ಕನ್ನಡ ಪತ್ರಿಕಾ ಲೋಕ (ಭಾಗ ೨೦೨) - ಹಾಲ್ಕುರಿಕೆ ಥಿಯೇಟರ್ ಮಿರರ್

ಹಾಲ್ಕುರಿಕೆ ಶಿವಶಂಕರ್ ಅವರ "ಹಾಲ್ಕುರಿಕೆ ಥಿಯೇಟರ್ ಮಿರರ್"
ರಂಗಭೂಮಿ, ಸಾಹಿತ್ಯ - ಸಂಸ್ಕೃತಿ ಸಹಿತ ವಿವಿಧ ಕ್ಷೇತ್ರಗಳಲ್ಲಿ ಕೊಡುಗೆ ನೋಡಿದ ಬೆಂಗಳೂರು ಕುಮಾರಸ್ವಾಮಿ ಲೇಔಟ್ ಟೀಚರ್ಸ್ ಕಾಲೋನಿಯ ಹಾಲ್ಕುರಿಕೆ ಶಿವಶಂಕರ್ ಅವರು ಪ್ರಕಟಿಸುತ್ತಿದ್ದ ಮಾಸಪತ್ರಿಕೆ "ಹಾಲ್ಕುರಿಕೆ ಥಿಯೇಟರ್ ಮಿರರ್".
ರಂಗಭೂಮಿ, ಸಾಹಿತ್ಯ ಮತ್ತು ಕಲೆಗೆ ಬಂಧಿಸಿದ ಬರಹಗಳಿಗೆ ಮೊದಲ ಆದ್ಯತೆ ನೀಡುತ್ತ ಐದು ವರ್ಷಗಳ ಕಾಲ ಪ್ರಕಟವಾಗುತ್ತಿದ್ದ ಪತ್ರಿಕೆ ಕೊನೆಗೆ ಸ್ಥಗಿತಗೊಂಡಿತು. ಹಾಲ್ಕುರಿಕೆ ಶಿವಶಂಕರ್ ಅವರು ಈಗ ಇಲ್ಲ. 2010ರ ಸೆಪ್ಟೆಂಬರ್ ತಿಂಗಳ ಸಂಚಿಕೆಯೊಂದಿಗೆ ಪತ್ರಿಕೆ ಆರಂಭವಾಗಿತ್ತು. ಸಂಪಾದಕರು, ಪ್ರಕಾಶಕರು ಮತ್ತು ಮುದ್ರಕರು ಹಾಲ್ಕುರಿಕೆ ಶಿವಶಂಕರ್ ಆಗಿದ್ದರು. ರಾಮಕೃಷ್ಣ ಹುಲಿಕುಂಟೆ ಹಾಗೂ ಅಬದುಲ್ ಖಾಲಕ್ ಉಪಸಂಪಾದಕರಾಗಿದ್ದರು. ಶೀಲಾ ಸುಂಟಿಕೊಪ್ಪ ಪತ್ರಿಕೆಯ ಸಂಚಾಲಕರಾಗಿದ್ದರು. ಚಂದ್ರಶೇಖರ್ ಅತ್ತಿಬೆಲೆ ಪತ್ರಿಕೆಯ ವಿನ್ಯಾಸಕರಾಗಿದ್ದರು.
ರಂಗನಾಥ್ ಎ., ಎಂ. ಎಸ್. ಎನ್. ಬಾಬು, ಸಿದ್ದಾಪುರ ಮಂಜು, ಕೆ. ಕಾಂತರಾಜ್, ಶಾಂತಾ ಆರ್. ಕಂಪಾರಹಳ್ಳಿ, ಮಾಸ್ತಿ ಮಂಜು ಹಾಗೂ ಬಿ. ಆರ್. ಗೋಪಿನಾಥ್ ಪತ್ರಿಕಾ ಬಳಗದಲ್ಲಿದ್ದರು.
~ ಶ್ರೀರಾಮ ದಿವಾಣ