ಕನ್ನಡ ಪತ್ರಿಕಾ ಲೋಕ (ಭಾಗ ೧೭೫) - ಹೊಸ ಮನುಷ್ಯ

ಕನ್ನಡ ಪತ್ರಿಕಾ ಲೋಕ (ಭಾಗ ೧೭೫) - ಹೊಸ ಮನುಷ್ಯ

ಡಿ. ಎಸ್. ನಾಗಭೂಷಣ ಅವರ "ಹೊಸ ಮನುಷ್ಯ"

ಖ್ಯಾತ ಬರಹಗಾರರೂ, ಸಾಹಿತಿಗಳೂ, ವಿಮರ್ಶಕರೂ, ಸಮಾಜವಾದಿ ಚಿಂತಕರೂ, ಲೋಹಿಯಾವಾದಿಗಳೂ ಆದ ಡಿ. ಎಸ್. ನಾಗಭೂಷಣ ಅವರು ಪ್ರಕಟಿಸುತ್ತಿದ್ದ ಸಮಾಜವಾದಿ ಮಾಸಿಕವಾಗಿತ್ತು "ಹೊಸ ಮನುಷ್ಯ". 2011ರ ಆಗಸ್ಟ್  ತಿಂಗಳಲ್ಲಿ ಆರಂಭವಾದ "ಹೊಸ ಮನುಷ್ಯ", ಒಂದು ದಶಕಕ್ಕೂ ಅಧಿಕ ಕಾಲ ಮೌಲಿಕ ಬರಹಗಳನ್ನು ಓದುಗರಿಗೆ ನೀಡುತ್ತಾ ನಡೆದುಕೊಂಡು ಬಂದು ನಂತರ ಸ್ಥಗಿತಗೊಂಡಿತು. 'ಡಿಎಸ್ಸೆನ್' ಅವರು 2022ರ ಮೇ 19ರಂದು ನಿಧನರಾದರು. ಇವರು ನಿಧನರಾಗುವವರೆಗೂ ಹೊಸ ಮನುಷ್ಯ ಪ್ರಕಟವಾಗುತ್ತಿತ್ತು.

2017ರಲ್ಲಿ ಮಾತ್ರ ಆರು ತಿಂಗಳ ಕಾಲ ಆರು ಸಂಚಿಕೆಗಳು ಪ್ರಕಟವಾಗಿರಲಿಲ್ಲ. ಪ್ರತೀ ವರ್ಷವೂ ಆಗಸ್ಟ್ ತಿಂಗಳಲ್ಲಿ ಐವತ್ತಕ್ಕೂ ಅಧಿಕ ಪುಟಗಳ ವಾರ್ಷಿಕ ವಿಶೇಷ ಸಂಚಿಕೆಗಳನ್ನು ಪ್ರಕಟಿಸಲಾಗುತ್ತಿತ್ತು.

"ಗಾಂಧಿ ಕಥನ" ಸಹಿತ ಇಪ್ಪತ್ತಕ್ಕೂ ಅಧಿಕ ಅಮೂಲ್ಯ ಕೃತಿಗಳನ್ನು ನೀಡಿರುವ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರೂ, ದೆಹಲಿ ಆಕಾಶವಾಣಿಯ ಕನ್ನಡ ವಾರ್ತಾ ವಾಚಕರೂ, ಸಹಾಯಕ ನಿಲಯ ನಿರ್ದೇಶಕರೂ ಆಗಿದ್ದ ಡಿ. ಎಸ್. ನಾಗಭೂಷಣರು "ಹೊಸ ಮನುಷ್ಯ" ದ ಸಂಪಾದಕರು, ಪ್ರಕಾಶಕರು, ಮಾಲೀಕರು ಮತ್ತು ಮುದ್ರಕರಾಗಿದ್ದರು. ಪತ್ರಿಕೆ ಬೆಂಗಳೂರಿನ ರಿಪ್ಲಿಕ ಆಫ್ ಸೆಟ್ ನಲ್ಲಿ ಮುದ್ರಣವಾಗುತ್ತಿತ್ತು.

ಮೂಲತಹ ಬೆಂಗಳೂರಿನ ಹೊಸಕೋಟೆಯವರಾದ ಡಿ ಎಸ್ ನಾಗಭೂಷಣರು, ಶಿವಮೊಗ್ಗದ ಕಲ್ಲಹಳ್ಳಿಯಲ್ಲಿ ವಾಸ್ತವ್ಯವಿದ್ದರು ಮತ್ತು ಇಲ್ಲಿಂದಲೇ ಹೊಸ ಮನುಷ್ಯನನ್ನು ಮುನ್ನಡೆಸುತ್ತಿದ್ದರು. 24 ಪುಟಗಳ "ಹೊಸ ಮನುಷ್ಯ" ದ ಬಿಡಿ ಸಂಚಿಕೆಯ ಬೆಲೆ 20 ರೂಪಾಯಿಗಳಾಗಿತ್ತು. ವಾರ್ಷಿಕಾ ಚಂದಾ 150 ರೂಪಾಯಿಗಳಾಗಿತ್ತು. 

