ಕನ್ನಡ ಪತ್ರಿಕಾ ಲೋಕ (ಭಾಗ ೧೭೬) - ಪ್ರಸ್ತುತ

ಕನ್ನಡ ಪತ್ರಿಕಾ ಲೋಕ (ಭಾಗ ೧೭೬) - ಪ್ರಸ್ತುತ

ಮಂಗಳೂರು ಮೀಡಿಯಾ ಹೌಸ್ ನ "ಪ್ರಸ್ತುತ"

ಮಂಗಳೂರಿನ 'ಮೀಡಿಯಾ ಹೌಸ್' ಸಂಸ್ಥೆಯು ಹದಿನೈದು ವರ್ಷಗಳ ಕಾಲ ನಿರಂತರವಾಗಿ ಪ್ರಕಟಿಸಿದ ಪಾಕ್ಷಿಕ ಪತ್ರಿಕೆಯಾಗಿದೆ "ಪ್ರಸ್ತುತ". ಹೋರಾಟಗಾರ, ಸಂಘಟಕ, ಲೇಖಕ, ವಾಗ್ಮಿ ಕೆ. ಎಂ. ಶರೀಫ್ ಅವರು ಪ್ರಧಾನ ಸಂಪಾದಕರು, ಪ್ರಕಾಶಕರು, ಮುದ್ರಕರು ಆಗಿದ್ದರು. ಫಯಾಝ್ ಎನ್. ಸಂಪಾದಕರಾಗಿದ್ದರು. ಅಬ್ದುಲ್ ಲತೀಫ್ ಪಿ., ಅಬ್ದುಲ್ ರಝಾಕ್ ಕೆ.,  ಇಲ್ಯಾಸ್ ಮುಹಮ್ಮದ್, ಅಬ್ದುಲ್ ಹಮೀದ್ ವೈ, ಅಸ್ಲಮ್ ಹಸನ್ ಹಾಗೂ ಶಾಹಿದಾ ಎ. ಸಂಪಾದಕ ಮಂಡಳಿ ಸದಸ್ಯರಾಗಿದ್ದರು. ಅಬ್ದುಲ್ ಖಾದರ್ ಪಿ. ವ್ಯವಸ್ಥಾಪಕರಾಗಿದ್ದರು. ಎಂ. ಶಬೀರ್ ಪತ್ರಿಕೆಯ ಗ್ರಾಫಿಕ್ ಡಿಸೈನರ್ ಆಗಿದ್ದರು.

ಮಂಗಳೂರು ನಗರದ ಬಂದರು ಪ್ರದೇಶದ ಜೆ. ಎಂ. ರೋಡ್ ನಲ್ಲಿ ಪತ್ರಿಕಾ ಕಚೇರಿ ಇತ್ತು. ಶ್ರುತಿ ಪಬ್ಲಿಕೇಶನ್ ನ ಮೀಡಿಯಾ ಹೌಸ್ ಮೂಲಕ  "ಪ್ರಸ್ತುತ" ಪಾಕ್ಷಿಕವನ್ನು ಪ್ರಕಟಿಸಲಾಗುತ್ತಿತ್ತು. 2005ರಲ್ಲಿ ಆರಂಭವಾದ ಸತ್ಯ ಸುದ್ಧಿಯ "ಪ್ರಸ್ತುತ" ಪಾಕ್ಷಿಕ ಪತ್ರಿಕೆ 2022ರ ವರೆಗೆ ನಿರಂತರವಾಗಿ ಪ್ರಕಟಗೊಂಡು ಬಳಿಕ ಸ್ಥಗಿತಗೊಂಡಿತು. ಪುಸ್ತಕ ರೂಪದಲ್ಲಿ 60 ಪುಟಗಳಲ್ಲಿ ಬರುತ್ತಿದ್ದ ಪತ್ರಿಕೆಯ ಬಿಡಿ ಸಂಚಿಕೆಯ ಬೆಲೆ 12. ರೂಪಾಯಿಗಳಾಗಿತ್ತು.

ಶಿವಸುಂದರ್, ಇಲ್ಯಾಸ್ ಎಂ.ಟಿ., ಪಿ ಎನ್ ಬಿ, ಶಬೀರ್ ಕೆ., ಕೆ. ವೈ. ಅಬ್ದುಲ್ ಹಮೀದ್, ಉಮ್ಮು ಅಸ್ಮಾ ಬಿ. ಸಿ. ರೋಡು, ಮುರ್ಶಿದ್, ಝಿಯಾವುಲ್ ಹಖ್ ಎಚ್., ಮುಹಮ್ಮದ್ ಅಸ್ತಾರ್ ಅಡ್ಡೂರು, ಝುಹರಾ ಹಸನ್ ಮುಕ್ಕ, ನಸ್ರಿಯಾ ಕಲ್ಲಡ್ಕ, ಇಮ್ತಿಯಾಝ್ ಅರ್ಕುಳ, ಅಬ್ದುಲ್ ಹಮೀದ್ ಕುಕ್ಕಾಜೆ, ಎ. ಸಯೀದ್, ರಮೀಝ್ ನೆಕ್ಕಿಲಾಡಿ, ತೌಸಿಯಾ ಮಂಗಳೂರು, ಫಾತಿಮಾ ನಸ್ರೀನಾ, ಝಿಯಾವುಲ್ ಎಚ್., ಹಬೀಬ್ ಕಲ್ಲಡ್ಕ ಮೊದಲಾದ ಅನೇಕ ಬರಹಗಾರರು ಪ್ರಸ್ತುತಕ್ಕೆ ಬರೆಯುತ್ತಿದ್ದರು. ಅನುವಾದಿತ ಲೇಖನಗಳೂ ಪ್ರಕಟವಾಗುತ್ತಿತ್ತು.

~ ಶ್ರೀರಾಮ ದಿವಾಣ