ಕನ್ನಡ ಪತ್ರಿಕಾ ಲೋಕ (ಭಾಗ ೧೯೭) - ಲೋಕಧ್ವನಿ

ಜನಶಕ್ತಿ ವಿಶ್ವಸ್ಥ ಮಂಡಳಿ, ಸಿರಸಿಯ ‘ಲೋಕಧ್ವನಿ’
ಕಳೆದ ನಾಲ್ಕು ದಶಕಗಳಿಂದ ಸಿರ್ಸಿಯಿಂದ ಪ್ರಕಟವಾಗುತ್ತಿರುವ ದಿನಪತ್ರಿಕೆಯೇ ‘ಲೋಕಧ್ವನಿ’ ಪತ್ರಿಕೆಯು ವಾರ್ತಾ ಪತ್ರಿಕೆಯ ಆಕಾರದಲ್ಲಿದ್ದು ೬ ಪುಟಗಳನ್ನಿಉ ಹೊಂದಿದೆ. ಸಂದರ್ಭಾನುಸಾರವಾಗಿ ಪುಟಗಳ ಸಂಖ್ಯೆ ಬದಲಾಗುವುದೂ ಇದೆ. ೨ ಪುಟಗಳು ವರ್ಣದಲ್ಲೂ, ಉಳಿದ ಪುಟಗಳು ಏಕವರ್ಣದಲ್ಲೂ ಮುದ್ರಣ.
ಲೋಕಧ್ವನಿ ಪತ್ರಿಕೆಯು ಉತ್ತರ ಕನ್ನಡ ಜಿಲ್ಲೆಯ ಪ್ರಥಮ ದಿನ ಪತ್ರಿಕೆ. ಗೋಪಾಲಕೃಷ್ಣ ಆನವಟ್ಟಿ ಇವರಿಂದ ಸ್ಥಾಪಿಸಲ್ಪಟ್ಟು, ಉಮೇಶ್ ಭಟ್ ಇವರಿಂದ ಮುನ್ನಡೆಸಲ್ಪಟ್ಟ ಪತ್ರಿಕೆ. ಪ್ರಸ್ತುತ ರಾಧಾಕೃಷ್ಣ ಭಡ್ತಿ ಇವರು ಸಂಪಾದಕರಾಗಿ ಮತ್ತು ಜಯಂತ್ ಜಿ ಭಟ್ ಇವರು ಮುದ್ರಕ ಹಾಗೂ ಪ್ರಕಾಶಕರಾಗಿ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ. ಪತ್ರಿಕೆಯು ಸಿರಸಿಯ ಲೋಕಧ್ವನಿ ಪ್ರೆಸ್ ನಲ್ಲಿ ಮುದ್ರಣಗೊಳ್ಳುತ್ತಿದೆ.
ಪತ್ರಿಕೆಯಲ್ಲಿ ಸಂಪಾದಕರ ಧ್ವನಿ, ಲೋಕಾಭಿರಾಮ, ಚಿಂತನ ಲೋಕ, ಪಂಚಾಂಗ ಲೋಕ, ಅಡಿಕೆ ಧಾರಣೆ ಮೊದಲಾದ ಮಾಹಿತಿ ಅಂಕಣಗಳು ಇವೆ. ಪತ್ರಿಕೆಗೆ ಶಶಿಧರ ಹಾಲಾಡಿ, ವಿಶ್ವೇಶ್ವರ ಭಟ್, ಪ್ರಜ್ಞಾ ಭಟ್ ಕಂಚೀಕೊಪ್ಪ, ಅಪರ್ಣಾ ಹೆಗಡೆ ಮೊದಲಾದವರು ಅಂಕಣ ಬರೆಯುತ್ತಾರೆ. ಪತ್ರಿಕೆಯ ಬಿಡಿ ಪ್ರತಿಯ ಬೆಲೆ ರೂ ೪.೦೦. ಚಂದಾದಾರಿಕೆಯ ಕುರಿತ ಯಾವುದೇ ಮಾಹಿತಿ ಇಲ್ಲ. ಪತ್ರಿಕೆಯಲ್ಲಿ ಜಾಹೀರಾತುಗಳಿಗೆ ಸ್ಥಾನವಿದೆ.