ಕನ್ನಡ ಪತ್ರಿಕಾ ಲೋಕ (ಭಾಗ ೨೦೩) - ಶ್ರೀ ಕಲ್ಕಿ ಕೃಪಾ ದರ್ಶನ

ಶ್ರೀ ಕಲ್ಕಿ ಕೇಂದ್ರದ "ಶ್ರೀ ಕಲ್ಕಿ ಕೃಪಾ ದರ್ಶನ"
ಬೆಂಗಳೂರು ಜಾಲಹಳ್ಳಿ ಎಂಇಎಸ್ ರಿಂಗ್ ರೋಡ್ ನಲ್ಲಿರುವ ಶ್ರೇಯಾ ಗ್ರಾಫಿಕ್ಸ್ ನಲ್ಲಿ ಮುದ್ರಣವಾಗುವ ಮಾಸಪತ್ರಿಕೆಯಾಗಿದೆ "ಶ್ರೀ ಕಲ್ಕಿ ಕೃಪಾ ದರ್ಶನ". ಶ್ರೀ ಕಲ್ಕಿ ಕೇಂದ್ರವು ಪ್ರಕಟಿಸುವ ಈ ಮಾಸಪತ್ರಿಕೆಯ ಸಂಪಾದಕರ ಸಹಿತ ಇತರ ಯಾವುದೇ ಮಾಹಿತಿಗಳೂ ಪತ್ರಿಕೆಯಲ್ಲಿಲ್ಲ.
2001ರಿಂದ ಪ್ರಕಟವಾಗುತ್ತಿರುವ ಶ್ರೀ ಕಲ್ಕಿ ಕೃಪಾ ದರ್ಶನದಲ್ಲಿ ಶ್ರೀ ಭಗವಾನರ ಭಾಷ್ಯ, ಇಂದಿನ ಅವಶ್ಯಕತೆ, ದಿವ್ಯ ಮಂಗಳ ದರ್ಶನ, ಸ್ತ್ರೀ ಶಕ್ತಿ, ಗುರು ಪೂರ್ಣಿಮೆ, ಯುವಚೇತನ, ಭಕ್ತಿ ಸಂಕೀರ್ತನೆ, ಶ್ರೀ ಅಮ್ಮ - ಭಗವಾನ್ ಅನುಗ್ರಹ, ಅಂತರ್ಯಾಮಿನ್, ಸ್ಥಳೀಯ ಕಾರ್ಯಕ್ರಮಗಳು ಮತ್ತು ವಾಚಕರ ವೇದಿಕೆ ಎಂಬ ಖಾಯಂ ಅಂಕಣಗಳ ಸಹಿತ ಇತರ ಅದ್ಯಾತ್ಮಿಕ ಬರಹಗಳಿವೆ.
~ ಶ್ರೀರಾಮ ದಿವಾಣ