ಕನ್ನಡ ಪತ್ರಿಕಾ ಲೋಕ (ಭಾಗ ೧೯೮) - ಕೊಂಕಣವಾಹಿನಿ

ಕನ್ನಡ ಪತ್ರಿಕಾ ಲೋಕ (ಭಾಗ ೧೯೮) - ಕೊಂಕಣವಾಹಿನಿ

ರಿಯಲ್ ನ್ಯೂಸ್ ಮೀಡಿಯಾದವರ ‘ಕೊಂಕಣವಾಹಿನಿ’

ದೀಪಕ ಕುಮಾರ್ ಶೇಣ್ವಿ ಅವರ ಸಂಪಾದಕತ್ವದಲ್ಲಿ ಕಳೆದ ನಾಲ್ಕು ವರ್ಷಗಳಿಂದ ಹೊರಬರುತ್ತಿರುವ ದಿನ ಪತ್ರಿಕೆ ‘ಕೊಂಕಣವಾಹಿನಿ’. ಇದು ಸತ್ಯದ ಅನಾವರಣ ಎಂದು ಪತ್ರಿಕೆಯ ಶೀರ್ಷಿಕೆಯಲ್ಲಿ ಮುದ್ರಿಸಿದ್ದಾರೆ. ಪತ್ರಿಕೆಯು ವಾರ್ತಾಪತ್ರಿಕೆಯ ಆಕಾರದಲ್ಲಿದ್ದು ನಾಲ್ಕು ಪುಟಗಳನ್ನು ಹೊಂದಿದೆ. ಅದರಲ್ಲಿ ಎರಡು ಬಹುವರ್ಣ ಮತ್ತೆರಡು ಏಕವರ್ಣ. ಪತ್ರಿಕೆಯಲ್ಲಿ ಸ್ಥಳೀಯ ಸುದ್ದಿ ಸಮಾಚಾರಗಳಿಗೆ ಪ್ರಾಶಸ್ತ್ಯ ನೀಡಲಾಗಿದ್ದು, ಜೊತೆಗೆ ರಾಜ್ಯ, ರಾಷ್ಟ್ರ ಸಮಾಚಾರಗಳೂ ಇವೆ. 

ದೀಪಕ್ ಕುಮಾರ್ ಶೇಣ್ವಿ ಅವರು ಪತ್ರಿಕೆಯ ಪ್ರಧಾನ ಸಂಪಾದಕ, ಮಾಲೀಕ ಹಾಗೂ ಮುದ್ರಕರಾಗಿದ್ದಾರೆ. ಪತ್ರಿಕೆಯ ಕಚೇರಿ ಗ್ರೀನ್ ರಸ್ತೆ, ಕಾರವಾರದಲ್ಲಿದೆ. ಪತ್ರಿಕೆಯು ಹುಬ್ಬಳ್ಳಿಯ ಎಲಿಗೆಂಟ್ ಆಫ್ ಸೆಟ್ ಪ್ರಿಂಟರ್ಸ್ ಪ್ರೈ. ಲಿ. ಇಲ್ಲಿ ಮುದ್ರಣವಾಗುತ್ತಿದೆ. ಪತ್ರಿಕೆಯ ಬಿಡಿ ಪ್ರತಿಯ ಬೆಲೆ ರೂ ೩.೦೦ ಆಗಿದ್ದು, ಚಂದಾ ವಿವರದ ಬಗ್ಗೆ ಮಾಹಿತಿ ಕಂಡುಬರುತ್ತಿಲ್ಲ. ಪತ್ರಿಕೆಯಲ್ಲಿ ಜಾಹೀರಾತುಗಳಿಗೆ ಅವಕಾಶವಿದೆ.