ಕನ್ನಡ ಪತ್ರಿಕಾ ಲೋಕ (ಭಾಗ ೨೦೫) - ತುತ್ತುಗಳು

ಕನ್ನಡ ಪತ್ರಿಕಾ ಲೋಕ (ಭಾಗ ೨೦೫) - ತುತ್ತುಗಳು

ಫ್ರ್ಯಾಂಕ್ಲೀನ್ ಜಯರಾಜ್ ಅವರ "ತುತ್ತುಗಳು"

ಉಡುಪಿ ಮಿಷನ್ ಕಾಂಪೌಂಡ್ ಶಾಂತ ಸದನದ ಕೆ. ಫ್ರ್ಯಾಂಕ್ಲೀನ್ ಜಯರಾಜ್ ಅವರು ಪ್ರಧಾನ ಸಂಪಾದಕರು, ಪ್ರಕಾಶಕರು ಮತ್ತು ಮುದ್ರಕರಾಗಿರುವ ಮಾಸಪತ್ರಿಕೆಯಾಗಿತ್ತು, "ತುತ್ತುಗಳು". "ಬಾನುಲಿ ಅಣ್ಣಯ್ಯ"ರೆಂದೇ ಖ್ಯಾತರಾಗಿರುವ ಫ್ರ್ಯಾಂಕ್ಲೀನ್ ಜಯರಾಜ್ ರವರು ಮೈಸೋಲ್ ಟ್ರಸ್ಟ್ ಮೂಲಕ ಪತ್ರಿಕೆಯನ್ನು ಪ್ರಕಟಿಸುತ್ತಿದ್ದರು. ಏಸುಕ್ರಿಸ್ತರ ಜೀವನಾಧಾರಿತ ಮೌಲ್ಯಯುತ ಕೌಟುಂಬಿಕ ಮಾಸಪತ್ರಿಕೆಯಾಗಿತ್ತು ತುತ್ತುಗಳು.

2006ರಲ್ಲಿ ಆರಂಭವಾದ ತುತ್ತುಗಳು ಪತ್ರಿಕೆಗೆ ಶ್ರೀಮತಿ ಆಶಾ ಫ್ರ್ಯಾಂಕ್ಲೀನ್ ಸಂಪಾದಕರಾಗಿ ಹಾಗೂ ಸುನಯನಾ ವಾಲ್ಟರ್ಸ್ ಅವರು ಸಹಸಂಪಾದಕರೂ ಆಗಿದ್ದರು.

52 ಪುಟಗಳ ಪುಸ್ತಕ ಆಕಾರದ "ತುತ್ತುಗಳು" ಪತ್ರಿಕೆಯಲ್ಲಿ ಇ. ಡಿ. ಚೆಲ್ಲಾದುರೈ, ಎ. ವೇದರತ್ನ ಭದ್ರಾವತಿ, ಗದಗದ ಪಾ | ಸ್ಟೀವನ್ ಬನ್ನಾ, ಪ್ರೊಫೆಸರ್ ಸಿಗಾ ಆರ್ಲೆಸ್, ಉಡುಪಿಯ ಜೋಸ್ಸಿ ಗೋಜರ್, ಕೋಲಾರದ ಜಯಶೀಲಾ ಸನತ್ ಕುಮಾರ್, ಮೈಸೂರಿನ ವಿಶ್ವಾನಂದ, ಆಡಿನಾ ಮುಂತಾದವರ ಬರಹಗಳು ಪ್ರಕಟವಾಗುತ್ತಿತ್ತು. 2021ರ ವರೆಗೂ ಪ್ರಕಟಗೊಳ್ಳುತ್ತಾ ಬಂದ "ತುತ್ತುಗಳು", ಕೊರೋನಾ ಲಾಕ್ ಡೌನ್ ಕಾರಣ ಸ್ಥಗಿತಗೊಂಡಿತು.

~ ಶ್ರೀರಾಮ ದಿವಾಣ