ಕನ್ನಡ ಪತ್ರಿಕಾ ಲೋಕ (ಭಾಗ ೧೮೬) - ಪ್ರಸಿದ್ಧ ಪತ್ರಿಕೆ

ಕನ್ನಡ ಪತ್ರಿಕಾ ಲೋಕ (ಭಾಗ ೧೮೬) - ಪ್ರಸಿದ್ಧ ಪತ್ರಿಕೆ

ಸಂತೋಷ್ ಸುವರ್ಣ ಅವರ "ಪ್ರಸಿದ್ಧ ಪತ್ರಿಕೆ"

ಉಡುಪಿ ಜಿಲ್ಲೆ ಬೊಮ್ಮರಬೆಟ್ಟು ಗ್ರಾಮದ ಪಡುಭಾಗ ನಿವಾಸಿ, ಜೀವವಿಮಾ ನಿಗಮದ ಏಜೆಂಟ್ ಆಗಿರುವ ಸಂತೋಷ್ ಸುವರ್ಣ ಅವರು ಒಂದೆರಡು ವರ್ಷ ನಡೆಸಿದ ವಾರಪತ್ರಿಕೆ "ಪ್ರಸಿದ್ಧ ಪತ್ರಿಕೆ". 2014ರ ನವೆಂಬರ್ ನಲ್ಲಿ ಆರಂಭವಾದ ಪತ್ರಿಕೆ ಅಂದಾಜು ಒಂದೂವರೆ ವರ್ಷ ಕಾಲ ಪ್ರಕಟವಾಗಿ ನಂತರ ಸ್ಥಗಿತಗೊಂಡಿತು. ಇದರ ಸಂಪಾದಕರು, ಪ್ರಕಾಶಕರು, ಮುದ್ರಕರು ಮತ್ತು ಮಾಲಕರು ಸಂತೋಷ್ ಸುವರ್ಣರವರು.

ಟ್ಯಾಬ್ಲಾಯ್ಡ್ ರೂಪದಲ್ಲಿ 12 ಪುಟಗಳಲ್ಲಿ ಪ್ರಕಟವಾಗುತ್ತಿದ್ದ " ಪ್ರಸಿದ್ಧ ಪತ್ರಿಕೆ"ಯ ಬಿಡಿ ಸಂಚಿಕೆಯ ಬೆಲೆ ಹತ್ತು ರೂಪಾಯಿಗಳಾಗಿತ್ತು. ಸಿಟಿ ಗ್ರಾಫಿಕ್ಸ್ ನಲ್ಲಿ ಮುದ್ರಣವಾಗುತ್ತಿತ್ತು. ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಮತ್ತು ಅಪರಾಧಿಕ ವಿಶ್ಲೇಷಣೆಗಳು, ಅವಲೋಕನ ಬರಹಗಳು, ನಾಗರಿಕ ಸಮಸ್ಯೆಗಳಿಗೆ ಸಂಬಂಧಿಸಿದ ವರದಿಗಳು, ಕವನಗಳು, ವ್ಯಕ್ತಿ ಪರಿಚಯ ಇತ್ಯಾದಿ ಆದ್ಯತೆಯಲ್ಲಿ ಪ್ತಕಟವಾಗುತ್ತಿತ್ತು. ಬಿ. ಸಿ. ರಾವ್ ಶಿವಪುರ ಅವರ ಚಿಂತನ, ಪ್ರತಿಭಾ ಎಸ್. ಆಚಾರ್ಯ ಅವರ ಮಹಿಳಾ ಪರ ಲೇಖನ, ಸುಮಲತಾ ಬಾಲಚಂದ್ರ ಹೆಬ್ಬಾರ್ ಅವರ ಬರಹ ಪ್ರತಿ ಸಂಚಿಕೆಯಲ್ಲೂ ಇರುತ್ತಿತ್ತು.

~ ಶ್ರೀರಾಮ ದಿವಾಣ