ಪ್ರತೀ ಸಂಚಿಕೆಯ ಮುಖಪುಟದಲ್ಲಿ 'ಸಂಪಾದಕರ ಟಿಪ್ಪಣಿಗಳು' ಪ್ರಕಟವಾಗುತ್ತಿದ್ದರೆ, ಒಳಪುಟಗಳಲ್ಲಿ ಮೌಲಿಕ ಲೇಖನಗಳು, ಚಿಂತನಾರ್ಹ ಬರಹಗಳು, ವಿಮರ್ಶೆಗಳು, ಸಂವಾದಗಳು, ಅನುವಾದಿತ ಬರಹಗಳು, ಕವನಗಳು, ಕಥೆ ಹೀಗೆ ಎಲ್ಲಾ ರೀತಿಯ ಬರಹಗಳು ಪ್ರಕಟವಾಗುತ್ತಿದ್ದುವು.

ನ್ಯಾಯಮೂರ್ತಿ ಸುದರ್ಶನ ರೆಡ್ಡಿ, ದು. ಸರಸ್ವತಿ, ಲಕ್ಷ್ಮೀಶ ತೋಳ್ಪಾಡಿ, ಸವಿತಾ ನಾಗಭೂಷಣ, ರೂಪ ಹಾಸನ, ಕಾವ್ಯ ಕಡಮೆ, ಶಾರದಾ ಗೋಪಾಲ, ಡಾ. ಡಿ. ಎಸ್. ಪೂರ್ಣಾನಂದ, ಶೈಲಜಾ ವೇಣುಗೋಪಾಲ್, ಕೆ. ರೋಹಿತ್ ಆಲೂರು, ಡಾ. ಸುಶಿ ಕಾಡನಕುಪ್ಪೆ, ಟಿ. ಎಲ್. ರೇಖಾಂಬ, ಆರ್. ಪ್ರತಿಭಾ, ಡಾ. ಗೀತಾ ವಸಂತ, ಡಾ. ಸಬಿತಾ ಬನ್ನಾಡಿ, ಡಾ. ವಿನಯಾ, ಆರ್. ತಾರಿಣಿ ಶುಭದಾಯಿನಿ, ವಿಜಯಾ ಶ್ರೀಧರ್, ಕೆ. ಮಂಜುಳಾ ರಾಜು, ಹೊನ್ನಾಳಿ ಚಂದ್ರಶೇಖರ್, ಸಂಜೀವ ಕುಲಕರ್ಣಿ, ಕೇಶವ ಎಚ್. ಕೊರ್ಸೆ, ಪ್ರಭಾತ್ ಪಟ್ನಾಯಕ್, ಮಲ್ಲಿಕಾರ್ಜುನ ಹುಲಗಬಾಳಿ, ಎಂ. ಡಿ. ವಕ್ಕುಂದ, ಉಗಮ ಶ್ರೀನಿವಾಸ್, ಓ. ಎಲ್. ನಾಗಭೂಷಣ ಸ್ವಾಮಿ,ರಾಜಾರಾಮ್ ತೋಳ್ಪಾಡಿ, ಎಂ. ರಾಜು, ಎಚ್. ಎಸ್. ರಾಘವೇಂದ್ರ ರಾವ್, ನಾಗಭೂಷಣ ಪಟೇಲ್, ನಿವೃತ್ತ ನ್ಯಾಯಮೂರ್ತಿ ಮದನ್ ಬಿ. ಲೋಕೂರ್, ಜಿ. ಪಿ. ಬಸವರಾಜು, ಚಂದ್ರಶೇಖರ ತಾಳ್ಯ, ಬಾ. ಹ. ರಮಾಕುಮಾರಿ, ಸಂತೋಷ್ ಚೊಕ್ಕಾಡಿ, ಅವಿನಾಶ್ ಟಿ., ಕೆ. ಪದ್ಮಾಕ್ಷಿ, ನಿಜಾಂ ಪಾಶಾ, ಹಸನ್ ನಯೀಂ ಸುರಕೋಡ, ಎನ್. ಆರ್. ಸ್ನೇಹಾ, ವಿಜಯಶ್ರೀ ಹಾಲಾಡಿ, ಎಂ. ಆರ್. ಕಮಲ, ಮಂಜುಳಾ ಎಂ. ರಾಜು, ವೆಂಕಟೇಶ ಮಾಚಕನೂರ, ಗೋವಿಂದರಾಜು ಎಂ. ಕಲ್ಲೂರು, ಗೌತಮ್ ಭಾಟಿಯಾ, ಟಿ. ಎಸ್. ವೇಣುಗೋಪಾಲ್, ಮಧುಮಿತ ದತ್ತ, ಸಿರೀಶ ನಾಯ್ಡು, ಎಂ. ಎಸ್. ಶ್ರೀರಾಮ್, ಸುಬ್ಬು ಹೊಲೆಯಾರ್, ರಾಜೇಂದ್ರ ಚೆನ್ನಿ, ಜನಾರ್ದನ ಸಿ. ಎಸ್., ನಾಗೇಶ ಹೆಗಡೆ, ಪೆಗ್ಗಿ ಮೋಹನ್, ಅಂಜನ್ ಬಸು, ಮಹಾಂತೇಶ ಓಶಿಮಠ, ಅನಿಕೇತನ ಟಿ. ಎಸ್., ಕೃತಿ ಆರ್., ಸುಧೀಂದ್ರ ಕುಲಕರ್ಣಿ, ಅಪೂರ್ವಾನಂದ, ರಾಮಚಂದ್ರ ಗುಹಾ, ಮಲ್ಲಿಕಾರ್ಜುನ ಹೊಸಪಾಳ್ಯ, ಜಿ. ವಿ. ಆನಂದಮೂರ್ತಿ, ಆರ್.ಜ್ಯೋತಿ, ಸುರೇಶ್ ನಾಗಲಮಡಿಕೆ, ಸಂಜಯಕುಮಾರ್,  ಎನ್. ಎಸ್. ಶಂಕರ್, ನಿತ್ಯಾನಂದ ಬಿ. ಶೆಟ್ಟಿ, ರಾಜ್ ಮೋಹನ್ ಗಾಂಧಿ, ಬಿ. ಎಸ್. ದಿವಾಕರ, ಬಿ. ವಿ. ಸುರೇಂದ್ರ, ಜಯಂತ ಕಾಯ್ಕಿಣಿ, ಎಚ್. ಪಟ್ಟಾಭಿರಾಮ ಸೋಮಯಾಜಿ, ಸೈಫ್ ಜಾನ್ಸೆ ಕೊಟ್ಟೂರು, ದೇವು ಪತ್ತಾರ, ಸೋಮು ಹುಬ್ಬಳ್ಳಿ, ಮಮತಾ ಪ್ರಭು, ಚನ್ನಪ್ಪ ಕಟ್ಟಿ, ಚಿನುಆ ಅಚಿಬೆ, ನಾಗರೇಖಾ ಗಾಂವಕರ್, ಎಚ್. ಎಸ್. ಶಿವಪ್ರಕಾಶ್, ಶೃಂಗೇಶ್, ಪ್ರೊ. ಪುರುಷೋತ್ತಮ ಅಗರವಾಲ್, ಕೆ. ಶ್ರೀದೇವಿ ಶಿವಮೊಗ್ಗ, ಅಪೂರ್ವ ಡಿಸಿಲ್ವ, ಬಿ. ವಿ. ರಾಮಪ್ರಸಾದ್, ಎಸ್. ಸಿರಾಜ್ ಅಹಮದ್, ಯೋಗೇಂದ್ರ ಯಾದವ್, ಅಮರೇಶ ನುಗಡೋಣಿ, ನಯನಾ ಕಾಶ್ಯಪ್, ಕೆ. ಪಿ. ಮೃತ್ಯುಂಜಯ, ಎಂ. ರಾಘವೇಂದ್ರ, ಅಕ್ಷರ ಕೆ. ವಿ., ಸಂತೋಷ ಕೌಲಗಿ, ಶೋಭಾ ನಾಯಕ, ರಮೇಶ ಸಿ. ಬನ್ನಿಕೊಪ್ಪ ಹಲಗೇರಿ, ಮಂಜುಳಾ ಹಿರೇಮಠ, ಮಹೇಶ ಬಳ್ಳಾರಿ, ಸುಧಾಕರ ದೇವಾಡಿಗ, ಅನಿಲ್ ಹೆಗ್ಡೆ, ಬಾಮಾ, ಪದ್ಮಾ ಶ್ರೀರಾಮ, ಮಹಾಬಲೇಶ್ವರ ರಾವ್, ಆರ್. ಸಮತಾ,ಗೋ. ತಿಪ್ಪೇಶ್,ಪಿ. ಬಿ. ಪ್ರಸನ್ನ,ಬಸವರಾಜ ಹೂಗಾರ ಮೊದಲಾದ ಅನೇಕ ಬರಹಗಾರರ ಬರಹಗಳು " ಹೊಸ ಮನುಷ್ಯ"ದಲ್ಲಿ ಪ್ರಕಟವಾಗುತ್ತಿದ್ದುವು.

~ ಶ್ರೀರಾಮ ದಿವಾಣ