ಕನ್ನಡ ಪತ್ರಿಕಾ ಲೋಕ (ಭಾಗ ೧೯೬) - ಜನಮಿತ್ರ

ಸಿ ಆರ್ ನವೀನ್ ಸಂಪಾದಕತ್ವದ ‘ಜನಮಿತ್ರ’
ಚಿಕ್ಕಮಗಳೂರು ಜಿಲ್ಲೆಯಿಂದ ಕಳೆದ ಹತ್ತು ವರ್ಷಗಳಿಂದ ಪ್ರಾದೇಶಿಕ ದಿನ ಪತ್ರಿಕೆಯಾಗಿ ಪ್ರಕಟವಾಗುತ್ತಿರುವ ಜನಮಿತ್ರ. ಪತ್ರಿಕೆಯ ಪ್ರಧಾನ ಸಂಪಾದಕರು, ಮುದ್ರಕರು ಮತ್ತು ಪ್ರಕಾಶಕರಾಗಿ ಎಚ್ ಬಿ ಮದನಗೌಡ ಹಾಗೂ ಸಂಪಾದಕರಾಗಿ ಸಿ ಆರ್ ನವೀನ್ ಕಾರ್ಯನಿರ್ವಹಿಸುತ್ತಿದ್ದಾರೆ. ವಾರ್ತಾಪತ್ರಿಕೆಯ ಆಕಾರದ ೬ ಪುಟಗಳು ಎರಡು ಪುಟ ವರ್ಣದಲ್ಲೂ ಉಳಿದ ಪುಟಗಳು ಕಪ್ಪು ಬಿಳುಪು ಮುದ್ರಣ.
ಜನಮಿತ್ರ ಪತ್ರಿಕೆಯು ಚಿಕ್ಕಮಗಳೂರು, ದಕ್ಷಿಣಕನ್ನಡ, ಉಡುಪಿ, ಶಿವಮೊಗ್ಗ, ದಾವಣಗೆರೆ ಜಿಲ್ಲೆಯಲ್ಲಿ ಪ್ರಸಾರವ್ಯಾಪ್ತಿ ಹೊಂದಿದೆ. ನಮ್ಮ ಸಂಗ್ರಹದಲ್ಲಿರುವ ಪತ್ರಿಕೆಯಲ್ಲಿ (ಎಪ್ರಿಲ್ ೧, ೨೦೨೪) ಸುಧಾ ಮೂರ್ತಿಗೆ ರಾಜ್ಯಸಭಾ ಸದಸ್ಯತ್ವ ದೊರೆತ ಬಗ್ಗೆ ಲೇಖನವಿದೆ. ವೆರೈಟಿ ಎನ್ನುವ ಅಂಕಣದ ಅಡಿಯಲ್ಲಿ ಈ ದಿನದ ಮಹತ್ವ, ಮನದ ಹನಿ, ನಿತ್ಯ ಪಂಚಾಂಗ, ಗೊತ್ತಾ ವಿಷ್ಯಾ?, ವಿಡಂಬನೆ ಮೊದಲಾದ ವಿಷಯಗಳಿವೆ.
ಪತ್ರಿಕೆಯಲ್ಲಿ ಸ್ಥಳೀಯ ಸುದ್ದಿಗಳ ಜೊತೆ ರಾಷ್ಟ್ರೀಯ, ರಾಜ್ಯಮಟ್ಟದ ಸುದ್ದಿಗಳಿಗೂ ಪ್ರಾಶಸ್ತ್ಯ ನೀಡಲಾಗಿದೆ. ಪತ್ರಿಕೆಯ ಕಚೇರಿ ಚಿಕ್ಕಮಗಳೂರಿನ ಕೆ ಎಂ ರಸ್ತೆಯಲ್ಲಿದ್ದು, ಮುದ್ರಣ ಹಾಸನದ ಶ್ರೀ ಸಾಯಿ ಪ್ರಿಂಟರ್ಸ್ ಇಲ್ಲಿ ನಡೆಯುತ್ತದೆ. ಪತ್ರಿಕೆಯ ಬಿಡಿ ಪ್ರತಿ ಬೆಲೆ ರೂ ೨.೦೦ ಆಗಿದ್ದು, ಚಂದಾ ವಿವರಗಳ ಬಗ್ಗೆ ಮಾಹಿತಿಯಿಲ್ಲ. ಪತ್ರಿಕೆಯಲ್ಲಿ ಜಾಹೀರಾತುಗಳಿವೆ.