಕಟ್ಟೆ, ಹೈದರ್ ಆಲಿ ಐವತ್ತೊಕ್ಲು ಸವಣೂರು, ಹನೀಫ್ ನೆಲ್ಯಾಡಿ, ವಿದ್ಯಾ ಮೂಡಿತ್ತಾಯ, ಬಾವ ಮರವೂರ್, ಆತೂರು ಇಬ್ರಾಹೀಂ ಸಖಾಫಿ, ದಾದಾಪೀರ್ ಬೆಂಗಳೂರು, ಅಬುಲ್ ಅಮೀನ್ ಸಖಾಫಿ ಕುರ್ನಾಡು, ಅಬೂಸುಫ್ಯಾನ್ ಎಚ್. ಐ. ಇಬ್ರಾಹಿಂ ಮದನಿ, ಬಿ. ಎಸ್. ಮುಹಮ್ಮದ್ ಇಸ್ಮಾಈಲ್ ಸ್ವಲಾತ್ ನಗರ ಕುತ್ತಾರು, ಮಾಶಿ ಚೆಂಡೆಗುಳಿ, ಎಮ್ಮೆಸ್ಸೆಂ ಝೈನೀ ಕಾಮಿಲ್, ಕೆ. ಸಿ. ಎಣ್ಮೂರು, ಶಾಲಿಶಾ ಮರ್ಕಝುಲ್ ಹುದಾ ಕುಂಬ್ರ, ಅಬ್ದುಲ್ ಲತೀಫ್ ಶಾಹ್ ಖಾದ್ರಿ ಅಲ್ ಮದನಿ ಲಾಸಾನೀ ಪೀರ್, ಟಿ. ಎಂ. ಅಶ್ರಫ್ ಸಖಾಫಿ ಉರ್ಣಿ, ಉಮರ್ ಮದನಿ ನಾಟೆಕಲ್, ಹಂಝತುಲ್ ಕರಾರ್ ಸಾಲೆತ್ತೂರು, ಮರ್ಯಂ ತನ್ಸೀಲ ಎಂ. ಪೊಯ್ಯತ್ತಬೈಲು, ಫಾಝಪ್ರಿಯ, ತೋಕೆ ಸಖಾಫಿ, ಮುಹಮ್ಮದ್ ರ್ಫಾನ್ ಎಂ. ಪಿ. ನಡುಪದವು, ರಫೀಕ್ ಮಾಸ್ಟರ್, ಬಿ. ಕೆ. ಸ್ವಾದಿಕ್ ಅಲಿ ಸಂಪ್ಯ, ಡಿ. ಶಾಹಿದಾ ದೇರಳಕಟ್ಟೆ, ರಝಿಯಾ ಮುದುಂಗಾರುಕಟ್ಟೆ, ಡಿ. ಎ. ಅಬ್ಬಾಸ್ ಪಡಿಕ್ಕಲ್, ಶಾಕಿರಬಾನು ಕೆಮ್ಮಾರ, ತಸ್ಲೀಮಾ ಮೊಂಟೆಪದವು, ಹಂಝ ಕಾಗಡಿಕಟ್ಟೆ, ನೌಫಲ್ ಅಡ್ಡೇಡಿ,ನಝೀರ್ ಉಪ್ಪಿನಂಗಡಿ, ಎ. ಪಿ. ಹನೀಫ್ ಪೂಡಲ್ ಕಲ್ಮಿಂಜ, ಫಕ್ರುದ್ದೀನ್ ಇರುವೈಲು, ಇರ್ಷಾದ್ ಕುತುಬಿನಗರ, ದಾವೂದ್ ರಹ್ಮಾನ್, ನಸೀಮ ಮೊಂಟೆಪದವು, ಪ್ರೊ. ಬಿ. ಎಂ. ಇಚ್ಲಂಗೋಡು,ಮುಬೀನಾ ಮಾಳಿಕೊಪ್ಪ, ಅ. ಸಿದ್ಧೀಖ್ ಕೊಡಕ್ಕಲ್, ಮುಹಾಝ್ ದರ್ಸ್ ಮುತಲ್ಲಿಮ್ ಕೆ. ಸಿ. ರೋಡ್, ಇಶ್ರತ್ ಸೆರ್ಕಳ, ಶಾಹಿನಾ ಮಂಚಿ, ಬಾವಾ ಮರವೂರು, ಬಶೀರ್ ಅಹ್ಮದ್ ಕಿನ್ಯ, ಸೌದ ಮಲಾರ್, ಕೆ.ಎಂ. ಇಕ್ಬಾಲ್ ಬಾಳಿಲ,ಅಣ್ಣಾ ದೊರೈ, ಎನ್. ಮಿಸ್ರಿಯಾ ನೆಕ್ರಾಜೆ, ಫಾತಿಮತ್ ಸಂಸೀನಾ ನೀಟಡ್ಕ, ಶಾಹಿದ್ ಮಕ್ಬೂಲ್ ಕಾಡುಮಠ, ಸಿದ್ದೀಖ್ ಬೊಳ್ಮಾರ್, ಕೆ. ಎಂ. ಫಾತಿಮತ್ ಝಹ್ ರಾ ಕನ್ಯಾನ,ಉಮೈರಾ ಗಡಿಯಾರ್, ಹುಸೈನ್ ಪಾವೂರ್, ಬುಶ್ರಾ ಸಿ. ಹೆಚ್.ಚಣಿಲ, ಡಾ. ಸಾದಿಯ ಸಯೀಂ, ಅಬೂ ಸುವೈಬ ಕುರ್ನಾಡು, ಸಾಬಿರಾ ಮುಕ್ಕಚ್ಚೇರಿ, ಅಬ್ದುಸ್ಸಲಾಂ ಅಲಾದಿ ವಿಟ್ಲ ಮೊದಲಾದ ಅನೇಕರ ಬರಹಗಳು "ಮದರಂಗಿ" ಯಲ್ಲಿ ಪ್ರಕಟವಾಗುತ್ತಿತ್ತು.
~ ಶ್ರೀರಾಮ ದಿವಾಣ